ಐಶ್ವರ್ಯಾ ರೈ ಡಿವೋರ್ಸ್​ ವದಂತಿಗೆ ಫುಲ್ ಸ್ಟಾಪ್; ಈ ಫೋಟೋದಲ್ಲಿದೆ ಅಸಲಿ ವಿಷಯ

|

Updated on: Dec 06, 2024 | 7:23 PM

ಅಭಿಷೇಕ್​ ಬಚ್ಚನ್​ ಮತ್ತು ಐಶ್ವರ್ಯಾ ರೈ ಬಚ್ಚನ್​ ಅವರ ಸಂಸಾರದ ಬಗ್ಗೆ ಹಬ್ಬಿರುವ ಗಾಸಿಪ್ ಒಂದೆರಡಲ್ಲ. ಅವರ ಸಂಸಾರದಲ್ಲಿ ಏನೋ ಸಮಸ್ಯೆ ಎದುರಾಗಿದೆ ಎಂದು ಅನೇಕರು ಮಾತನಾಡಿಕೊಂಡಿದ್ದಾರೆ. ಆದರೆ ಆ ಎಲ್ಲ ಗಾಸಿಪ್​ಗಳಿಗೆ ಉತ್ತರ ನೀಡುವಂತೆ ಒಂದು ಫೋಟೋ ವೈರಲ್​ ಆಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಐಶ್ವರ್ಯಾ ರೈ ಡಿವೋರ್ಸ್​ ವದಂತಿಗೆ ಫುಲ್ ಸ್ಟಾಪ್; ಈ ಫೋಟೋದಲ್ಲಿದೆ ಅಸಲಿ ವಿಷಯ
ಐಶ್ವರ್ಯಾ ರೈ ಬಚ್ಚನ್​, ಅಭಿಷೇಕ್ ಬಚ್ಚನ್​ವೈರಲ್ ಫೋಟೋ
Follow us on

ಕಳೆದ ಕೆಲವು ತಿಂಗಳಿನಿಂದ ನಟಿ ಐಶ್ವರ್ಯಾ ರೈ ಬಚ್ಚನ್ ಅವರ ದಾಂಪತ್ಯ ಜೀವನದ ಬಗ್ಗೆ ಇಲ್ಲಸಲ್ಲದ ಗಾಸಿಪ್​ಗಳು ಕೇಳಿಬರುತ್ತಿವೆ. ಅವರ ಸಂಸಾರದಲ್ಲಿ ಬಿರುಕು ಮೂಡಿದೆ ಎಂದು ಕೆಲವರು ಗಾಳಿಸುದ್ದಿ ಹಬ್ಬಿಸಿದ್ದಾರೆ. ಪತಿ ಅಭಿಷೇಕ್ ಬಚ್ಚನ್​ ಜೊತೆ ಐಶ್ವರ್ಯಾ ರೈ ಅವರಿಗೆ ವೈಮನಸ್ಸು ಮೂಡಿದೆ ಎಂದು ಕೆಲವು ಮಾಧ್ಯಮಗಳು ಕೂಡ ಸುದ್ದಿ ಪ್ರಕಟ ಮಾಡಿವೆ. ಶೀಘ್ರದಲ್ಲೇ ಐಶ್ವರ್ಯಾ ರೈ ಬಚ್ಚನ್​ ಮತ್ತು ಅಭಿಷೇಕ್ ಬಚ್ಚನ್​ ಅವರು ವಿಚ್ಛೇದನ ಪಡೆಯಲಿದ್ದಾರೆ ಎಂದು ಕೆಲವರು ಮಾತನಾಡಿಕೊಂಡಿದ್ದಾರೆ. ಆದರೆ ಆ ಎಲ್ಲ ಅಂತೆ-ಕಂತೆಗಳಿಗೆ ಈಗ ಒಂದು ಫೋಟೋದಿಂದ ಪೂರ್ಣವಿರಾಮ ಬಿದ್ದಿದೆ.

ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರು ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿಲ್ಲ ಎಂಬ ಕಾರಣದಿಂದ ಅವರಿಬ್ಬರ ನಡುವೆ ಬಿರುಕು ಮೂಡಿದೆ ಎಂದು ಜನರು ಅಂದುಕೊಂಡಿದ್ದರು. ಈ ವಿಚಾರಕ್ಕೆ ಅಭಿಷೇಕ್​ ಬಚ್ಚನ್ ಅವರಾಗಲೀ, ಐಶ್ವರ್ಯಾ ರೈ ಅವರಾಗಲೀ ಸ್ಪಷ್ಟನೆ ನೀಡಿಲ್ಲ. ಹಾಗಾಗಿ ಗಾಸಿಪ್ ಇನ್ನಷ್ಟು ಜಾಸ್ತಿ ಆಯಿತು. ಆದರೆ ಈಗ ಎಲ್ಲದಕ್ಕೂ ಉತ್ತರ ಸಿಕ್ಕಿದೆ.

ಇತ್ತೀಚೆಗೆ ಅಭಿಷೇಕ್​ ಬಚ್ಚನ್​ ಮತ್ತು ಐಶ್ವರ್ಯಾ ರೈ ಬಚ್ಚನ್​ ಅವರು ತಮ್ಮ ಕುಟುಂಬದ ಸದಸ್ಯರ ಜೊತೆಗೆ ಒಂದು ಪಾರ್ಟಿಗೆ ತೆರಳಿದ್ದಾರೆ. ಆ ಪಾರ್ಟಿಯ ಫೋಟೋಗಳು ವೈರಲ್ ಆಗಿವೆ. ಪಾರ್ಟಿಯಲ್ಲಿದ್ದ ಉದ್ಯಮಿ ಅನು ರಂಜನ್, ನಟಿ ಆಯೆಷಾ ಜುಲ್ಕಾ ಜೊತೆ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್​ ಅವರು ಸೆಲ್ಫಿಗೆ ಪೋಸ್ ನೀಡಿದ್ದಾರೆ. ಅವರಿಬ್ಬರನ್ನು ಒಂದೇ ಫ್ರೇಮ್​ನಲ್ಲಿ ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ವೈರಲ್ ಆಗಿದೆ.

ಇದನ್ನೂ ಓದಿ: ಕೊನೆಗೂ ಐಶ್ವರ್ಯಾ ರೈಗೆ ಓಪನ್ ಆಗಿ ಧನ್ಯವಾದ ಹೇಳಿದ ಅಭಿಷೇಕ್; ಕಾರಣವೇನು?

ಒಂದು ವೇಳೆ ಐಶ್ವರ್ಯಾ ರೈ ಮತ್ತು ಅಭಿಷೇಕ್​ ಬಚ್ಚನ್​ ನಡುವೆ ಕಿರಿಕ್ ಇದ್ದಿದ್ದೇ ಹೌದಾಗಿದ್ದರೆ ಅವರು ಈ ಪಾರ್ಟಿಗೆ ಜೋಡಿಯಾಗಿ ಬರುತ್ತಿರಲಿಲ್ಲ. ಅಲ್ಲದೇ, ಅವರು ತುಂಬ ಖುಷಿ ಖುಷಿಯಿಂದ ಫೋಟೋಗೆ ಪೋಸ್​ ನೀಡಿದ್ದಾರೆ. ಇಬ್ಬರ ನಡುವೆ ಯಾವುದೇ ಮನಸ್ತಾಪ ಇಲ್ಲ ಎಂಬುದಕ್ಕೆ ಈ ಫೋಟೋ ಸಾಕ್ಷಿ ಒದಗಿಸುತ್ತಿದೆ. ಇಷ್ಟು ದಿನ ಹರಿದಾಡಿದ್ದ ಎಲ್ಲ ವದಂತಿಗಳು ಈಗ ಸೈಲೆಂಟ್ ಆಗಿವೆ. ‘ಈ ಒಂದು ಫೋಟೋ ಎಲ್ಲದಕ್ಕೂ ಉತ್ತರ ನೀಡುತ್ತಿದೆ. ಗಟ್ಟಿ ಮಹಿಳೆಯು ಸಂಸಾರದಲ್ಲಿನ ಚಿಕ್ಕ ಸಮಸ್ಯೆಗೆ ಡಿವೋರ್ಸ್​ ನೀಡುವುದಿಲ್ಲ’ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.