ಅಭಿಷೇಕ್ ಬಚ್ಚನ್ ಅವರು ಇತ್ತೀಚೆಗೆ ದೊಡ್ಡ ಹಿಟ್ ನೀಡಿಲ್ಲ. ಈಗಿನ ವರ್ಷಗಳಲ್ಲಿ ಹಿರೋ ಆಗಿ ಅವರು ಕಾಣಿಸಿಕೊಂಡಿದ್ದು ತುಂಬಾನೇ ಕಡಿಮೆ. ಅವರು ಮುಖ್ಯಭೂಮಿಕೆ ನಿರ್ವಹಿಸಿದ್ದ ‘ಐ ವಾಂಟ್ ಟು ಟಾಕ್’ ಸಿನಿಮಾ ಇತ್ತೀಚೆಗೆ ರಿಲೀಸ್ ಆಯಿತು. ಈ ಸಿನಿಮಾ ಅಭಿಷೇಕ್ ಬಚ್ಚನ್ ವೃತ್ತಿ ಜೀವನದಲ್ಲಿ ಪ್ರಯೋಗಾತ್ಮಕ ಸಿನಿಮಾ ಆಗಿತ್ತು. ಈ ಸಿನಿಮಾ ರಿಲೀಸ್ ಆಗಿ ನಾಲ್ಕು ದಿನ ಕಳೆದರೂ ಗಳಿಕೆ ಒಂದೂವರೆ ಕೋಟಿ ರೂಪಾಯಿ ದಾಟಿಲ್ಲ. ಇದು ಅಭಿಷೇಕ್ ಬಚ್ಚನ್ ಅವರ ವೃತ್ತಿ ಜೀವನದ ಕೊನೆಯ ದಿನಗಳು ಸಮೀಪಿಸಿತೇ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ.
‘ಐ ವಾಂಟ್ ಟು ಟಾಕ್’ ಸಿನಿಮಾಗೆ ದೊಡ್ಡ ಮಟ್ಟದ ಪ್ರಚಾರ ನೀಡಿಲ್ಲ. ಕೇವಲ ಭಾವಾನಾತ್ಮಕ ಹಾಗೂ ಕೌಟುಂಬಿಕ ವಿಚಾರಗಳನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಈ ಕಾರಣಕ್ಕೆ ಚಿತ್ರ ಜನರಿಗೆ ಹೆಚ್ಚು ಇಷ್ಟ ಆಗಿಲ್ಲ. ಈ ಸಿನಿಮಾ ನೋಡಿದವರು ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡಿದರೂ ಜನರು ಸಿನಿಮಾನ ಮೆಚ್ಚಿಕೊಳ್ಳುತ್ತಿಲ್ಲ. ಇದು ಬಿಗ್ ಬಜೆಟ್ ಸಿನಿಮಾ ಆಗಿದ್ದು, ನಿರ್ಮಾಪಕರಿಗೆ ಹೊರ ಆಗಿದೆ.
‘ಐ ವಾಂಟ್ ಟು ಟಾಕ್’ ಸಿನಿಮಾ ಮೊದಲ ದಿನ (ನವೆಂಬರ್ 22) 25 ಲಕ್ಷ ರೂಪಾಯಿ, ಎರಡನೇ ದಿನ 55 ಲಕ್ಷ ರೂಪಾಯಿ, ಮೂರನೇ ದಿನ 53 ಲಕ್ಷ ರೂಪಾಯಿ ಗಳಿಸಿದೆ. ನಾಲ್ಕನೇ ದಿನ ಅಂದರೆ ಸೋಮವಾರ (ನವೆಂಬರ್ 26) ಈ ಚಿತ್ರ ಕೇವಲ 19 ಲಕ್ಷ ರೂಪಾಯಿ ಗಳಿಸಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 1.46 ಕೋಟಿ ರೂಪಾಯಿ ಗಳಿಕೆ ಮಾಡಿದೆ.
ಇದನ್ನೂ ಓದಿ: ಕೊನೆಗೂ ಐಶ್ವರ್ಯಾ ರೈಗೆ ಓಪನ್ ಆಗಿ ಧನ್ಯವಾದ ಹೇಳಿದ ಅಭಿಷೇಕ್; ಕಾರಣವೇನು?
‘ಐ ವಾಂಟ್ ಟು ಟಾಕ್’ ಸಿನಿಮಾದಲ್ಲಿ ಅಭಿಷೇಕ್ ಬಚ್ಚನ್ ಜೊತೆ ಅಹಿಲ್ಯಾ ಬಮ್ರೂ ಕೂಡ ನಟಿಸಿದ್ದಾರೆ. ಅಭಿಷೇಕ್ ಬಚ್ಚನ್ ವೃತ್ತಿ ಜೀವನದಲ್ಲಿ ಅತಿ ಕಡಿಮೆ ಗಳಿಕೆ ಮಾಡಿದ ಸಿನಿಮಾ ಇದಾಗಿದೆ. ‘ಐ ವಾಂಟ್ ಟು ಟಾಕ್’ ಸಿನಿಮಾದ ಬಜೆಟ್ 40 ಕೋಟಿ ರೂಪಾಯಿ ದಾಟಿದೆ ಎನ್ನಲಾಗಿದೆ. ಗಳಿಕೆ ಮಾತ್ರ ಲಕ್ಷಗಳಲ್ಲಿ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.