Anushka Sharma: ಪ್ರಿಯಾಂಕಾ ಚೋಪ್ರಾ ತಿರಸ್ಕರಿಸಿದ ಪಾತ್ರ ಮಾಡಲು ಅನುಷ್ಕಾ ಶರ್ಮಾ ನಕಾರ; ಫರ್ಹಾನ್​ ಅಖ್ತರ್​ಗೆ ಹೆಚ್ಚಿತು ಚಿಂತೆ

Jee Le Zara: ಅನುಷ್ಕಾ ಶರ್ಮಾ ಅವರು ಸಿನಿಮಾಗಳ ಆಯ್ಕೆಯಲ್ಲಿ ಅವಸರ ತೋರುತ್ತಿಲ್ಲ. ‘ಜೀ ಲೇ ಜರಾ’ ಸಿನಿಮಾದಲ್ಲಿ ನಟಿಸಲು ಅವರು ಒಪ್ಪಿಕೊಂಡಿಲ್ಲ.

Anushka Sharma: ಪ್ರಿಯಾಂಕಾ ಚೋಪ್ರಾ ತಿರಸ್ಕರಿಸಿದ ಪಾತ್ರ ಮಾಡಲು ಅನುಷ್ಕಾ ಶರ್ಮಾ ನಕಾರ; ಫರ್ಹಾನ್​ ಅಖ್ತರ್​ಗೆ ಹೆಚ್ಚಿತು ಚಿಂತೆ
ಪ್ರಿಯಾಂಕಾ ಚೋಪ್ರಾ, ಅನುಷ್ಕಾ ಶರ್ಮಾ

Updated on: Jul 11, 2023 | 12:57 PM

ನಟ ಫರ್ಹಾನ್​ ಅಖ್ತರ್​ (Farhan Akhtar) ಅವರು ನಿರ್ದೇಶನದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಅವರ ನಿರ್ದೇಶನದಲ್ಲಿ ತಯಾರಾಗಬೇಕಿರುವ ‘ಜೀ ಲೇ ಜರಾ’ ಸಿನಿಮಾ (Jee Le Zara) ಸೆಟ್ಟೇರಲು ಹಲವು ವಿಘ್ನಗಳು ಎದುರಾಗುತ್ತಿವೆ. ಮಹಿಳಾ ಪ್ರಧಾನ ಕಥೆ ಹೊಂದಿರುವ ಈ ಸಿನಿಮಾದಲ್ಲಿ ನಟಿಸಲು ಮೊದಲು ಆಯ್ಕೆ ಆಗಿದ್ದು ಪ್ರಿಯಾಂಕಾ ಚೋಪ್ರಾ, ಕತ್ರಿನಾ ಕೈಫ್​ ಮತ್ತು ಆಲಿಯಾ ಭಟ್​. ಆದರೆ ಈಗ ಪಾತ್ರವರ್ಗದಲ್ಲಿ ಒಂದಷ್ಟು ಬದಲಾವಣೆ ಆಗುತ್ತಿದೆ. ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ‘ಜೀ ಲೇ ಜರಾ’ ಚಿತ್ರತಂಡದಿಂದ ಹೊರನಡೆದಿದ್ದಾರೆ. ಅವರು ಬಿಟ್ಟುಹೋದ ಪಾತ್ರವನ್ನು ಅನುಷ್ಕಾ ಶರ್ಮಾಗೆ ನೀಡಬೇಕು ಎಂದುಕೊಳ್ಳಲಾಗಿತ್ತು. ಆದರೆ ಆ ಪಾತ್ರ ಮಾಡಲು ಅನುಷ್ಕಾ ಶರ್ಮಾ ಕೂಡ ಒಪ್ಪಿಕೊಂಡಿಲ್ಲ ಎಂದು ‘ಬಾಲಿವುಡ್​ ಹಂಗಾಮಾ’ ವರದಿ ಮಾಡಿದೆ.

ಹಲವು ವರ್ಷಗಳಿಂದ ಪ್ರಿಯಾಂಕಾ ಚೋಪ್ರಾ ಅವರು ಬಾಲಿವುಡ್​ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಕೊನೇ ಪಕ್ಷ ಅವರು ಈ ಮೊದಲೇ ಒಪ್ಪಿಕೊಂಡಿದ್ದ ‘ಜೀ ಲೇ ಜರಾ’ ಸಿನಿಮಾದಲ್ಲಾದರೂ ನಟಿಸಬಹುದು ಎಂಬುದು ಅಭಿಮಾನಿಗಳ ನಿರೀಕ್ಷೆ ಆಗಿತ್ತು. ಆದರೆ ‘ಸಿಟಾಡೆಲ್​ 2’ ಶೂಟಿಂಗ್​ ಸಲುವಾಗಿ ಅವರು ‘ಜೀ ಲೇ ಜರಾ’ ಸಿನಿಮಾದಿಂದ ಹೊರನಡೆದಿದ್ದಾರೆ. ಡೇಟ್ಸ್​ ಹೊಂದಿಸಲು ಸಾಧ್ಯವಿಲ್ಲ ಎಂದು ಅವರು ಕಾರಣ ನೀಡಿದ್ದಾರೆ. ನಂತರ ಚಿತ್ರತಂಡದವರು ಅನುಷ್ಕಾ ಶರ್ಮಾಗೆ ಆಫರ್​ ನೀಡಿದ್ದಾರೆ. ಅನುಷ್ಕಾ ಶರ್ಮಾ ಕೂಡ ಆ ಪಾತ್ರವನ್ನು ತಿರಸ್ಕರಿಸಿದ್ದಾರೆ.

ಇದನ್ನೂ ಓದಿ: Anushka Sharma: ಮೊದಲಿನಷ್ಟು ಸಿನಿಮಾ ಮಾಡಲ್ಲ ಅನುಷ್ಕಾ ಶರ್ಮಾ; ಈ ತ್ಯಾಗಕ್ಕೆ ಕಾರಣ ತಿಳಿಸಿದ ನಟಿ

ಅನುಷ್ಕಾ ಶರ್ಮಾ ಅವರು ಸಿನಿಮಾಗಳ ಆಯ್ಕೆಯಲ್ಲಿ ಅವಸರ ತೋರುತ್ತಿಲ್ಲ. ವೃತ್ತಿಜೀವನ ಮತ್ತು ಕುಟುಂಬಕ್ಕೆ ಅವರು ಸಮಯ ಹೊಂದಿಸುತ್ತಿದ್ದಾರೆ. ಹೆಣ್ಣು ಮಗುವಿನ ಆರೈಕೆಯಲ್ಲಿ ಅವರು ಬ್ಯುಸಿ ಆಗಿದ್ದಾರೆ. ಕೆಲವು ಜಾಹೀರಾತುಗಳಲ್ಲೂ ಅನುಷ್ಕಾ ಶರ್ಮಾ ನಟಿಸುತ್ತಿದ್ದಾರೆ. ಈ ಎಲ್ಲ ಕಾರಣದಿಂದ ‘ಜೀ ಲೇ ಜರಾ’ ಸಿನಿಮಾಗೆ ಕಾಲ್​ಶೀಟ್​ ನೀಡಲು ಅವರಿಗೆ ಸಾಧ್ಯವಾಗಿಲ್ಲ. ಅದನ್ನು ಹೊರತುಪಡಿಸಿದರೆ ಈ ಆಫರ್​ ತಿರಸ್ಕರಿಸಲು ಬೇರೆ ಯಾವುದೇ ಕಾರಣ ಇಲ್ಲ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಮೊದಲ ಚಿತ್ರದ ನಿರ್ದೇಶಕನ ಬಗ್ಗೆಯೂ ಅನುಷ್ಕಾ ಶರ್ಮಾಗೆ ಗೊತ್ತಿರಲಿಲ್ಲ; ಇದು ನಟಿಯ ಸಿನಿ ಜರ್ನಿ

ಪ್ರಿಯಾಂಕಾ ಚೋಪ್ರಾ ಅವರು ‘ಜೀ ಲೇ ಜರಾ’ ಸಿನಿಮಾದಿಂದ ಹೊರನಡೆದಿದ್ದಕಾಗಿ ನಿರ್ದೇಶಕ ಫರ್ಹಾನ್​ ಅಖ್ತರ್​ ಅವರಿಗೆ ತಲೆಬಿಸಿ ಶುರುವಾಗಿದೆ. ಪ್ರಿಯಾಂಕಾ ಚೋಪ್ರಾ ಬದಲಿಗೆ ಬೇರೆ ಯಾವ ನಟಿಯನ್ನು ಆಯ್ಕೆ ಮಾಡಬೇಕು ಎಂಬುದು ದೊಡ್ಡ ಪ್ರಶ್ನೆ ಆಗಿದೆ. ಇದೇ ರೀತಿ ವಿಳಂಬವಾದರೆ ಆಲಿಯಾ ಭಟ್​ ಮತ್ತು ಕತ್ರಿನಾ ಕೈಫ್​ ಕೂಡ ಈ ಸಿನಿಮಾದಿಂದ ಹೊರನಡೆಯಬಹುದು. ಆಗ ಫರ್ಹಾನ್​ ಅಖ್ತರ್​ ಅವರು ಸಂಪೂರ್ಣವಾಗಿ ಈ ಸಿನಿಮಾವನ್ನು ಕೈ ಬಿಡಬೇಕಾಗುತ್ತದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us