ವಿರಾಟ್​- ಅನುಷ್ಕಾ ಮನೆಯ ನೆರೆಮನೆಯವರಾಗಲಿದ್ದಾರೆ ಕತ್ರಿನಾ ಕೈಫ್​ – ವಿಕ್ಕಿ ಕೌಶಲ್​

ಮದುವೆಯಾದ ಬಳಿಕ ಹೊಸ ಜೊಡಿ ಮುಂಬೈನಲ್ಲಿ ಐಷಾರಾಮಿ ಅಪಾರ್ಟ್​ಮೆಂಟ್​​ವೊಂದರಲ್ಲಿ ವಾಸಮಾಡಲಿದ್ದಾರೆ. ಅದೇ ಕಟ್ಟಡದಲ್ಲಿ ವಿರಾಟ್​ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಕೂಡ ಇದ್ದಾರೆ. ಹೀಗಾಗಿ ವಿಕ್ಕಿ ಹಾಗೂ ಕತ್ರಿನಾ ಮುಂದಿನ ದಿನಗಳಲ್ಲಿ ವಿರುಷ್ಕಾ ಮನೆಯ ನೆರೆಮನೆಯವರಾಗಲಿದ್ದಾರೆ.

ವಿರಾಟ್​- ಅನುಷ್ಕಾ ಮನೆಯ ನೆರೆಮನೆಯವರಾಗಲಿದ್ದಾರೆ ಕತ್ರಿನಾ ಕೈಫ್​ - ವಿಕ್ಕಿ ಕೌಶಲ್​
ಕತ್ರಿನಾಕೈಫ್​, ವಿಕ್ಕಿ ಕೌಶಲ್​, ವಿರಾಟ್​ ಕೊಹ್ಲಿ ಮತ್ತು ಅನುಷ್ಕಾ
Updated By: Pavitra Bhat Jigalemane

Updated on: Dec 09, 2021 | 2:08 PM

ಬಾಲಿವುಡ್​ ತಾರಾಜೋಡಿ ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್​ ಇಂದು ರಾಜಸ್ಥಾನದ ಮಾಧೋಪುರದಲ್ಲಿನ ಖಾಸಗಿ ಹೋಟೇಲ್​ನಲ್ಲಿ ವಿವಾಹವಾಗುತ್ತಿದ್ದಾರೆ. ಮದುವೆಯಾದ ಬಳಿಕ ಹೊಸ ಜೊಡಿ ಮುಂಬೈನಲ್ಲಿ ಐಷಾರಾಮಿ ಅಪಾರ್ಟ್​ಮೆಂಟ್​​ವೊಂದರಲ್ಲಿ ವಾಸಮಾಡಲಿದ್ದಾರೆ. ಅದೇ ಕಟ್ಟಡದಲ್ಲಿ ವಿರಾಟ್​ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಕೂಡ ಇದ್ದಾರೆ. ಹೀಗಾಗಿ ವಿಕ್ಕಿ ಹಾಗೂ ಕತ್ರಿನಾ ಮುಂದಿನ ದಿನಗಳಲ್ಲಿ ವಿರುಷ್ಕಾ ಮನೆಯ ನೆರೆಮನೆಯವರಾಗಲಿದ್ದಾರೆ. ಮುಂಬೈನ ಜುಹುದಲ್ಲಿ 5 ವರ್ಷಗಳಿಗಾಗಿ ಕತ್ರಿನಾ ಹಾಗೂ ವಿಕ್ಕಿ ಅಪಾರ್ಟ್​ಮೆಂಟ್​ಅನ್ನು ಬಾಡಿಗೆಗೆ ಪಡೆದಿದ್ದಾರೆ. 9 ಲಕ್ಷರೂ.ಗಳಷ್ಟು ಪ್ರತೀ ತಿಂಗಳು ಬಾಡಿಗೆ ಕಟ್ಟಲಿದ್ದಾರೆ. ಇದು ಜುಹುನಲ್ಲಿರುವ ರಾಜ್​ಮಹಲ್​ನ ಅತೀ ಐಷಾರಾಮಿ ಕಟ್ಟಡಗಳಲ್ಲಿ ಒಂದಾಗಿದೆ. 1.75 ಕೋಟಿರೂ.ಗೆ ಭದ್ರತಾ ಠೇವಣಿ ನೀಡಿ ವಿಕ್ಕಿ ಕೌಶಲ್​ ಮನೆಯನ್ನು ಖರೀದಿಸಿದ್ದಾರೆ. ಜುಲೈ ನಲ್ಲಿ 8ನೇ ಮಹಡಿಯ ಅಪಾರ್ಟ್ಮೆಂಟ್ ಅನ್ನು ವಿಕ್ಕಿ ಕೌಶಲ್​ ಖರೀದಿಸಿದ್ದರು.

ಕತ್ರಿನಾ ಮದುವೆಯಲ್ಲಿ ನಿನ್ನೆ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ನವದಂಪತಿಗಳಾಗುವ ಕತ್ರಿನಾ ಹಾಗೂ ವಿಕ್ಕಿ ಚಿಕನಿ ಚಮೇಲಿ ಹಾಡಿಗೆ ನೃತ್ಯ ಮಾಡಿದ್ದಾರೆ. ಕತ್ರಿನಾ ಹಾಗೂ ವಿಕ್ಕಿ ಕೌಶಲ್ ಮದುವೆ ರಾಜಸ್ಥಾನದ ಮಾಧೋಪುರದ ಖಾಸಗಿ ಹೋಟೆಲ್​ವೊಂದರಲ್ಲಿ ನಡೆಯುತ್ತಿದೆ. ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್​ ಮದುವೆಗೆ ನಟ ಸಲ್ಮಾನ್​ ಖಾನ್​ ಬಾಡಿಗಾರ್ಡ್​ ಶೇರಾ ಭದ್ರತೆಯನ್ನು ನೀಡುತ್ತಿದ್ದಾರೆ.

ಕೇವಲ 120 ಜನರಿಗೆ ಮದುವೆಗೆ ಆಹ್ವಾನ ನೀಡಲಾಗಿದ್ದು, ನೇಹಾ ದೂಪಿಯಾ ಕರಣ್​ ಜೋಹರ್​ ಸೇರಿದಂತೆ ಹಲವ ಭಾಗವಹಿಸುತ್ತಿದ್ದಾರೆ. ಬಾಲಿವುಡ್​ ನಲ್ಲಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್​ ಅವರಿಬ್ಬರಿಗೂ ಒಳ್ಳೆಯ ಫೇಮ್ ಇದೆ. ಇಬ್ಬರೂ ತಮ್ಮ ತಮ್ಮ ನಟನಾ ವೃತ್ತಿಯಲ್ಲಿ ಹೆಸರು ಮಾಡಿದವರು. ಇಬ್ಬರಿಗೂ ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ.

ಈಗಾಗಲೇ ಮದುವೆ ಬಗ್ಗೆ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿದೆ. ತಾರಾ ದಂಪತಿಗಳನ್ನು ನೋಡಲು ಸಾಮಾಜಿಕ ಜಾಲತಾಣಗಳಲ್ಲಿ ಹುಡುಕಾಟ ಜೋರಾಗಿದೆ. ಹೀಗಾಗಿ ಕತ್ರಿನಾ ವಿಕ್ಕಿ ಮದುವೆಯ ಫೋಟೋಗಳು ವೈರಲ್​ ಆಗುವುದಂತೂ ಖಚಿತ.

ಇದನ್ನೂ ಓದಿ:

ಕತ್ರಿನಾ ಕೈಫ್​-ವಿಕ್ಕಿ ಕೌಶಲ್ ಮೆಹಂದಿ ಕಾರ್ಯಕ್ರಮದ ಫೋಟೋ ಲೀಕ್​? ಫ್ಯಾಕ್ಟ್​ ​ಚೆಕ್​ನಲ್ಲಿ ಏನಿದೆ?

 

Published On - 2:07 pm, Thu, 9 December 21