2024ರ ಸಾಲಿನ ಕಾನ್ ಚಿತ್ರೋತ್ಸವ (Cannes Film Festival 2024) ಕಳೆ ಕಟ್ಟಿದೆ. ವಿವಿಧ ದೇಶದ ಸೆಲೆಬ್ರಿಟಿಗಳು ಈ ಫಿಲ್ಮ್ ಫೆಸ್ಟಿವಲ್ನ ಕೆಂಪು ಹಾಸಿನ ಮೇಲೆ ಹೆಜ್ಜೆ ಹಾಕಿದ್ದಾರೆ. ಭಾರತದ ಅನೇಕ ಸೆಲೆಬ್ರಿಟಿಗಳಿಗೆ ಈ ಪ್ರತಿಷ್ಠಿತ ಚಿತ್ರೋತ್ಸವದಿಂದ ಆಹ್ವಾನ ಬಂದಿದೆ. ನಟಿ ಐಶ್ವರ್ಯಾ ರೈ ಬಚ್ಚನ್ (Aishwarya Rai Bachchan) ಅವರು ರೆಡ್ ಕಾರ್ಪೆಟ್ನಲ್ಲಿ ಮಿಂಚುತ್ತಿದ್ದಾರೆ. ಮೊದಲ ದಿನ ಆಕರ್ಷಕವಾದ ಕಾಸ್ಟ್ಯೂಮ್ ಧರಿಸಿ ಕಂಗೊಳಿಸಿದ್ದ ಅವರು ಎರಡನೇ ದಿನವೂ ವಿಶೇಷವಾದ ಉಡುಗೆ ಧರಿಸಿ ಮಿಂಚಿದ್ದಾರೆ. ಐಶ್ವರ್ಯಾ ರೈ (Aishwarya Rai) ಅವರ ಫೋಟೋಗಳನ್ನು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ಸಂಭ್ರಮಿಸಿದ್ದಾರೆ.
ಐಶ್ವರ್ಯಾ ರೈ ಬಚ್ಚನ್ ಅವರು ಇತ್ತೀಚಿನ ವರ್ಷಗಳಲ್ಲಿ ಸಿನಿಮಾಗಳ ಆಯ್ಕೆಯಲ್ಲಿ ಹೆಚ್ಚು ಚ್ಯೂಸಿ ಆಗಿದ್ದಾರೆ. ಅಪರೂಪಕ್ಕೆ ಅಲ್ಲೊಂದು ಇಲ್ಲೊಂದು ಸಿನಿಮಾ ಮಾತ್ರ ಒಪ್ಪಿಕೊಳ್ಳುತ್ತಾರೆ. ಹಾಗಿದ್ದರೂ ಕೂಡ ಅವರಿಗೆ ಇರುವ ಬೇಡಿಕೆ ಕಡಿಮೆ ಆಗಿಲ್ಲ. ಇಂದಿಗೂ ಅದೇ ಚಾರ್ಮ್ ಉಳಿಸಿಕೊಂಡಿರುವ ಅವರು ಕಾನ್ ಚಿತ್ರೋತ್ಸವದ ರೆಡ್ ಕಾರ್ಪೆಟ್ನ ಅಂದ ಹೆಚ್ಚಿಸಿದ್ದಾರೆ. 2002ರಿಂದಲೂ ಪ್ರತಿ ವರ್ಷ ಐಶ್ವರ್ಯಾ ರೈ ಅವರು ಈ ಚಿತ್ರೋತ್ಸವದಲ್ಲಿ ಭಾಗಿಯಾಗುತ್ತಿದ್ದಾರೆ.
Absolutely stunning !!
Aishwarya Rai at Cannes 2024 💖#AishwaryaRai#cannes2024 pic.twitter.com/kOeT80kfUY— Mishkat Mahir (@MahirMishkat) May 17, 2024
ನಟನೆಯ ಜೊತೆಗೆ ಮಾಡೆಲಿಂಗ್ನಲ್ಲೂ ದೊಡ್ಡ ಹೆಸರು ಮಾಡಿದ್ದಾರೆ ಐಶ್ವರ್ಯಾ ರೈ ಬಚ್ಚನ್. ಪ್ರತಿಷ್ಠಿತ ಸೌಂದರ್ಯ ವರ್ಧಕ ಕಂಪನಿಗಳಿಗೆ ಪ್ರಚಾರ ರಾಯಭಾರಿ ಆಗಿರುವ ಅವರು ಪ್ರತಿ ವರ್ಷವೂ ಕಾನ್ ಚಿತ್ರೋತ್ಸವಕ್ಕೆ ಹಾಜರಿ ಹಾಕುತ್ತಾರೆ. ಈ ವರ್ಷ ಅವರ ಕೈಗೆ ಪೆಟ್ಟಾಗಿದೆ. ಆದರೂ ಸಹ ಅವರು ಕಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಭಾಗವಹಿಸುವುದನ್ನು ತಪ್ಪಿಸಿಕೊಂಡಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.
ಇದನ್ನೂ ಓದಿ: ಕಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ಐಶ್ವರ್ಯಾ ರೈ
ಐಶ್ವರ್ಯಾ ರೈ ಬಚ್ಚನ್ ಅವರ ಬಲಗೈಗೆ ಪೆಟ್ಟಾಗಿದೆ. ಕೈ ನೋವು ಇರುವ ಕಾರಣ ಬ್ಯಾಂಡೇಜ್ ಹಾಕಲಾಗಿದೆ. ಕೈಯಲ್ಲಿ ಬ್ಯಾಂಡೇಜ್ ಇದ್ದರೂ ಕೂಡ ಐಶ್ವರ್ಯಾ ರೈ ಅವರು ಮಿರಿ ಮಿರಿ ಮಿಂಚುವಂತಹ ಗೌನ್ಗಳಲ್ಲಿ ಧರಿಸಿ ಕೆಂಪು ಹಾಸಿನ ಮೇಲೆ ನಡೆದುಬಂದಿದ್ದಾರೆ. ಅವರ ಆತ್ಮವಿಶ್ವಾಸದ ಬಗ್ಗೆ ಎಲ್ಲರೂ ಮಾತನಾಡುತ್ತಾ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಕಾನ್ ಚಿತ್ರೋತ್ಸವದಲ್ಲಿ ಭಾಗವಹಿಸಲು ಐಶ್ವರ್ಯಾ ರೈ ಜೊತೆ ಅವರ ಪುತ್ರಿ ಆರಾಧ್ಯಾ ಬಚ್ಚನ್ ಕೂಡ ಹೋಗಿದ್ದಾರೆ. ಅವರಿಬ್ಬರ ಫೋಟೋಗಳು ಸಹ ವೈರಲ್ ಆಗಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.