ಅಮಿತಾಬ್ ಬಳಿಕ ಪ್ರಭಾಸ್ ಜೊತೆ ನಟಿಸಲಿದ್ದಾರೆ ಅಭಿಷೇಕ್ ಬಚ್ಚನ್

Abhishek Bachchan: ಬಾಲಿವುಡ್​​ನ ಸಂಜಯ್ ದತ್, ಸೈಫ್ ಅಲಿ ಖಾನ್, ಅಮಿತಾಬ್ ಬಚ್ಚನ್, ಇಮ್ರಾನ್ ಹಶ್ಮಿ, ಆಮಿರ್ ಖಾನ್ ಸಹ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಇದೇ ಸಾಲಿಗೆ ಮತ್ತೊಬ್ಬ ಬಾಲಿವುಡ್ ಸ್ಟಾರ್ ಸೇರಿಕೊಳ್ಳುತ್ತಿದ್ದಾರೆ. ಅದುವೇ ಅಭಿಷೇಕ್ ಬಚ್ಚನ್. ಅಮಿತಾಬ್ ಬಚ್ಚನ್ ಪುತ್ರ ಅಭಿಷೇಕ್ ಬಚ್ಚನ್ ಮೊದಲ ಬಾರಿಗೆ ದಕ್ಷಿಣ ಭಾರತದ ಸಿನಿಮಾನಲ್ಲಿ ನಟಿಸಲು ಮುಂದಾಗಿದ್ದಾರೆ.

ಅಮಿತಾಬ್ ಬಳಿಕ ಪ್ರಭಾಸ್ ಜೊತೆ ನಟಿಸಲಿದ್ದಾರೆ ಅಭಿಷೇಕ್ ಬಚ್ಚನ್
Prabhas Abhishek

Updated on: Sep 18, 2025 | 6:02 PM

ಬಾಲಿವುಡ್ ಸ್ಟಾರ್ ನಟರು ಇತ್ತೀಚೆಗೆ ದಕ್ಷಿಣ ಭಾರತ ಚಿತ್ರರಂಗದತ್ತ ಬರುತ್ತಿದ್ದಾರೆ. ಸಂಜಯ್ ದತ್, ಸೈಫ್ ಅಲಿ ಖಾನ್, ಅಮಿತಾಬ್ ಬಚ್ಚನ್, ಇಮ್ರಾನ್ ಹಶ್ಮಿ, ಆಮಿರ್ ಖಾನ್ ಸಹ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಇದೇ ಸಾಲಿಗೆ ಮತ್ತೊಬ್ಬ ಬಾಲಿವುಡ್ ಸ್ಟಾರ್ ಸೇರಿಕೊಳ್ಳುತ್ತಿದ್ದಾರೆ. ಅದುವೇ ಅಭಿಷೇಕ್ ಬಚ್ಚನ್. ಅಮಿತಾಬ್ ಬಚ್ಚನ್ ಪುತ್ರ ಅಭಿಷೇಕ್ ಬಚ್ಚನ್ ಮೊದಲ ಬಾರಿಗೆ ದಕ್ಷಿಣ ಭಾರತದ ಸಿನಿಮಾನಲ್ಲಿ ನಟಿಸಲು ಮುಂದಾಗಿದ್ದಾರೆ.

ಅಮಿತಾಬ್ ಬಚ್ಚನ್ ಅವರು ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ಪ್ರಭಾಸ್ ನಟಿಸಿರುವ ‘ಕಲ್ಕಿ 2898 ಎಡಿ’ ಸಿನಿಮಾನಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಸೀಕ್ವೆಲ್​​​ನಲ್ಲಿ ಸಹ ಅವರು ನಟಿಸಲಿದ್ದಾರೆ. ಇದು ಹೀಗಿರುವಾಗ ಪ್ರಭಾಸ್ ಅವರ ನಟನೆಯ ಹೊಸ ಸಿನಿಮಾನಲ್ಲಿ ಅಭಿಷೇಕ್ ಬಚ್ಚನ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಪ್ರಭಾಸ್ ‘ಫೌಜಿ’ ಹೆಸರಿನ ಸಿನಿಮಾನಲ್ಲಿ ನಟಿಸುತ್ತಿದ್ದು, ಈ ಸಿನಿಮಾ ಸ್ವಾತಂತ್ರ್ಯ ಪೂರ್ವದ ಪ್ರೇಮಕತೆಯನ್ನು ಒಳಗೊಂಡಿದೆ. ಬ್ಲಾಕ್ ಬಸ್ಟರ್ ಸಿನಿಮಾ ‘ಸೀತಾ-ರಾಮಂ’ ನಿರ್ದೇಶಿಸಿರುವ ರಘು ಹನುಪುಡಿ ನಿರ್ದೇಶನ ಮಾಡುತ್ತಿದ್ದು, ಈ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ಅಭಿಷೇಕ್ ಬಚ್ಚನ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಅಭಿಷೇಕ್ ಬಚ್ಚನ್ ನಟಿಸುತ್ತಿರುವ ಪಾತ್ರ ಒಂದು ರೀತಿ ಅತಿಥಿ ಪಾತ್ರದ ರೀತಿ ಇರಲಿದೆಯಂತೆ.

ಇದನ್ನೂ ಓದಿ:ಪ್ರಭಾಸ್​​ಗೆ ಬೇಕಾಯ್ತು ರಿಷಬ್ ಶೆಟ್ಟಿಯ ಸಹಾಯ, ‘ಕಾಂತಾರ’ದ ಜೊತೆಗೆ ‘ರಾಜಾ ಸಾಬ್’

ಅಭಿಷೇಕ್ ಬಚ್ಚನ್ ಜೊತೆಗೆ ಈಗಾಗಲೇ ‘ಫೌಜಿ’ ಚಿತ್ರತಂಡ ಮಾತುಕತೆ ಆಡಿದ್ದು, ಅಭಿಷೇಕ್ ಬಚ್ಚನ್ ಅವರಿಗೂ ಕತೆ ಇಷ್ಟವಾಗಿ ಸಿನಿಮಾ ಒಪ್ಪಿಕೊಂಡಿದ್ದಾರೆ. ಆದಷ್ಟು ಶೀಘ್ರವೇ ಅಭಿಷೇಕ್ ಬಚ್ಚನ್ ಅವರು ‘ಫೌಜಿ’ ಚಿತ್ರತಂಡ ಸೇರಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಅಭಿಷೇಕ್ ಬಚ್ಚನ್ ಅವರು ಪ್ರಸ್ತುತ ಶಾರುಖ್ ಖಾನ್ ನಟನೆಯ ‘ಕಿಂಗ್’ ಮತ್ತು ರಿತೇಶ್ ದೇಶ್​​ಮುಖ್ ನಿರ್ಮಿಸಿ, ನಿರ್ದೇಶನ ಮಾಡುತ್ತಿರುವ ‘ರಾಜಾ ಶಿವಾಜಿ’ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ‘ಫೌಜಿ’ ಅಭಿಷೇಕ್ ಬಚ್ಚನ್ ನಟಿಸಲಿರುವ ಮೊದಲ ದಕ್ಷಿಣ ಭಾರತದ ಸಿನಿಮಾ ಆಗಿರಲಿದೆ.

ಇನ್ನು ಪ್ರಭಾಸ್ ಹಲವಾರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ದಿ ರಾಜಾ ಸಾಬ್’ ಸಿನಿಮಾ ಮುಂದಿನ ವರ್ಷ ಸಂಕ್ರಾಂತಿಗೆ ಬಿಡುಗಡೆ ಆಗಲಿದೆ. ‘ಫೌಜಿ’ ಸಿನಿಮಾ ಸಹ ಮುಂದಿನ ವರ್ಷವೇ ತೆರೆಗೆ ಬರಲಿದೆ. ಇದೇ ವರ್ಷ ನವೆಂಬರ್​​​ ತಿಂಗಳಲ್ಲಿ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಸ್ಪಿರಿಟ್’ ಸಿನಿಮಾದ ಚಿತ್ರೀಕರಣ ಆರಂಭಿಸಲಿದ್ದಾರೆ. ಅದಾದ ಬಳಿಕ ‘ಕಲ್ಕಿ 2898 ಎಡಿ’ ಅದು ಮುಗಿದ ಬಳಿಕ ‘ಸಲಾರ್ 2’ ಸಿನಿಮಾಗಳಲ್ಲಿ ಪ್ರಭಾಸ್ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ