ಕೊನೆಯಾಯಿತು ಅನುಷ್ಕಾ ಶರ್ಮಾ ತಮ್ಮನ ಲವ್ ಸ್ಟೋರಿ; ಯುವ ನಟಿಯ ಜೊತೆ ಬ್ರೇಕಪ್

ನೆಟ್​​ಫ್ಲಿಕ್ಸ್​ನಲ್ಲಿ ರಿಲೀಸ್​ ಆದ ‘ಬುಲ್​ಬುಲ್’​ ಸಿನಿಮಾದ ನಾಯಕಿ ತೃಪ್ತಿ ದಿಮ್ರಿ ಜೊತೆ ಅವರು ಡೇಟಿಂಗ್ ಮಾಡುತ್ತಿದ್ದರು. ಈಗ ಇಬ್ಬರೂ ಬೇರೆ ಆಗಿದ್ದಾರೆ.

ಕೊನೆಯಾಯಿತು ಅನುಷ್ಕಾ ಶರ್ಮಾ ತಮ್ಮನ ಲವ್ ಸ್ಟೋರಿ; ಯುವ ನಟಿಯ ಜೊತೆ ಬ್ರೇಕಪ್
ಅನುಷ್ಕಾ-ತೃಪ್ತಿ, ಕರ್ಣೇಶ್
Follow us
ರಾಜೇಶ್ ದುಗ್ಗುಮನೆ
|

Updated on: Jul 05, 2023 | 12:37 PM

ಅನುಷ್ಕಾ ಶರ್ಮಾ (Anushka Sharma) ಅವರ ತಮ್ಮ ಕರ್ಣೇಶ್ ಶರ್ಮಾ ಅವರು ಕಳೆದ ಕೆಲ ವರ್ಷಗಳಿಂದ ಸುದ್ದಿಯಲ್ಲಿದ್ದರು. ಅವರು ನಿರ್ಮಾಣ ಮಾಡಿದ ‘ಪಾತಾಳ್ ಲೋಕ್​’ ಸೇರಿ ಅನೇಕ ವೆಬ್ ಸೀರಿಸ್​ಗಳು ಸದ್ದು ಮಾಡಿದ್ದವು. ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿಯೂ ಕರ್ಣೇಶ್ (Karnesh Sharma) ಜನಪ್ರಿಯತೆ ಪಡೆದಿದ್ದಾರೆ. ಕರ್ಣೇಶ್ ಅವರು ತೃಪ್ತಿ ದಿಮ್ರಿ ಜೊತೆ ಸುತ್ತಾಟ ನಡೆಸುತ್ತಿದ್ದಾರೆ ಎನ್ನಲಾಗಿತ್ತು. ಈಗ ಇವರ ಸಂಬಂಧ ಕೊನೆಯಾಗಿದೆ. ಇದಕ್ಕೆ ಕಾರಣ ಏನು ಎಂಬುದು ಇನ್ನೂ ರಿವೀಲ್ ಆಗಿಲ್ಲ.

ಸೆಲೆಬ್ರಿಟಿಗಳ ಮೇಲೆ, ಅವರ ಕುಟುಂಬದವರ ಮೇಲೆ ಅಭಿಮಾನಿಗಳು ಕಣ್ಣಿಟ್ಟಿರುತ್ತಾರೆ. ನಟ/ನಟಿಯ ಕುಟುಂಬ ಸದಸ್ಯರು ಏನು ಮಾಡುತ್ತಾರೆ? ಯಾರ ಜತೆ ಸುತ್ತಾಟ ನಡೆಸುತ್ತಾರೆ ಎಂಬುದನ್ನು ತಿಳಿಯಲು ಫ್ಯಾನ್ಸ್ ಹೆಚ್ಚು ಆಸಕ್ತಿ ತೋರಿಸುತ್ತಾರೆ. ಅದೇ ರೀತಿ ಅನುಷ್ಕಾ ಶರ್ಮಾ ಸಹೋದರ ಕರ್ಣೇಶ್​ ಶರ್ಮಾ ಮೇಲೆ ಅಭಿಮಾನಿಗಳ ಹಲವು ವರ್ಷಗಳಿಂದ ಕಣ್ಣಿಟ್ಟಿದ್ದರು. ನೆಟ್​​ಫ್ಲಿಕ್ಸ್​ನಲ್ಲಿ ರಿಲೀಸ್​ ಆದ ‘ಬುಲ್​ಬುಲ್’​ ಸಿನಿಮಾದ ನಾಯಕಿ ತೃಪ್ತಿ ದಿಮ್ರಿ ಜೊತೆ ಅವರು ಡೇಟಿಂಗ್ ಮಾಡುತ್ತಿದ್ದರು. ಈಗ ಇಬ್ಬರೂ ಬೇರೆ ಆಗಿದ್ದಾರೆ.

ಅನುಷ್ಕಾ ಹಾಗೂ ಕರ್ಣೇಶ್ ಒಟ್ಟಾಗಿ ‘ಕ್ಲೀನ್​ ಸ್ಲೇಟ್​ ಫಿಲ್ಮ್ಸ್’ ಹೆಸರಿನ ಪ್ರೊಡಕ್ಷನ್​ಹೌಸ್​ ಆರಂಭಿಸಿದ್ದರು. ಈಗ ಅನುಷ್ಕಾ ಶರ್ಮಾ ಅವರು ಇದರ ಸಂಪೂರ್ಣ ಜವಾಬ್ದಾರಿಯನ್ನು ಕರ್ಣೇಶ್​ಗೆ ವಹಿಸಿದ್ದಾರೆ. ಕರ್ಣೇಶ್ ಪ್ರೀತಿಸುತ್ತಿದ್ದ ವಿಚಾರ ಅನುಷ್ಕಾಗೂ ಗೊತ್ತಿತ್ತು. ಅಚ್ಚರಿ ಎಂಬಂತೆ ಇನ್​​ಸ್ಟಾಗ್ರಾಮ್​ನಲ್ಲಿ ಕರ್ಣೇಶ್ ಹಾಗೂ ತೃಪ್ತಿ ಪರಸ್ಪರ ಒಬ್ಬರನ್ನೊಬ್ಬರು ಅನ್​ಫಾಲೋ ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಜೋಡಿ ಫೋಟೋಗಳನ್ನು ಡಿಲಿಟ್ ಮಾಡಲಾಗಿದೆ.

ಇದನ್ನೂ ಓದಿ: ಪತ್ನಿ ಅನುಷ್ಕಾ ಶರ್ಮಾ ಮೇಲೆ ಎಷ್ಟೊಂದು ಪ್ರೀತಿ; ಶತಕ ಬಾರಿಸಿದ ಬಳಿಕ ವಿರಾಟ್​ ಮಾಡಿದ್ದೇನು?

‘ಬುಲ್​ಬುಲ್’ ಚಿತ್ರ 2020ರಲ್ಲಿ ತೆರೆಗೆ ಬಂತು. ಈ ಚಿತ್ರಕ್ಕೆ 2019ರಲ್ಲಿ ಶೂಟಿಂಗ್ ನಡೆದಿದ್ದು 2019ರಲ್ಲಿ. ಇವರ ಮಧ್ಯೆ ಮೂಡಿದ್ದ ಗೆಳೆತನ ನಂತರ ಪ್ರೀತಿಗೆ ಬದಲಾಯಿತು. ಇಬ್ಬರೂ ಡೇಟಿಂಗ್​ ನಡೆಸುತ್ತಿದ್ದರು. ಸುಮಾರು ಮೂರು ವರ್ಷ ಒಟ್ಟಾಗಿದ್ದ ಇವರು ಈಗ ಬೇರೆ ಆಗಿದ್ದಾರೆ. ‘ಕ್ಲೀನ್ ಸ್ಲೇಟ್ ಫಿಲ್ಮ್ಸ್​’ ಬ್ಯಾನರ್​ ಅಡಿಯಲ್ಲಿ ಸಾಕಷ್ಟು ಚಿತ್ರಗಳು ತಯಾರಾಗಿವೆ. ಈ ನಿರ್ಮಾಣ ಸಂಸ್ಥೆಯಲ್ಲಿ ಮೂಡಿಬಂದ ‘ಪಾತಾಳ್​ ಲೋಕ್’​ ವೆಬ್​ ಸೀರಿಸ್ ವೀಕ್ಷಕರಿಂದ ಮೆಚ್ಚುಗೆ ಪಡೆದಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್