ಶೀಘ್ರವೇ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ವಿಚ್ಛೇದನ? ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ

ಸ್ವಘೋಷಿತ ಚಿತ್ರ ವಿಶ್ಲೇಷಕ ಉಮೈರ್ ಸಂಧು ಇತ್ತೀಚೆಗೆ ಟ್ವೀಟ್ ಮಾಡಿದ್ದರು. ಐಶ್ವರ್ಯಾ-ಅಭಿಷೇಕ್ ವಿಚ್ಛೇದನದ ಬಗ್ಗೆ ಬರೆದುಕೊಂಡಿದ್ದರು. ಇದರ ಜೊತೆಗೆ ಅವರು ಕಳೆದ ಕೆಲವು ದಿನಗಳಿಂದ ಒಟ್ಟಾಗಿ ಕಾಣಿಸಿಕೊಂಡಿಲ್ಲ.

ಶೀಘ್ರವೇ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ವಿಚ್ಛೇದನ? ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ
ಅಭಿಷೇಕ್​-ಐಶ್ವರ್ಯಾ
Edited By:

Updated on: Dec 05, 2023 | 12:42 PM

ಸೆಲೆಬ್ರಿಟಿ ದಂಪತಿಗಳ ಮಧ್ಯೆ ವೈಮನಸ್ಸು ಮೂಡುವುದು, ಅವರು ವಿಚ್ಛೇದನ ಪಡೆಯುವುದು ಹೊಸದಲ್ಲ. ಈ ರೀತಿ ವಿಚ್ಛೇದನ ಪಡೆದ ಅನೇಕ ಸೆಲೆಬ್ರಿಟಿಗಳಿದ್ದಾರೆ. ಈಗ ಅಭಿಷೇಕ್ ಬಚ್ಚನ್ (Abhishek Bachchan) ಹಾಗೂ ಐಶ್ವರ್ಯಾ ರೈ ದಂಪತಿ ಇದೇ ವಿಚಾರಕ್ಕೆ ಸುದ್ದಿ ಆಗುತ್ತಿದ್ದಾರೆ. ಇವರು ವಿಚ್ಛೇದನ ಪಡೆಯಲಿದ್ದಾರೆಯೇ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭರ್ಜರಿ ಚರ್ಚೆ ಆಗುತ್ತಿದೆ.

ಅಭಿಷೇಕ್ ಬಚ್ಚನ್ ಮತ್ತು ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಸಂಬಂಧ ಯಾವಾಗಲೂ ಚರ್ಚೆಯಲ್ಲಿರುವ ವಿಷಯ. ಕಳೆದ ಕೆಲವು ದಿನಗಳಿಂದ ಅಭಿಷೇಕ್-ಐಶ್ವರ್ಯಾ ವಿಚ್ಛೇದನದ ಕುರಿತು ಚರ್ಚೆಯಾಗುತ್ತಿದೆ. ಐಶ್ವರ್ಯಾ ಮತ್ತು ಅಭಿಷೇಕ್ ಕಳೆದ ಹಲವು ದಿನಗಳಿಂದ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಇತ್ತೀಚೆಗೆ ಐಶ್ವರ್ಯಾ ರೈ ಹುಟ್ಟುಹಬ್ಬವಿತ್ತು. ಆಗ ಐಶ್ವರ್ಯಾ ಜೊತೆಗಿದ್ದಿದ್ದು ಅವರ ತಾಯಿ ಮತ್ತು ಮಗಳು ಮಾತ್ರ. ಅವರ ಬರ್ತ್​ಡೇ ದಿನ ಅಭಿಷೇಕ್ ಅವರು ಐಶ್ವರ್ಯಾ ಅವರ ಫೋಟೋನ ಗೂಗಲ್​ನಲ್ಲಿ ಹುಡುಕಿ ಡೌನ್​ಲೋಡ್​ ಮಾಡಿ ಪೋಸ್ಟ್ ಮಾಡಿದ್ದರು. ಹ್ಯಾಪಿ ಬರ್ತ್​ಡೇ ಎಂದಷ್ಟೇ ಬರೆದಿದ್ದರು. ಇಬ್ಬರ ನಡುವೆ ವಿಚ್ಛೇದನದ ಮಾತುಕತೆ ಶುರುವಾಗಿದೆ ಎಂದು ಹೇಳಲಾಗುತ್ತಿದೆ. ಈ ನಡುವೆ ಹಳೆಯ ಸಂದರ್ಶನವೊಂದು ವೈರಲ್ ಆಗಿದೆ.

2010ರಲ್ಲಿ ನಡೆದ ಸಂದರ್ಶನವೊಂದರಲ್ಲಿ ಐಶ್ವರ್ಯಾ ಅವರು ‘ಅಭಿಷೇಕ್ ಮತ್ತು ನಾನು ಪ್ರತಿದಿನ ಜಗಳವಾಡುತ್ತೇವೆ…’ ಎಂದು ಹೇಳಿದ್ದರು. ‘ನಮ್ಮ ನಡುವೆ ಭಿನ್ನಾಭಿಪ್ರಾಯವಿದೆ. ಈ ಭಿನ್ನಾಭಿಪ್ರಾಯ ಬೇಗ ಇತ್ಯರ್ಥವಾಗುತ್ತವೆ. ನಮ್ಮ ಸಂಬಂಧದಲ್ಲಿ ಏರಿಳಿತ ಇದೆ. ಅವರಿಲ್ಲದಿದ್ದರೆ ಜೀವನವು ಸಂಪೂರ್ಣವಾಗಿ ನೀರಸವಾಗಿರುತ್ತದೆ. ನಾವು ನಮ್ಮ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಪ್ರಯತ್ನಿಸುತ್ತೇವೆ’ ಎಂದು ಹೇಳಿದ್ದರು. ಈಗ ಅಭಿಷೇಕ್ ಹಾಗೂ ಐಶ್ವರ್ಯಾ ಮಧ್ಯೆ ಮೂಡಿರುವ ಭಿನ್ನಾಭಿಪ್ರಾಯ ವಿಚ್ಛೇದನದವರೆಗೆ ಬಂದಿದೆ ಎನ್ನಲಾಗುತ್ತಿದೆ.

ಉಮೈರ್​ ಸಂಧು ಪೋಸ್ಟ್

ಸ್ವಘೋಷಿತ ಚಿತ್ರ ವಿಶ್ಲೇಷಕ ಉಮೈರ್ ಸಂಧು ಇತ್ತೀಚೆಗೆ ಟ್ವೀಟ್ ಮಾಡಿದ್ದರು. ಐಶ್ವರ್ಯಾ-ಅಭಿಷೇಕ್ ವಿಚ್ಛೇದನದ ಬಗ್ಗೆ ಬರೆದುಕೊಂಡಿದ್ದರು. ‘ಅಭಿಷೇಕ್-ಐಶ್ವರ್ಯಾ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ’ ಎಂದು ಉಮೈರ್ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇವರು ಪೋಸ್ಟ್ ಮಾಡುವ ಬಹುತೇಕ ಎಲ್ಲಾ ಟ್ವೀಟ್​ಗಳು ಫೇಕ್ ಆಗಿರುತ್ತವೆ. ಹೀಗಾಗಿ, ಇವರ ಟ್ವೀಟ್​ನ ಜನ ಗಂಭೀರವಾಗಿ ಸ್ವೀಕರಿಸಿಲ್ಲ.

ಇದನ್ನೂ ಓದಿ: ಅಭಿಷೇಕ್ ಬಚ್ಚನ್​ಗೆ ಪತ್ನಿ ಐಶ್ವರ್ಯಾ ರೈ ಮೇಲೆ ಕಡಿಮೆ ಆಗಿದೆ ಪ್ರೀತಿ? ಸಾಕ್ಷಿ ಹುಡುಕಿದ ಫ್ಯಾನ್ಸ್

ಐಶ್ವರ್ಯಾ-ಅಭಿಷೇಕ್ ಸಂಬಂಧ

ನಟ ಸಲ್ಮಾನ್ ಖಾನ್ ಜೊತೆಗಿನ ಬ್ರೇಕಪ್​ ನಂತರ ಐಶ್ವರ್ಯಾ ರೈ ಸುಮ್ಮನೆ ಇದ್ದರು. ಆ ಬಳಿಕ ಅವರು ಅಭಿಷೇಕ್​ ಜೊತೆ ಪ್ರೀತಿಯಲ್ಲಿ ಬಿದ್ದರು. 2007ರಲ್ಲಿ ಕೆಲವೇ ಜನರ ಸಮ್ಮುಖದಲ್ಲಿ ಐಶ್ವರ್ಯ-ಅಭಿಷೇಕ್ ಮದುವೆಯಾದರು. 2011ರಲ್ಲಿ ಐಶ್ವರ್ಯಾ ಆರಾಧ್ಯಗೆ ಜನ್ಮ ನೀಡಿದರು. ಈಗ ಇಬ್ಬರ ವಿಚ್ಛೇದನದ ವಿಚಾರ ಎಲ್ಲೆಡೆ ಚರ್ಚೆಯಾಗುತ್ತಿದೆ. ಇದು ನಿಜ ಆಗದಿರಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us