ದೀಪಾವಳಿಗೆ ಎಲ್ಲ ಪ್ರಮುಖ ಚಿತ್ರರಂಗಳಲ್ಲಿಯೂ ಸಹ ಕೆಲ ಒಳ್ಳೆ ಸಿನಿಮಾಗಳನ್ನು ತೆರೆಗೆ ಬಂದಿವೆ. ಕನ್ನಡದಲ್ಲಿ ‘ಬಘೀರ’, ತೆಲುಗಿನಲ್ಲಿ ‘ಲಕ್ಕಿ ಭಾಸ್ಕರ್’ ಮತ್ತು ‘ಕ’ ಬಿಡುಗಡೆ ಆಗಿದೆ. ತಮಿಳಿನಲ್ಲಿ ಶಿವಕಾರ್ತಿಕೇಯನ್ ಮತ್ತು ಸಾಯಿ ಪಲ್ಲವಿ ನಟಿಸಿರುವ ‘ಅಮರನ್’ ಬಿಡುಗಡೆ ಆಗಿದೆ. ಆದರೆ ಹಿಂದಿಯಲ್ಲಿ ಒಂದೇ ದಿನ ಎರಡೂ ಬಿಗ್ ಬಜೆಟ್ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆ ಆಗಿವೆ. ಅಜಯ್ ದೇವಗನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಸಿಂಘಂ ಅಗೇನ್’ ಹಾಗೂ ಕಾರ್ತಿಕ್ ಆರ್ಯನ್ ನಟನೆಯ ‘ಭೂಲ್ ಭುಲಯ್ಯ 3’ ಸಿನಿಮಾ ಬಿಡುಗಡೆ ಆಗಿದೆ. ಸಿನಿಮಾ ನೋಡಿರುವ ಮಂದಿ ಸಾಮಾಜಿಕ ಜಾಲತಾಣದಲ್ಲಿ ವಿಮರ್ಶೆಗಳನ್ನು ಹಂಚಿಕೊಂಡಿದ್ದಾರೆ.
‘ಸಿಂಗಂ ಅಗೇನ್’ ಸಿನಿಮಾ ಬಹುತಾರಾಗಣದ ಸಿನಿಮಾ. ಬಾಲಿವುಡ್ನ ದೊಡ್ಡ ದೊಡ್ಡ ಸ್ಟಾರ್ ನಟರುಗಳು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಮುಖ್ಯ ಪಾತ್ರದಲ್ಲಿ ಅಜಯ್ ದೇವಗನ್ ನಟಿಸಿದ್ದಾರೆ. ಅವರ ನಾಯಕಿಯಾಗಿ ಕರೀನಾ ಕಪೂರ್ ಇದ್ದಾರೆ. ಟೈಗರ್ ಶ್ರಾಫ್, ರಣ್ವೀರ್ ಸಿಂಗ್, ಅಕ್ಷಯ್ ಕುಮಾರ್, ದೀಪಿಕಾ ಪಡುಕೋಣೆ ಅವರುಗಳು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಮಾತ್ರವಲ್ಲದೆ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಸಹ ಈ ಸಿನಿಮಾದ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಇಷ್ಟು ದೊಡ್ಡ ತಾರಾಗಣ ಇರುವ ಕಾರಣ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಿತ್ತು, ಇದೀಗ ಸಿನಿಮಾ ನೋಡಿದ ನೆಟ್ಟಿಗರ ಅಭಿಪ್ರಾಯ ಏನಾಗಿದೆ?
ಬಾಕ್ಸ್ ಆಫೀಸ್ ವಿಶ್ಲೇಷಕ, ಸ್ವತಂತ್ರ್ಯ ಸಿನಿಮಾ ವಿಮರ್ಶಕ ತರಣ್ ಆದರ್ಶ್, ‘ಸಿಂಗಂ ಅಗೇನ್’ ಸಿನಿಮಾ ಬಗ್ಗೆ ಟ್ವೀಟ್ ಮಾಡಿದ್ದು, ‘ಅದ್ಭುತವಾಗಿದೆ. ಸಿನಿಮಾಕ್ಕೆ ಐದರಲ್ಲಿ ನಾಲ್ಕು ಸ್ಟಾರ್ ಕೊಡಬಹುದು. ಅದ್ಭುತವಾದ ಪಾತ್ರವರ್ಗ. ಭಯಂಕರ ಆಕ್ಷನ್, ‘ಸಿಂಗಂ’ ಬ್ರ್ಯಾಂಡ್ ಅನ್ನು ರೋಹಿತ್ ಶೆಟ್ಟಿ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಸಿನಿಮಾದ ಪ್ರತಿ ಸೀನ್ ಮಾಸ್ಸಿ ಆಗಿದೆ. ಸಿನಿಮಾದ ಕೊನೆಯಲ್ಲಿ ಒಳ್ಳೆ ಸರ್ಪ್ರೈಸ್ ಸಹ ಇದೆ’ ಎಂದಿದ್ದಾರೆ.
ಇದನ್ನೂ ಓದಿ:ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರೋ ಭಯ; ‘ಸಿಂಗಂ ಅಗೇನ್’ ಚಿತ್ರದ ಹಲವು ದೃಶ್ಯಗಳಿಗೆ ಕತ್ತರಿ
ಗುರು ಎಂಬುವರು ಟ್ವೀಟ್ ಮಾಡಿ, ‘ಅಕ್ಷಯ್ ಕುಮಾರ್ ಅತಿಥಿ ಪಾತ್ರ ಮತ್ತು ಅವರ ಆಕ್ಷನ್ ಸನ್ನಿವೇಶ ಇರದೇ ಇದ್ದಿದ್ದರೆ ಇಡೀ ಸಿನಿಮಾ ಪಾತಾಳಕ್ಕೆ ಬೀಳುತ್ತಿತ್ತು. ಇನ್ನೇನು ಫ್ಲಾಪ್ ಆಗಲಿದ್ದ ಸಿನಿಮಾವನ್ನು ಅಕ್ಷಯ್ ಕುಮಾರ್ ಬಚಾವ್ ಮಾಡಿದ್ದಾರೆ’ ಎಂದಿದ್ದಾರೆ.
#SinghamAgain Full Review:-
A good mass-action entertainer and I would say it’s the 2nd best in the #CopUniverse. The standout aspect of this film is the parallel of Ramayana that Rohit successfully blends into the storyline, which worked beautifully. (1/2) pic.twitter.com/IMdVZnXukg
— ZeMo (@ZeM6108) November 1, 2024
ಮತ್ತೊಬ್ಬ ಜನಪ್ರಿಯ ಟ್ವಿಟ್ಟರ್ ಸಿನಿಮಾ ವಿಮರ್ಶಕ ಕೋಮಲ್ ನಾಥ್ ಟ್ವೀಟ್ ಮಾಡಿದ್ದು, ‘ಈ ಸಿನಿಮಾದಲ್ಲಿ ರಾಮಾಯಣವನ್ನು ಕತೆಗೆ ಕನೆಕ್ಟ್ ಮಾಡಿರುವ ರೀತಿ ಅದ್ಭುತವಾಗಿದೆ. ಸಿನಿಮಾದಲ್ಲಿ ಆಕ್ಷನ್ ಇದೆ, ಸೆಂಟಿಮೆಂಟ್ ಇದೆ, ಮೆಲೊಡ್ರಾಮಾ ಇದೆ, ಹಾಸ್ಯ ಸನ್ನಿವೇಶಗಳು ಸಹ ಸಾಕಷ್ಟಿವೆ. ಇಡೀ ಸಿನಿಮಾ ಕೌಟುಂಬಿಕ ಪ್ರೇಕ್ಷಕರಿಗೆ ಬಹಳ ಇಷ್ಟವಾಗಲಿದೆ’ ಎಂದಿದ್ದಾರೆ.
ಜೀಮೋ ಎಂಬುವರು ಟ್ವೀಟ್ ಮಾಡಿ, ‘ಸಿಂಗಂ ಅಗೇನ್’ ಒಂದು ಒಳ್ಳೆಯ ಆಕ್ಷನ್ ಸಿನಿಮಾ. ಸಿಂಗಂ ಸರಣಿಯಲ್ಲಿ ಅಥವಾ ರೋಹಿತ್ ಶೆಟ್ಟಿಯ ‘ಕಾಪ್ ಯೂನಿವರ್ಸ್’ ಸಿನಿಮಾಗಳ ಎರಡನೇ ಬೆಸ್ಟ್ ಸಿನಿಮಾ ಇದು. ಸಿನಿಮಾದ ಕತೆಗೆ ರಾಮಾಯಣದ ಕತೆಯನ್ನು ಜೊತೆಯಾಗಿ ತೆಗೆದುಕೊಂಡು ಹೋಗಿರುವ ರೀತಿ ಚೆನ್ನಾಗಿದೆ. ಇದು ಕೌಟುಂಬಿಕ ಪ್ರೇಕ್ಷಕರಿಗೆ ಇಷ್ಟವಾಗಲಿದೆ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ