ನಾಲ್ಕು ದಿನಕ್ಕೆ 100 ಕೋಟಿ ರೂಪಾಯಿ ಮಾಡಿದ ‘ಸೈಯಾರ’; ಇಷ್ಟೊಂದ ಕ್ರೇಜ್​​ಗೆ ಕಾರಣವೇನು?

‘ಸೈಯಾರ’ ಸಿನಿಮಾ ಹೊಸಬರಾದ ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡಾ ಅವರ ನಟನೆಯಿಂದ, ಕಡಿಮೆ ಪ್ರಚಾರದ ಹೊರತಾಗಿಯೂ, ಮೂರು ದಿನಗಳಲ್ಲಿ 100 ಕೋಟಿ ರೂಪಾಯಿ ಗಳಿಸಿದೆ. ಸ್ಟಾರ್ ಹೀರೋ ಸಿನಿಮಾ ನಿರ್ಮಾಪಕರೇ ಗಳಿಕೆ ಮಾಡಲು ಹೆಚ್ಚು ಕಷ್ಟಪಡುತ್ತಿದ್ದಾರೆ. ಹೀಗಿರುವಾಗ ‘ಸೈಯಾರ’ ಸಿನಿಮಾ ಹೊಸಬರ ಚಿತ್ರ. ಈ ಸಿನಿಮಾ ಮೂರು ದಿನಕ್ಕೆ ಕಲೆಕ್ಷನ್ ಮಾಡಿದ್ದು 108 ಕೋಟಿ ರೂಪಾಯಿ.

ನಾಲ್ಕು ದಿನಕ್ಕೆ 100 ಕೋಟಿ ರೂಪಾಯಿ ಮಾಡಿದ ‘ಸೈಯಾರ’; ಇಷ್ಟೊಂದ ಕ್ರೇಜ್​​ಗೆ ಕಾರಣವೇನು?
ಸಯಾರಾ

Updated on: Jul 22, 2025 | 1:22 PM

ಸ್ಟಾರ್ ನಟರನ್ನು ಇಟ್ಟುಕೊಂಡು ಸಿನಿಮಾ ಮಾಡಿ ನೂರಾರು ಕೋಟಿ ರೂಪಾಯಿ ಗಳಿಕೆ ಮಾಡೋದು ಒಂದು ಸ್ಟ್ರೆಟಜಿ ಆದರೆ, ಹೊಸ ಹೀರೋಗಳ ಸಿನಿಮಾಗಳ ಕಾರ್ಯಕ್ರಮಕ್ಕೆ ಸ್ಟಾರ್ ಹೀರೋಗಳನ್ನು ಕರೆದು ಚಿತ್ರ ಪ್ರಚಾರ ಮಾಡೋದು ಮತ್ತೊಂದು ತಂತ್ರ. ಆದರೆ, ಇದೆಲ್ಲದಕ್ಕೂ ಬ್ರೇಕ್ ಹಾಕಿ ಹೊಸ ರೀತಿಯ ಟ್ರೆಂಡ್ ಹುಟ್ಟುಹಾಕಿದ್ದು ‘ಸೈಯಾರ’ (Saiyaara Movie) ಸಿನಿಮಾ. ಹೊಸ ಮುಖಗಳಾದ ಅಹಾನ್ ಪಾಂಡೆ ಹಾಗೂ ನಟಿ ಅನೀತ್ ಪಡ್ಡಾ ನಟಿಸಿದ ‘ಸೈಯಾರ’ ಸಿನಿಮಾಗೆ ಹೆಚ್ಚು ಪ್ರಚಾರ ನೀಡಿಲ್ಲ. ಆದರೆ, ಈ ಚಿತ್ರ ಮೂರು ದಿನಕ್ಕೆ ದೇಶಿಯ ಬಾಕ್ಸ್ ಆಫೀಸ್​ನಲ್ಲಿ 100 ಕೋಟಿ ರೂಪಾಯಿ ಗಳಿಸಿದೆ. ಯಶ್ ರಾಜ್ ಫಿಲ್ಮ್ಸ್ ಚಿತ್ರವನ್ನು ನಿರ್ಮಾಣ ಮಾಡಿದೆ. ‘ಅಶಿಕಿ 2’ ಖ್ಯಾತಿಯ ಮೋಹಿತ್ ಸೂರಿ ಇದನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದ ದೊಡ್ಡ ಮಟ್ಟದ ಗಳಿಕೆಗೆ ನಿಜಕ್ಕೂ ಕಾರಣ ಏನು? ಇಲ್ಲಿದೆ ವಿವರ.

ಗಳಿಕೆಯಲ್ಲಿ ಸಾಧನೆ..

ಸ್ಟಾರ್ ಹೀರೋ ಸಿನಿಮಾ ನಿರ್ಮಾಪಕರೇ ಗಳಿಕೆ ಮಾಡಲು ಹೆಚ್ಚು ಕಷ್ಟಪಡುತ್ತಿದ್ದಾರೆ. ಹೀಗಿರುವಾಗ ‘ಸೈಯಾರ’ ಸಿನಿಮಾ ಹೊಸಬರ ಚಿತ್ರ. ಈ ಸಿನಿಮಾ ಮೂರು ದಿನಕ್ಕೆ ಕಲೆಕ್ಷನ್ ಮಾಡಿದ್ದು 108 ಕೋಟಿ ರೂಪಾಯಿ. ವಾರದ ಮೊದಲ ದಿನ ಸೋಮವಾರ (ಜುಲೈ 21) ಈ ಚಿತ್ರ ಬರೋಬ್ಬರಿ 22.5 ಕೋಟಿ ರೂಪಾಯಿ ಬಾಚಿಕೊಂಡಿದೆ. ಇದು ನಿಜಕ್ಕೂ ಸಾಧನೆಯೇ ಸರಿ.

ಚಿತ್ರದಲ್ಲಿ ಏನಿದೆ ಎಂಬುದೇ ಪ್ರಶ್ನೆ..

ಹೊಸಬರ ಚಿತ್ರ ಎಂದಾಗ ಕ್ರೇಜ್ ಕಡಿಮೆ ಇರುತ್ತದೆ. ಆದರೆ, ಅಹಾನ್​ಗೆ ಅತಿ ದೊಡ್ಡ ಗೆಲುವು ಸಿಕ್ಕಿದೆ. ಲವ್ ಹಾಗೂ ಹಾರ್ಟ್​ಬ್ರೇಕ್​ಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಇದು ಹೊಸ ಜನರೇಶನ್​ಗೆ ಹೆಚ್ಚು ಇಷ್ಟ ಆಗುತ್ತಿದೆ. ಸಿನಿಮಾ ನೋಡೋಕೆ ಹೋದವರು ಚಿತ್ರ-ವಿಚಿತ್ರವಾಗಿ ನಡೆದುಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ. ಸಿನಿಮಾ ನೋಡದೇ ಇರುವವರು ‘ಸೈಯಾರ ಸಿನಿಮಾದಲ್ಲಿ ಏನಿದೆ’ ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ.

ಇದನ್ನೂ ಓದಿ
ದಳಪತಿ ವಿಜಯ್ ಕೊನೆಯ ಸಿನಿಮಾಗೆ ಪಡೆದ ಸಂಭಾವನೆ ಇಷ್ಟೊಂದಾ?
‘ಸು ಫ್ರಮ್ ಸೋ’ ಚಿತ್ರದ ಪ್ರೀಮಿಯರ್ ಶೋ ನೋಡಿ ಹೊಗಳಿದ ಪ್ರೇಕ್ಷಕರು
‘ಎಕ್ಕ’ ಹಾಗೂ ‘ಜೂನಿಯರ್’ ಸಿನಿಮಾ ಕಲೆಕ್ಷನ್; ಯಾವುದು ಪಾಸ್, ಯಾವುದು ಫೇಲ್?
ಈ ದಿನಂದು ‘ಕಣ್ಣಪ’ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಲಿದೆ?

ಆನ್​ಲೈನ್ ಮೇನಿಯಾ..

ಮಲಯಾಳಂ ಹಾಗೂ ಕನ್ನಡದಲ್ಲಿ ರಿಲೀಸ್ ಆದ ‘ಧೂಮಂ’ ಚಿತ್ರದಲ್ಲಿ ಒಂದು ಡೈಲಾಗ್ ಬರುತ್ತದೆ. ‘ಯಾವುದಾದರೂ ಪ್ರಾಡಕ್ಟ್ ಫೇಮಸ್ ಆಯಿತು ಎಂದರೆ ಅದು ಚೆನ್ನಾಗಿಲ್ಲ ಎಂದು ಹೇಳೋಕೆ ಜನರ ಕೈಯಲ್ಲಿ ಆಗಲ್ಲ’ ಎಂದು ಫಹಾದ್ ಫಾಸಿಲ್ ಹೇಳುತ್ತಾರೆ. ಇದೇ ಸ್ಟ್ರೆಟಜಿ ‘ಸೈಯಾರ’ ಸಿನಿಮಾದಲ್ಲೂ ಕೆಲಸ ಮಾಡಿರಬಹುದು ಎಂಬುದು ಅನೇಕರ ಅಭಿಪ್ರಾಯ.

ಸೋಶಿಯಲ್ ಮೀಡಿಯಾದಲ್ಲಿ ‘ಸೈಯಾರ’ ಬಗ್ಗೆ ಒಳ್ಳೆಯ ಕ್ರೇಜ್ ಶುರವಾಗಿದೆ. ಅನೇಕರು ಸಿನಿಮಾ ನೋಡಿದ ಬಳಿಕ  ಥಿಯೇಟರ್​​ನಲ್ಲಿ  ಕಣ್ಣೀರು ಹಾಕಿದ್ದಾರೆ. ಕೆಲವರು ಎದೆ ಒಡೆಯುವಂತೆ ಅತ್ತಿದ್ದಾರೆ. ತೆರೆ ಎದುರು ಡ್ಯಾನ್ಸ್ ಮಾಡಿದ್ದಾರೆ. ಇದೆಲ್ಲ ಕ್ಯೂರಿಯಾಸಿಟಿ ಹೆಚ್ಚಿಸಿದೆ. ಇದು ಕೂಡ ಸಿನಿಮಾ ಬಗ್ಗೆ ಕ್ರೇಜ್ ಹೆಚ್ಚಲು ಕಾರಣ ಆಗಿರಬಹುದು.

ಇದನ್ನೂ ಓದಿ: ಯುವ ಹೀರೋ ಅಹಾನ್ ಅಬ್ಬರಕ್ಕೆ ಸ್ಟಾರ್ಸ್ ಕೂಡ ದಂಗು; 3 ದಿನಕ್ಕೆ 100 ಕೋಟಿ ಗಳಿಸಿದ ‘ಸೈಯಾರ’

ನಿರ್ಮಾಪಕರ ಸ್ಟ್ರೆಟಜಿ..

ಹೊಸ ಮುಖಗಳ ಪರಿಚಯ ಮಾಡುವಾಗ ಹೆಚ್ಚೆಚ್ಚು ಸಂದರ್ಶನಗಳನ್ನು ಮಾಡಲಾಗುತ್ತದೆ. ಬೇರೆ ಬೇರೆ ರಾಜ್ಯಗಳಿಗೆ ಟೂರ್ ಮಾಡಿ ಕಲಾವಿದರ ಬಗ್ಗೆ ಹೇಳಲಾಗುತ್ತದೆ. ಆದರೆ, ಈ ಮೆಥಡ್​ನ ‘ಸೈಯಾರ’ ತಂಡ ಸ್ಕಿಪ್ ಮಾಡಿದೆ. ಹೀಗಾಗಿ, ಹೆಚ್ಚಿನ ವಿಚಾರ ಗುಟ್ಟಾಗಿಯೇ ಇದ್ದಿದ್ದರಿಂದ ಕುತೂಹಲ ಹಾಗೆಯೇ ಉಳಿದುಕೊಂಡಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 1:21 pm, Tue, 22 July 25