ತಾಯಿಯಾದ ಬಳಿಕ ದೇಹದ ತೂಕ ಹೆಚ್ಚಿದ್ದಕ್ಕೆ ಸ್ವರಾ ಭಾಸ್ಕರ್​​ಗೆ ಬಾಡಿ ಶೇಮಿಂಗ್​

ಬಾಲಿವುಡ್​ ನಟಿ ಸ್ವರಾ ಭಾಸ್ಕರ್​ ಅವರನ್ನು ಈ ರೀತಿ ಬಾಡಿ ಶೇಮಿಂಗ್ ಮಾಡಿದ್ದಕ್ಕೆ ನೆಟ್ಟಿಗರಿಂದಲೂ ವಿರೋಧ ವ್ಯಕ್ತವಾಗಿದೆ. ಅನೇಕರು ಸ್ವರಾ ಭಾಸ್ಕರ್​ ಪರವಾಗಿ ಕಮೆಂಟ್​ ಮಾಡಿದ್ದಾರೆ. ಮದುವೆ ಆದ ಬಳಿಕ ಸ್ವರಾ ಅವರು ಸಿನಿಮಾ ಕೆಲಸಗಳಿಂದ ಕೊಂಚ ಅಂತರ ಕಾಯ್ದುಕೊಂಡಿದ್ದಾರೆ. ಮಗುವಿನ ಆರೈಕೆಯ ಕಡೆಗೆ ಅವರು ಹೆಚ್ಚು ಗಮನ ನೀಡುತ್ತಿದ್ದಾರೆ.

ತಾಯಿಯಾದ ಬಳಿಕ ದೇಹದ ತೂಕ ಹೆಚ್ಚಿದ್ದಕ್ಕೆ ಸ್ವರಾ ಭಾಸ್ಕರ್​​ಗೆ ಬಾಡಿ ಶೇಮಿಂಗ್​
ಸ್ವರಾ ಭಾಸ್ಕರ್​

Updated on: Jun 04, 2024 | 4:11 PM

ನಟಿಯರಿಗೆ ಆಗಾಗ ಬಾಡಿ ಶೇಮಿಂಗ್​ (Body Shaming) ಆಗುತ್ತ ಇರುತ್ತದೆ. ದೇಹದ ತೂಕ ಸ್ವಲ್ಪ ಹೆಚ್ಚಾದರೂ ಜನರು ನೆಗೆಟಿವ್​ ಕಮೆಂಟ್​ ಮಾಡಲು ಆರಂಭಿಸುತ್ತಾರೆ. ಆದರೆ ಕೆಲವು ಸುದ್ದಿಮಾಧ್ಯಮಗಳು ಕೂಡ ಅದೇ ರೀತಿ ಮಾಡುವುದು ಅನೇಕರ ಅಸಮಾಧಾನಕ್ಕೆ ಕಾರಣ ಆಗಿದೆ. ನಟಿ ಸ್ವರಾ ಭಾಸ್ಕರ್​ ಅವರು ಈಗ ಬಾಡಿ ಶೇಮಿಂಗ್​ಗೆ ಒಳಗಾಗಿದ್ದಾರೆ. ಅದು ಕೂಡ ಮಗುವಿಗೆ ಜನ್ಮ ನೀಡಿದ ಬಳಿಕ ದೇಹದ ತೂಕ ಹೆಚ್ಚಾಗಿದೆ ಎಂಬ ಕಾರಣಕ್ಕೆ ಸುದ್ದಿ ಸಂಸ್ಥೆಯೊಂದು ಸ್ವರಾ ಭಾಸ್ಕರ್​ (Swara Bhaskar) ಅವರಿಗೆ ಅವಮಾನ ಮಾಡಿದೆ. ಅದನ್ನು ಸ್ವರಾ ಭಾಸ್ಕರ್​ ಖಂಡಿಸಿದ್ದಾರೆ.

ರಾಜಕಾರಣಿ ಫಹಾದ್​ ಅಹ್ಮದ್​ ಜೊತೆ ಸ್ವರಾ ಭಾಸ್ಕರ್​ ಅವರು 2023ರ ಜನವರಿಯಲ್ಲಿ ಮದುವೆ ಆದರು. ಆಗಲೂ ಅವರನ್ನು ಸಿಕ್ಕಾಪಟ್ಟೆ ಟ್ರೋಲ್​ ಮಾಡಲಾಗಿತ್ತು. ಆದರೆ ಅದನ್ನೆಲ್ಲ ಸ್ವರಾ ಭಾಸ್ಕರ್​ ಅವರು ಧೈರ್ಯವಾಗಿ ಎದುರಿಸಿದರು. 2023ರ ಸೆಪ್ಟೆಂಬರ್​ನಲ್ಲಿ ಅವರು ಮೊದಲ ಮಗುವಿಗೆ ಜನ್ಮ ನೀಡಿದರು. ಆ ಬಳಿಕ ಅವರ ದೇಹದ ತೂಕ ಹೆಚ್ಚಾಯಿತು.

‘ದೇಹದ ತೂಕ ಹೆಚ್ಚಾದ ಕಾರಣದಿಂದ ನಟಿ ಸ್ವರಾ ಭಾಸ್ಕರ್​ ಅವರಿಗೆ ಅವಕಾಶ ಸಿಗುತ್ತಿಲ್ಲ’ ಎಂಬ ಹೆಡ್​ಲೈನ್​ನಲ್ಲಿ ಸುದ್ದಿ ಪ್ರಕಟ ಮಾಡಲಾಗಿದೆ. ಅದು ಸ್ವರಾ ಭಾಸ್ಕರ್​ ಅವರ ಗಮನಕ್ಕೂ ಬಂದಿದೆ. ಅದರ ಸ್ಕ್ರೀನ್​ ಶಾಟ್​ ಅನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ಸುದ್ದಿ ಪ್ರಕಟಿಸಿದ ಮಾಧ್ಯಮ ಸಂಸ್ಥೆಗೆ ಅವರು ಕ್ಲಾಸ್​ ತೆಗೆದುಕೊಂಡಿದ್ದಾರೆ.

ಸ್ವರಾ ಭಾಸ್ಕರ್​ ಅವರನ್ನು ಈ ರೀತಿ ಬಾಡಿ ಶೇಮಿಂಗ್ ಮಾಡಿದ್ದಕ್ಕೆ ನೆಟ್ಟಿಗರಿಂದಲೂ ವಿರೋಧ ವ್ಯಕ್ತವಾಗಿದೆ. ಅನೇಕರು ಸ್ವರಾ ಭಾಸ್ಕರ್​ ಪರವಾಗಿ ಕಮೆಂಟ್​ ಮಾಡಿದ್ದಾರೆ. ಮದುವೆ ಆದ ಬಳಿಕ ಸ್ವರಾ ಅವರು ಸಿನಿಮಾ ಕೆಲಸಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಮಗುವಿನ ಆರೈಕೆಯ ಕಡೆಗೆ ಹೆಚ್ಚು ಗಮನ ನೀಡುತ್ತಿದ್ದಾರೆ.

ಇದನ್ನೂ ಓದಿ: ಸ್ವರಾ ಭಾಸ್ಕರ್​-ಫಹಾದ್​ ಅಹ್ಮದ್​ಗೆ ಹೆಣ್ಣು ಮಗು; ರಾಬಿಯಾ ಎಂದು ಹೆಸರಿಟ್ಟ ದಂಪತಿ

2009ರಲ್ಲಿ ಸ್ವರಾ ಭಾಸ್ಕರ್​ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ‘ತನು ವೆಡ್ಸ್​ ಮನು’, ‘ರಾಂಜನಾ’, ‘ಪ್ರೇಮ್​ ರತನ್​ ಧನ್​ ಪಾಯೋ’, ‘ನಿಲ್​ ಬತೇ ಸನ್ನಾಟ’, ‘ಅನಾರ್ಕಲಿ ಆಫ್​ ಆರಾ’, ‘ವೀರೇ ದಿ ವೆಡ್ಡಿಂಗ್​’ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ದೇಶದ ಅನೇಕ ಬೆಳವಣಿಗೆಗಳ ಬಗ್ಗೆ ಅವರು ತಮ್ಮ ನಿಲುವನ್ನು ಸೋಶಿಯಲ್​ ಮೀಡಿಯಾದಲ್ಲಿ ನೇರವಾಗಿ ವ್ಯಕ್ತಪಡಿಸುವ ಮೂಲಕ ಆಗಾಗ ಸುದ್ದಿ ಆಗುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us