SS Rajamouli: ಆಸ್ಕರ್ ಸದಸ್ಯತ್ವ ಪಡೆದವರಿಗೆ ‘ಆರ್ಆರ್ಆರ್’ ನಿರ್ದೇಶಕ ರಾಜಮೌಳಿ ಕಡೆಯಿಂದ ಅಭಿನಂದನೆ
Academy Members: ‘ಆರ್ಆರ್ಆರ್’ ಚಿತ್ರದ ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಆಸ್ಕರ್ ಸದಸ್ಯತ್ವ ಸಿಕ್ಕಿದೆ. ತಮ್ಮ ತಂಡದವರಿಗೆ ಇಂಥ ಗೌರವ ಸಿಕ್ಕಿರುವುದು ನಿರ್ದೇಶಕ ರಾಜಮೌಳಿ ಅವರಿಗೆ ಹೆಮ್ಮೆ ತಂದಿದೆ.
ಎಸ್ಎಸ್ ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ (RRR Movie) ಸಿನಿಮಾ ಮಾಡಿದ ಸಾಧನೆ ದೊಡ್ಡದು. ಮೊದಲ ಬಾರಿಗೆ ಆಸ್ಕರ್ ಪ್ರಶಸ್ತಿ ಪಡೆದ ಭಾರತೀಯ ಸಿನಿಮಾ (ನಾಟು ನಾಟು ಹಾಡು) ಎಂಬ ಖ್ಯಾತಿ ಈ ಚಿತ್ರಕ್ಕೆ ಸಲ್ಲುತ್ತದೆ. ಆ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತದ ಸಿನಿಮಾಗಳು ಮಿಂಚುವಂತೆ ಮಾಡಿದ ನಿರ್ದೇಶಕರಲ್ಲಿ ರಾಜಮೌಳಿ ಪ್ರಮುಖರು. ‘ಆರ್ಆರ್ಆರ್’ ಚಿತ್ರದಲ್ಲಿ ಕೆಲಸ ಮಾಡಿದ ನಟರು ಮತ್ತು ತಂತ್ರಜ್ಞರಿಗೆ ಆಸ್ಕರ್ನಿಂದ (Oscars) ವಿಶೇಷ ಗೌರವ ಸಂದಿದೆ. ರಾಮ್ ಚರಣ್, ಜೂನಿಯರ್ ಎನ್ಟಿಆರ್, ಎಂಎಂ ಕೀರವಾಣಿ ಮುಂತಾದವರಿಗೆ ಆಸ್ಕರ್ ಸದಸ್ಯತ್ವ ನೀಡಲಾಗಿದೆ. ಇವರೆಲ್ಲರಿಗೂ ರಾಜಮೌಳಿ (SS Rajamouli) ಅವರು ಅಭಿನಂದನೆ ಸಲ್ಲಿಸಿದ್ದಾರೆ. ಅವರು ಮಾಡಿರುವ ಟ್ವೀಟ್ ವೈರಲ್ ಆಗಿದೆ.
‘ಆರ್ಆರ್ಆರ್’ ಸಿನಿಮಾ ತೆರೆಕಂಡು ಒಂದು ವರ್ಷಕ್ಕೂ ಹೆಚ್ಚು ಸಮಯ ಕಳೆದಿದೆ. ಹಾಗಿದ್ದರೂ ಕೂಡ ಆ ಸಿನಿಮಾದ ಹವಾ ಇನ್ನೂ ಕಡಿಮೆ ಆಗಿಲ್ಲ. ಇಂದಿಗೂ ಆ ಚಿತ್ರದ ಕುರಿತು ಚರ್ಚೆ ನಡೆಯುತ್ತಿದೆ. ಈ ಸಿನಿಮಾದ ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಆಸ್ಕರ್ ಸದಸ್ಯತ್ವ ಸಿಕ್ಕಿರುವುದೇ ಇದಕ್ಕೆ ಸಾಕ್ಷಿ. ತಮ್ಮ ತಂಡದವರಿಗೆ ಇಂಥ ಗೌರವ ಸಿಕ್ಕಿರುವುದು ನಿರ್ದೇಶಕ ರಾಜಮೌಳಿ ಅವರಿಗೆ ಹೆಮ್ಮೆ ತಂದಿದೆ. ನಿರ್ದೇಶಕರಾದ ಕರಣ್ ಜೋಹರ್, ಮಣಿರತ್ನಂ ಸೇರಿದಂತೆ ಇನ್ನೂ ಕೆಲವರಿಗೆ ಆಸ್ಕರ್ ಸದಸ್ಯತ್ವ ನೀಡಲಾಗಿದೆ. ಅವರ ಅಭಿಮಾನಿಗಳು ಇದರಿಂದ ಖುಷಿ ಆಗಿದ್ದಾರೆ.
Extremely proud that 6 members of our RRR team have been invited as members for The Academy Awards this year.
Congratulations Tarak, Charan, Peddanna, Sabu sir, Senthil &Chandrabose garu.
Also, congrats to the members from Indian Cinema who received the invitation this year 🙂
— rajamouli ss (@ssrajamouli) June 29, 2023
‘ಈ ವರ್ಷ ಆಸ್ಕರ್ ಸದಸ್ಯತ್ವ ಪಡೆಯಲು ನಮ್ಮ ಆರ್ಆರ್ಆರ್ ಸಿನಿಮಾ ತಂಡದ 6 ಜನರಿಗೆ ಆಹ್ವಾನ ಬಂದಿರುವುದಕ್ಕೆ ನನಗೆ ತುಂಬ ಹೆಮ್ಮೆ ಎನಿಸುತ್ತಿದೆ. ತಾರಕ್, ಚರಣ್, ಪೆದ್ದಣ್ಣ, ಸಾಬು ಸರ್, ಸೇಂಥಿಲ್ ಮತ್ತು ಚಂದ್ರಬೋಸ್ ಅವರಿಗೆ ಅಭಿನಂದನೆಗಳು. ಈ ವರ್ಷ ಆಸ್ಕರ್ ಸದಸ್ಯಕ್ಕೆ ಆಹ್ವಾನಿತರಾಗಿರುವ ಭಾರತೀಯ ಚಿತ್ರರಂಗದ ಇತರರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ’ ಎಂದು ರಾಜಮೌಳಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: SS Rajamouli: ಡಬಲ್ ರೋಲ್ನಲ್ಲಿ ಮಿಂಚಿದ ನಟ ಎಸ್.ಎಸ್. ರಾಜಮೌಳಿ; ಅರೆ ಇದೇನಿದು ಹೊಸ ಅಪ್ಡೇಟ್?
ರಾಜಮೌಳಿ ಅವರು ತೆಲುಗು ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ‘ಮಗಧೀರ’ ಸಿನಿಮಾದಿಂದ ಅವರ ಹೆಸರು ಅಕ್ಕಪಕ್ಕದ ರಾಜ್ಯಗಳಲ್ಲಿ ಪಸರಿಸಿತು. ‘ಬಾಹುಬಲಿ’ ಚಿತ್ರದಿಂದ ಅವರು ಪ್ಯಾನ್ ಇಂಡಿಯಾ ನಿರ್ದೇಶಕನಾಗಿ ಬೆಳೆದರು. ‘ಆರ್ಆರ್ಆರ್’ ತೆರೆಕಂಡ ನಂತರ ಅವರು ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದರು. ಅವರ ಜೊತೆ ಸಿನಿಮಾ ಮಾಡಬೇಕು ಎಂದು ಅನೇಕ ಸ್ಟಾರ್ ನಟರು ಕಾಯುತ್ತಿದ್ದಾರೆ. ಮಹೇಶ್ ಬಾಬು ಜೊತೆ ರಾಜಮೌಳಿ ಸಿನಿಮಾ ಮಾಡಲಿದ್ದು, ಆ ಚಿತ್ರದ ಸ್ಕ್ರಿಪ್ಟ್ ಸಿದ್ಧವಾಗುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.