‘ಆರ್​ಆರ್​ಆರ್​’ ಬಳಿಕ ಜಪಾನ್​ನಲ್ಲಿ ರಿಲೀಸ್ ಆಗುತ್ತಿದೆ ಸೂಪರ್ ಹಿಟ್ ಇಂಡಿಯನ್ ಸಿನಿಮಾ

ಜಪಾನ್​ನಲ್ಲಿ ಭಾರತದ ಸಿನಿಮಾಗಳಿಗೆ ಭಾರೀ ಬೇಡಿಕೆ ಸೃಷ್ಟಿ ಆಗಿದೆ. ಈ ಮೊದಲು ರಿಲೀಸ್ ಆದ ‘ಬಾಹುಬಲಿ’, ‘ಆರ್​ಆರ್​ಆರ್’ ಚಿತ್ರಗಳನ್ನು ಅಲ್ಲಿನ ಮಂದಿ ಇಷ್ಟಪಟ್ಟಿದ್ದರು.

‘ಆರ್​ಆರ್​ಆರ್​’ ಬಳಿಕ ಜಪಾನ್​ನಲ್ಲಿ ರಿಲೀಸ್ ಆಗುತ್ತಿದೆ ಸೂಪರ್ ಹಿಟ್ ಇಂಡಿಯನ್ ಸಿನಿಮಾ
ಆರ್​ಆರ್​ಆರ್​ ಸಿನಿಮಾ
Follow us
ರಾಜೇಶ್ ದುಗ್ಗುಮನೆ
|

Updated on: Jul 06, 2023 | 6:30 AM

ಎಸ್​ಎಸ್​ ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್’ ಸಿನಿಮಾ (RRR Movie) ಸೂಪರ್ ಹಿಟ್ ಆಗಿತ್ತು. ಈ ಚಿತ್ರದಿಂದ ರಾಜಮೌಳಿ ಖ್ಯಾತಿ ಹೆಚ್ಚಿತು. ಜೂನಿಯರ್ ಎನ್​ಟಿಆರ್ ಹಾಗೂ ರಾಮ್ ಚರಣ್ ಈ ಚಿತ್ರದಲ್ಲಿ ಮಿಂಚಿದರು. ಈ ಸಿನಿಮಾ ಜಪಾನ್​ನಲ್ಲಿ ರಿಲೀಸ್ ಆಗಿ ಭರ್ಜರಿ ಕಮಾಯಿ ಮಾಡಿತ್ತು. ಜಪಾನ್ ಒಂದರಲ್ಲೇ ನೂರು ಕೋಟಿ ರೂಪಾಯಿಗೂ ಅಧಿಕ ಬಿಸ್ನೆಸ್ ಮಾಡಿದ್ದು ‘ಆರ್​ಆರ್​ಆರ್​’ ಚಿತ್ರದ ಹೆಚ್ಚುಗಾರಿಕೆ. ಈಗ ಶಾರುಖ್ ಖಾನ್ (Shah Rukh Khan) ನಟನೆಯ ‘ಪಠಾಣ್’ ಸಿನಿಮಾ ಕೂಡ ಜಪಾನ್​ನಲ್ಲಿ ರಿಲೀಸ್ ಆಗಲು ರೆಡಿ ಆಗಿದೆ.

‘ಪಠಾಣ್’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ದೊಡ್ಡ ಮಟ್ಟದ ಗೆಲುವು ಕಂಡಿದೆ. ಈ ಚಿತ್ರದ ಮೂಲಕ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅವರು ದೊಡ್ಡ ಮಟ್ಟದ ಗೆಲುವು ಕಂಡರು. ಶಾರುಖ್ ಖಾನ್ ಈ ಚಿತ್ರಕ್ಕಾಗಿ ದೊಡ್ಡ ಮಟ್ಟದ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಈ ಚಿತ್ರ ಜಪಾನ್ ಭಾಷೆಗೆ ಡಬ್ ಆಗುತ್ತಿದ್ದು, ಅಲ್ಲಿಯೂ ಬಿಸ್ನೆಸ್ ಮಾಡಲು ರೆಡಿ ಆಗಿದೆ.

ಜಪಾನ್​ನಲ್ಲಿ ಭಾರತದ ಸಿನಿಮಾಗಳಿಗೆ ಭಾರೀ ಬೇಡಿಕೆ ಸೃಷ್ಟಿ ಆಗಿದೆ. ಈ ಮೊದಲು ರಿಲೀಸ್ ಆದ ‘ಬಾಹುಬಲಿ’, ‘ಆರ್​ಆರ್​ಆರ್’ ಚಿತ್ರಗಳನ್ನು ಅಲ್ಲಿನ ಮಂದಿ ಇಷ್ಟಪಟ್ಟಿದ್ದರು. ಆ್ಯಕ್ಷನ್ ಸಿನಿಮಾಗಳನ್ನು ಅಲ್ಲಿನ ಜನರು ಹೆಚ್ಚು ಇಷ್ಪಡುತ್ತಾರೆ. ‘ಜವಾನ್’ ಚಿತ್ರದಲ್ಲೂ ಭರ್ಜರಿ ಆ್ಯಕ್ಷನ್ ಇರುವುದರಿಂದ ಈ ಸಿನಿಮಾ ಅಲ್ಲಿನವರಿಗೆ ಇಷ್ಟ ಆಗಬಹುದು. ಈ ಮೂಲಕ ಸಿನಿಮಾದ ಕಲೆಕ್ಷನ್ ಹೆಚ್ಚಬಹುದು.

ಇದನ್ನೂ ಓದಿ: ತಮ್ಮದೇ ನಿರ್ಮಾಣ ಸಂಸ್ಥೆಗೆ ದೊಡ್ಡ ಲಾಭ ಮಾಡಿಕೊಟ್ಟ ಶಾರುಖ್ ಖಾನ್; ‘ಡಂಕಿ’, ‘ಜವಾನ್​’ನಿಂದ ಬಂದ ಹಣ ಎಷ್ಟು?

ಯಶ್ ರಾಜ್ ಫಿಲ್ಮ್ಸ್​ ಬ್ಯಾನರ್ ಅಡಿಯಲ್ಲಿ ‘ಪಠಾಣ್’ ಸಿನಿಮಾ ಮೂಡಿ ಬಂದಿದೆ. ಈ ನಿರ್ಮಾಣ ಸಂಸ್ಥೆ ಈಗಾಗಲೇ ಸ್ಪೈ ಯೂನಿವರ್ಸ್​ ಸೃಷ್ಟಿ ಮಾಡಿದೆ. ‘ಏಕ್ ಥಾ ಟೈಗರ್’, ‘ಟೈಗರ್ ಜಿಂದಾ ಹೈ’, ‘ವಾರ್’, ‘ಪಠಾಣ್’ ಸಿನಿಮಾಗಳು ಸ್ಪೈ ಯೂನಿವರ್ಸ್ ಅಡಿಯಲ್ಲಿ ಸಿದ್ಧಗೊಂಡಿದೆ. ಮುಂದೆಯೂ ಇದೇ ಯೂನಿವರ್ಸ್ ಅಡಿಯಲ್ಲಿ ಸಿನಿಮಾಗಳು ಮೂಡಿಬರಲಿವೆ. ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಒಟ್ಟಾಗಿ ಸಿನಿಮಾ ಮಾಡುತ್ತಾರೆ ಎನ್ನುವ ಮಾತೂ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್