ಬಾಲಿವುಡ್​​ನ ಸೀಕ್ವೆಲ್ ಸಿನಿಮಾ ಮೂಲಕ ಕಂಬ್ಯಾಕ್ ಮಾಡಲು ಕತ್ರಿನಾ ಕೈಫ್ ರೆಡಿ?

ಕತ್ರಿನಾ ಕೈಫ್ ಮತ್ತೆ ಬಣ್ಣದ ಲೋಕಕ್ಕೆ ಮರಳಲಿದ್ದಾರೆಂಬ ಸುದ್ದಿ ಬಿಟೌನ್‌ನಲ್ಲಿ ಬಿಸಿಬಿಸಿ ಚರ್ಚೆಯಲ್ಲಿದೆ. ಮಗು ಜನಿಸಿದ ನಂತರ ಸಿನಿಮಾ ಬ್ರೇಕ್‌ನಲ್ಲಿದ್ದ ಕತ್ರಿನಾ, ಅನುಷ್ಕಾ ಶರ್ಮಾ ರೀತಿ ಚಿತ್ರರಂಗಕ್ಕೆ ಗುಡ್‌ಬೈ ಹೇಳುತ್ತಾರೆಂಬ ವದಂತಿಗಳು ಸುಳ್ಳಾಗಿವೆ. 'ಚಾಂದಿನಿ ಬಾರ್ 2' ಮೂಲಕ ಅವರು ಭರ್ಜರಿ ಕಂಬ್ಯಾಕ್ ಮಾಡಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ. ಒಟಿಟಿ ಪ್ರಾಜೆಕ್ಟ್‌ಗಳ ಸ್ಕ್ರಿಪ್ಟ್ ಕೇಳುತ್ತಿದ್ದಾರೆಂಬ ಸುದ್ದಿ ಕೂಡ ಇದೆ. ಅಧಿಕೃತ ಘೋಷಣೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಬಾಲಿವುಡ್​​ನ ಸೀಕ್ವೆಲ್ ಸಿನಿಮಾ ಮೂಲಕ ಕಂಬ್ಯಾಕ್ ಮಾಡಲು ಕತ್ರಿನಾ ಕೈಫ್ ರೆಡಿ?
ಕತ್ರಿನಾ

Updated on: Jun 12, 2026 | 3:14 PM

ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ (Katrina Kaif) ಸದ್ಯದಲ್ಲೇ ಮತ್ತೆ ಬಣ್ಣದ ಲೋಕಕ್ಕೆ ಮರಳಲಿದ್ದಾರೆ ಎಂಬ ಬಿಸಿಬಿಸಿ ಚರ್ಚೆ ಬಿಟೌನ್‌ನಲ್ಲಿ ಕೇಳಿಬರುತ್ತಿದೆ. ನಟ ವಿಕ್ಕಿ ಕೌಶಲ್ ಜೊತೆ ದಾಂಪತ್ಯಕ್ಕೆ ಕಾಲಿಟ್ಟ ಬಳಿಕವೂ ಅವರು ಸಿನಿಮಾ ಮಾಡಿದರು. ಆದರೆ, ಮಗು ಜನಿಸಿದ ನಂತರದಲ್ಲಿ ಕತ್ರಿನಾ ಕೈಫ್ ಅವರು ಯಾವುದೇ ಸಿನಿಮಾ ಘೋಷಣೆ ಮಾಡಿರಲಿಲ್ಲ. ಬ್ರೇಕ್ ನಂತರ ಅವರು ಚಿತ್ರರಂಗಕ್ಕೆ ಮರಳುತ್ತಿದ್ದಾರೆ ಎಂದು ವರದಿ ಆಗಿದೆ.

ಸಿನಿಮಾಗಳಿಂದ ಕತ್ರಿನಾ ಕೈಫ್ ಸುದೀರ್ಘ ಬ್ರೇಕ್ ಪಡೆದಾಗ, ಚಿತ್ರರಂಗದಲ್ಲಿ ಒಂದು ದೊಡ್ಡ ವದಂತಿ ಹಬ್ಬಿತ್ತು. ನಟಿ ಅನುಷ್ಕಾ ಶರ್ಮಾ ಅವರು ತಾಯಿಯಾದ ಮೇಲೆ ಹೇಗೆ ಸಿನಿಮಾಗಳಿಂದ ಸಂಪೂರ್ಣ ದೂರ ಸರಿದು ಸಂಸಾರದತ್ತ ಗಮನ ಹರಿಸಿದರೋ, ಅದೇ ರೀತಿ ಕತ್ರಿನಾ ಕೂಡ ಚಿತ್ರರಂಗಕ್ಕೆ ಗುಡ್‌ಬೈ ಹೇಳಲಿದ್ದಾರೆ ಎಂದೇ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು. ಆದರೆ, ಈಗ ಕೇಳಿಬರುತ್ತಿರುವ ಹೊಸ ಅಪ್ಡೇಟ್‌ಗಳು ಆ ಎಲ್ಲಾ ಮಾತುಗಳೂ ಬರಿ ಸುಳ್ಳು ಎಂಬುದನ್ನು ಸಾಬೀತುಪಡಿಸಿವೆ. ಕತ್ರಿನಾ ಚಿತ್ರರಂಗ ತೊರೆಯುತ್ತಿಲ್ಲ, ಬದಲಿಗೆ ಭರ್ಜರಿ ಕಂಬ್ಯಾಕ್‌ಗೆ ರೆಡಿಯಾಗುತ್ತಿದ್ದಾರೆ.

‘ಚಾಂದಿನಿ ಬಾರ್ 2’ ನಲ್ಲಿ ಕತ್ರಿನಾ ಕಮಾಲ್?

ಫಿಲ್ಮ್ ಫೇರ್ ವರದಿಯ ಪ್ರಕಾರ, 2001 ರ ಕ್ಲಾಸಿಕ್ ಹಿಟ್ ಸಿನಿಮಾ ‘ಚಾಂದಿನಿ ಬಾರ್’ ಚಿತ್ರದ ಸೀಕ್ವೆಲ್‌ನಲ್ಲಿ ಕತ್ರಿನಾ ಕೈಫ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಅಜಯ್ ಬಹ್ಲ್ ನಿರ್ದೇಶಿಸಲಿರುವ ‘ಚಾಂದಿನಿ ಬಾರ್ 2’ ಚಿತ್ರದ ತಾರಾಗಣ ಪಟ್ಟಿಯಲ್ಲಿ ಕತ್ರಿನಾ ಹೆಸರು ಇದೆ ಎನ್ನಲಾಗಿದೆ. ವಿಶೇಷವೆಂದರೆ, ಮೊದಲ ಭಾಗದಲ್ಲಿ ಅದ್ಭುತವಾಗಿ ನಟಿಸಿದ್ದ ಖ್ಯಾತ ನಟಿ ಟಬು ಕೂಡ ಈ ಸೀಕ್ವೆಲ್‌ನಲ್ಲಿ ಭಾಗವಾಗಲಿದ್ದಾರೆ ಎಂಬ ವದಂತಿ ಇದೆ.

ಕತ್ರಿನಾ ಕೊನೆಯದಾಗಿ ತೆರೆಮೇಲೆ ಕಾಣಿಸಿಕೊಂಡಿದ್ದು ಡಿಸೆಂಬರ್ 2024 ರಲ್ಲಿ ಬಿಡುಗಡೆಯಾದ ‘ಮೇರಿ ಕ್ರಿಸ್ಮಸ್’ ಚಿತ್ರದಲ್ಲಿ. ಸಿನಿಮಾಗಳಿಂದ ದೂರವಿದ್ದರೂ ಅವರ ಜನಪ್ರಿಯತೆ ಮಾತ್ರ ತಗ್ಗಿಲ್ಲ. 2025ರ ಒರ್ಮ್ಯಾಕ್ಸ್ ಮೀಡಿಯಾ ಸಮೀಕ್ಷೆಯ ಪ್ರಕಾರ, ಆಲಿಯಾ ಭಟ್, ದೀಪಿಕಾ ಪಡುಕೋಣೆ ಅವರೊಂದಿಗೆ ಕತ್ರಿನಾ ಇಂದಿಗೂ ಬಾಲಿವುಡ್‌ನ ‘ಟಾಪ್ 5’ ಪ್ರೀತಿಯ ನಟಿಯರ ಪಟ್ಟಿಯಲ್ಲಿದ್ದಾರೆ.

ಇದನ್ನೂ ಓದಿ: ಮೊದಲ ಬಾರಿ ಮಗನನ್ನು ಪರಿಚಯಿಸಿದ ಕತ್ರಿನಾ ಕೈಫ್‌, ವಿಕ್ಕಿ ಕೌಶಲ್: ಆದರೆ ಒಂದು ಷರತ್ತು

ಇತ್ತೀಚೆಗಷ್ಟೇ ಕತ್ರಿನಾ ಒಟಿಟಿ (OTT) ಪ್ರಾಜೆಕ್ಟ್‌ಗಳ ಸ್ಕ್ರಿಪ್ಟ್ ಕೇಳುತ್ತಿದ್ದಾರೆ ಎಂಬ ಸುದ್ದಿಯೂ ಹರಿದಾಡಿತ್ತು. ಸದ್ಯಕ್ಕೆ ‘ಚಾಂದಿನಿ ಬಾರ್ 2’ ಚಿತ್ರತಂಡವಾಗಲಿ ಅಥವಾ ಕತ್ರಿನಾ ಕೈಫ್ ಅವರಾಗಲಿ ಈ ಬಗ್ಗೆ ಯಾವುದೇ ಅಧಿಕೃತ ಮುದ್ರೆ ಒತ್ತಿಲ್ಲ. ಆದರೂ, ಕತ್ರಿನಾ ಕೈಫ್ ಮತ್ತೆ ಬೆಳ್ಳಿಪರದೆಗೆ ಮರಳುವುದು ಗ್ಯಾರಂಟಿ ಎಂಬ ಸುದ್ದಿ ಕೇಳಿ ಅವರ ಫ್ಯಾನ್ಸ್ ಸಖತ್ ಖುಷಿಯಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us