ಪುರುಷರಿಗೆ ಹೋಲಿಸಿದರೆ ಸಿನಿಮಾ ನಿರ್ದೇಶನ ಮಾಡುವ ಮಹಿಳೆಯರ ಸಂಖ್ಯೆ ಕಡಿಮೆ. ಅಲ್ಲೊಂದು ಇಲ್ಲೊಂದು ಪ್ರಯತ್ನಗಳು ನಡೆಯುತ್ತವೆಯಾದರೂ ಗಣನೀಯ ಪ್ರಮಾಣದಲ್ಲಿ ನಿರ್ದೇಶಕಿಯರು ಇನ್ನೂ ಬರಬೇಕಿದೆ. ಈ ನಡುವೆ ನಟಿ ದಿಶಾ ಪಟಾಣಿ (Disha Patani) ಅವರು ನಿರ್ದೇಶನದತ್ತ ಆಸಕ್ತಿ ತೋರಿಸಿದ್ದಾರೆ. ಇಷ್ಟು ದಿನ ಹಾಟ್ ಆಗಿ ಕಾಣಿಸಿಕೊಂಡು ಪಡ್ಡೆಗಳ ನಿದ್ದೆ ಕದಿಯುತ್ತಿದ್ದ ಅವರು ಈಗ ನಿರ್ದೇಶಕರ ಚೇರ್ನಲ್ಲಿ ಕುಳಿತಿದ್ದಾರೆ. ಅಂದಹಾಗೆ, ದಿಶಾ ಪಟಾಣಿ ಅವರು ನಿರ್ದೇಶನ ಮಾಡಿರುವುದು ಸಿನಿಮಾಗೆ ಅಲ್ಲ. ಬದಲಿಗೆ, ಒಂದು ಮ್ಯೂಸಿಕ್ ವಿಡಿಯೋಗೆ (Music Video) ಅವರು ಡೈರೆಕ್ಷನ್ ಮಾಡಿದ್ದಾರೆ. ಅದರ ಪೋಸ್ಟರ್ ಬಿಡುಗಡೆ ಆಗಿದೆ. ‘ಕ್ಯೂ ಕರೂ ಫಿಕರ್’ (Kyun Karu Fikar) ಎಂಬ ಶೀರ್ಷಿಕೆಯಲ್ಲಿ ಈ ಹಾಡು ಮೂಡಿಬಂದಿದೆ. ‘ಚಿಂತೆ ಯಾಕೆ ಮಾಡಲಿ’ ಎಂಬುದು ಈ ಟೈಟಲ್ನ ಅರ್ಥ.
‘ಕ್ಯೂ ಕರೂ ಫಿಕರ್’ ಹಾಡಿಗೆ ನಿರ್ದೇಶನ ಮಾಡುವುದರ ಜೊತೆಗೆ ಮುಖ್ಯ ಪಾತ್ರದಲ್ಲೂ ದಿಶಾ ಪಟಾಣಿ ಅವರೇ ಕಾಣಿಸಿಕೊಂಡಿದ್ದಾರೆ. ಸಮುದ್ರದ ಅಲೆಗಳ ನಡುವೆ ಕುಳಿತು ಖುಷಿ ಖುಷಿಯಾಗಿ ಪೋಸ್ ನೀಡಿರುವ ಅವರ ಪೋಸ್ಟರ್ ಗಮನ ಸೆಳೆಯುತ್ತಿದೆ. ಆಗಸ್ಟ್ 16ರಂದು ಈ ಹಾಡಿನ ಟೀಸರ್ ಬಿಡುಗಡೆ ಆಗಲಿದೆ. ವೈಭವ್ ಪಾನಿ ಅವರು ಈ ಹಾಡಿಗೆ ಸಂಗೀತ ನೀಡಿದ್ದಾರೆ. ವಾಯು ಬರೆದ ಸಾಹಿತ್ಯಕ್ಕೆ ಗಾಯಕಿ ನಿಖಿತಾ ಗಾಂಧಿ ಧ್ವನಿ ನೀಡಿದ್ದಾರೆ. ‘ಕ್ಯೂ ಕರೂ ಫಿಕರ್’ ಸಾಂಗ್ ಹೇಗೆ ಮೂಡಿಬಂದಿರಬಹುದು ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
If you let go of the things you can’t control, it will probably set you free 🦋
🫶🏻‘Kyun Karun Fikar’ 🫶🏻
Sharing a sneak peek to our special project on 16th August 2023 on #PlayDMF official YouTube channel ✨ @NikhitaGandhi @AnshulGarg80 #VaibhavPani @purevayu #DimpleKotecha… pic.twitter.com/azL4lTuJuR— Disha Patani (@DishPatani) August 14, 2023
ಈ ಮೊದಲು ದಿಶಾ ಪಟಾಣಿ ಅವರು ನಟ ಟೈಗರ್ ಶ್ರಾಫ್ ಜೊತೆ ರಿಲೇಷನ್ಶಿಪ್ನಲ್ಲಿ ಇದ್ದರು. ಆದರೆ ಇತ್ತೀಚೆಗೆ ಅವರು ಬ್ರೇಕಪ್ ಮಾಡಿಕೊಂಡಿದ್ದಾರೆ. ಟೈಗರ್ ಶ್ರಾಫ್ ಬದಲು ಬೇರೆ ಪ್ರಿಯಕರನ ಸಹವಾಸ ಮಾಡಿದ್ದಾರೆ. ‘ಕ್ಯೂ ಕರೂ ಫಿಕರ್’ ಹಾಡಿನಲ್ಲಿ ಅವರು ಪ್ರೀತಿ ಮತ್ತು ಬ್ರೇಕಪ್ ಕುರಿತಾಗಿಯೇ ಹೇಳಲಿದ್ದಾರಾ ಎಂಬ ಅನುಮಾನ ಅನೇಕರಿಗಿದೆ. ಟೀಸರ್ ಹೊರಬಂದ ಬಳಿಕ ಈ ಬಗ್ಗೆ ಹೆಚ್ಚಿನ ಸ್ಪಷ್ಟತೆ ಸಿಗಲಿದೆ.
ಇದನ್ನೂ ಓದಿ: ‘ನಾನು ಸಿಂಗಲ್’ ಎಂದು ದಿಶಾ ಪಟಾಣಿ ಜೊತೆಗಿನ ಬ್ರೇಕಪ್ ವಿಚಾರ ಒಪ್ಪಿಕೊಂಡ ನಟ ಟೈಗರ್ ಶ್ರಾಫ್
ನಟಿಯಾಗಿ ದಿಶಾ ಪಟಾಣಿ ಅವರಿಗೆ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದೆ. ಹಲವು ಸಿನಿಮಾಗಳಲ್ಲಿ ಅವರು ಅಭಿನಯಿಸುತ್ತಿದ್ದಾರೆ. ಬಾಲಿವುಡ್ ಮಾತ್ರವಲ್ಲದೇ ದಕ್ಷಿಣ ಭಾರತದಲ್ಲೂ ಅವರು ಖ್ಯಾತಿ ಗಳಿಸಿದ್ದಾರೆ. ಪ್ರಭಾಸ್ ಅಭಿನಯದ ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ದಿಶಾ ಪಟಾಣಿ ಅವರಿಗೆ ಒಂದು ಮುಖ್ಯ ಪಾತ್ರ ಇದೆ. ಸೂರ್ಯ ನಟಿಸುತ್ತಿರುವ ಬಹುನಿರೀಕ್ಷಿತ ‘ಕಂಗುವ’ ಸಿನಿಮಾಗೂ ದಿಶಾ ಪಟಾಣಿ ನಾಯಕಿ. ಹಿಂದಿಯ ‘ಯೋಧ’ ಸಿನಿಮಾದಲ್ಲೂ ಅವರು ನಟಿಸಿದ್ದು, ಡಿಸೆಂಬರ್ನಲ್ಲಿ ಆ ಸಿನಿಮಾ ಬಿಡುಗಡೆ ಆಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.