ನಟ ಆಮಿರ್ ಖಾನ್ ಅವರು ಸುದ್ದಿಯಲ್ಲಿದ್ದಾರೆ. 59ನೇ ವಯಸ್ಸಿನಲ್ಲಿ ಅವರಿಗೆ ಮತ್ತೆ ಪ್ರೀತಿ ಮೂಡಿದೆ ಎಂದು ಹೇಳಲಾಗುತ್ತಿದೆ. ಈ ಬಾರಿ ಅವರು ಚಿತ್ರರಂಗದಿಂದ ದೂರ ಇರುವ ಹುಡುಗಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಾರಿ ಅವರು ಸುತ್ತಾಡುತ್ತಿರುವ ಹುಡುಗಿ ಬೆಂಗಳೂರಿನವರು ಎನ್ನುವುದು ವಿಶೇಷ. ಅವರ ಹೆಸರು ಗೌರಿ ಎಂದು ಹೇಳಲಾಗುತ್ತಿದೆ. ಇಂಗ್ಲಿಷ್ ಸುದ್ದಿವಾಹಿನಿಗಳು ಈ ಬಗ್ಗೆ ವರದಿ ಮಾಡಿವೆ.
ಆಮಿರ್ ಖಾನ್ ಬಾಲಿವುಡ್ನ ಯಶಸ್ವಿ ನಟರಲ್ಲಿ ಒಬ್ಬರು. ನಿರ್ಮಾಪಕನಾಗಿಯೂ ಅವರಿಗೆ ಯಶಸ್ಸು ಸಿಕ್ಕಿದೆ. ಆದರೆ, ಅವರು ಸಂಸಾರದಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಅವರ ಎರಡು ವಿವಾಹಗಳು ಈಗಾಗಲೇ ಮುರಿದು ಬಿದ್ದಿವೆ. ಈಗ ಆಮಿರ್ ಅವರು 59ನೇ ವಯಸ್ಸಿನಲ್ಲಿ ಮೂರನೇ ಮದುವೆಗೆ ರೆಡಿ ಆದರಾ ಎನ್ನುವ ಪ್ರಶ್ನೆ ಮೂಡುವಂತೆ ಆಗಿದೆ.
ಆಮಿರ್ ಸುತ್ತಾಡುತ್ತಿರುವ ಹುಡುಗಿಯ ಹೆಸರು ಗೌರಿ ಎಂದು. ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ತಮ್ಮ ಕುಟುಂಬಕ್ಕೆ ಗೌರಿಯನ್ನು ಪರಿಚಯಿಸಿದ್ದಾರೆ. ಇವರಿಗೂ ಬಾಲಿವುಡ್ಗೂ ಯಾವುದೇ ನಂಟಿಲ್ಲ. ಹೀಗಾಗಿ, ಇಬ್ಬರ ಮಧ್ಯೆ ಪರಿಚಯ ಬೆಳೆದಿದ್ದು ಹೇಗೆ ಎನ್ನುವ ಪ್ರಶ್ನೆ ಮೂಡಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ.
ಹೊಸ ಸಂಬಂಧದ ಬಗ್ಗೆ ಆಮಿರ್ ಖಾನ್ ಅವರು ಎಲ್ಲಿಯೂ ಮಾತನಾಡುತ್ತಿಲ್ಲ. ಅವರು ಈ ಬಗ್ಗೆ ಮೌನವಾಗಿರುವಂತೆ ಆಪ್ತರಿಗೂ ಸೂಚಿಸಿದ್ದಾರಂತೆ. ಇದು ನಿಜವೇ ಆದಲ್ಲಿ ಅವರ ಜೀವನದಲ್ಲಿ ಮತ್ತೊಂದು ಅಧ್ಯಾಯ ಆರಂಭ ಆಗಲಿದ್ದು, ಈ ಬಗ್ಗೆ ಅಭಿಮಾನಿಗಳಿಗೆ ಸರ್ಪ್ರೈಸ್ ಆಗೋದು ಗ್ಯಾರಂಟಿ.
ಇದನ್ನೂ ಓದಿ: ಆಮಿರ್ ಖಾನ್ ಮಗನ ಸಿನಿಮಾಗೆ ಸಲ್ಮಾನ್, ಶಾರುಖ್ ಬೆಂಬಲ
ಆಮಿರ್ ಖಾನ್ ಅವರು 1986ರಲ್ಲಿ ರೀನಾ ದತ್ತ ಅವರನ್ನು ವಿವಾಹ ಆದರು. ರೀನಾ ಚಿತ್ರದ ನಿರ್ಮಾಪಕಿ. ಈ ದಂಪತಿಗೆ ಜುನೈದ್ ಖಾನ್ ಹಾಗೂ ಇರಾ ಖಾನ್ ಹೆಸರಿನ ಮಕ್ಕಳು ಇದ್ದಾರೆ. ಇವರು 2002ರಲ್ಲಿ ವಿಚ್ಛೇದನ ಪಡೆದರು. 2005ರಲ್ಲಿ ನಿರ್ದೇಶಕಿ ಕಿರಣ್ ರಾವ್ ಅವರನ್ನು ಮದುವೆ ಆದರು. 2021ರಲ್ಲಿ ಇಬ್ಬರೂ ಬೇರೆ ಆದರು. ಆದಾಗ್ಯೂ ಇಬ್ಬರು ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ. ಹೊಸ ಪ್ರೀತಿಯ ವಿಚಾರದ ಬಗ್ಗೆ ಅವರಿಗೆ ತಿಳಿದಿದೆಯೇ ಎನ್ನುವ ಕುತೂಹಲ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.