ಅಂಬಾನಿ ಮದುವೆಯಲ್ಲಿ ಮಿಂಚು ಹರಿಸಿದ ಏಕಾನ್: ಪಡೆದ ಸಂಭಾವನೆಯೆಷ್ಟು?

Ambani: ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಪ್ರೀ ವೆಡ್ಡಿಂಗ್​ ಕಾರ್ಯಕ್ರಮಕ್ಕೆ ಅಂತರಾಷ್ಟ್ರೀಯ ಪಾಪ್ ಗಾಯಕ ಏಕಾನ್ ಅನ್ನು ಕರೆಸಲಾಗಿದೆ. ಅಂದಹಾಗೆ ಏಕಾನ್​ಗೆ ನೀಡಿರುವ ಸಂಭಾವನೆ ಎಷ್ಟು ಕೋಟಿ?

ಅಂಬಾನಿ ಮದುವೆಯಲ್ಲಿ ಮಿಂಚು ಹರಿಸಿದ ಏಕಾನ್: ಪಡೆದ ಸಂಭಾವನೆಯೆಷ್ಟು?

Updated on: Mar 05, 2024 | 12:26 PM

ಮುಖೇಶ್ ಅಂಬಾನಿ-ನೀತಾ ಅಂಬಾನಿ ಪುತ್ರ ಅನಂತ್ ಅಂಬಾನಿ (Anant Ambani) ಪ್ರೀ ವೆಡ್ಡಿಂಗ್ ಸಡಗರ ಜಾಮ್​ನಗರ್​ನಲ್ಲಿ ಜೋರಾಗಿ ನಡೆಯುತ್ತಿದೆ. ಹಾಲಿವುಡ್, ಬಾಲಿವುಡ್ ನ ಹಲವು ತಾರೆಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಫೇಸ್​ಬುಕ್ ಸಂಸ್ಥಾಪಕ ಮಾರ್ಕ್ ಝುಕರ್​ಬರ್ಗ್, ಮೈಕ್ರೋಸಾಫ್ಟ್ ಮಾಲೀಕ ಬಿಲ್ ಗೇಟ್ಸ್ ಸೇರಿದಂತೆ ವಿಶ್ವದ ಹಲವು ಟಾಪ್ ಉದ್ಯಮಿಗಳು ಸಹ ವಿವಾಹ ಪೂರ್ವ ಸಂಭ್ರಮಕ್ಕೆ ಹಾಜರಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಹಾಲಿವುಡ್ ಪಾಪ್ ಗಾಯಕಿ ರಿಯಾನಾ ಅದ್ಭುತವಾಗಿ ಪ್ರದರ್ಶನ ನೀಡಿ ಹೋಗಿದ್ದಾರೆ. ಇದೀಗ ಮತ್ತೊಬ್ಬ ಜನಪ್ರಿಯ ಪಾಪ್ ಗಾಯಕ ಏಕಾನ್ ಅನಂತ್ ಅಂಬಾನಿ ಮದುವೆಯಲ್ಲಿ ಹಾಡಿ-ಕುಣಿದು ಕುಪ್ಪಳಿಸಿದ್ದಾರೆ.

ಏಕಾನ್, ಹಾಲಿವುಡ್​ನ ಅತ್ಯಂತ ಜನಪ್ರಿಯ ಪಾಪ್ ಗಾಯಕ. ‘ಲೋನ್​ಲಿ’, ‘ಬ್ಯೂಟಿಫುಲ್’, ‘ಸ್ಮ್ಯಾಕ್ ದಾಟ್’, ‘ಬೊನಾನ್ಜಾ’ ಇನ್ನೂ ಹಲವು ಸೂಪರ್-ಡೂಪರ್ ಹಿಟ್ ಹಾಡುಗಳನ್ನು ಏಕಾನ್ ಹಾಡಿದ್ದಾರೆ. ನಿನ್ನೆಯಷ್ಟೆ ಏಕಾನ್ ಅನಂತ್ ಹಾಗೂ ರಾಧಿಕಾರ ಪ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿದ್ದು, ಬಾಲಿವುಡ್​ನ ತಾರೆಯರನ್ನು ಕುಣಿಸಿದ್ದಾರೆ, ತಾವೂ ಸಹ ಸಖತ್ ಕುಣಿದು ಎಂಜಾಯ್ ಮಾಡಿದ್ದಾರೆ.

ಇದನ್ನೂ ಓದಿ:ಅಂಬಾನಿಯ ಭಾವಿ ಸೊಸೆಗೆ ಸೀರೆ ಉಡಿಸಿ ಬರೋಬ್ಬರಿ 2ಲಕ್ಷ ರೂ ಸಂಭಾವಣೆ ಪಡೆದ ಬೆಂಗಳೂರಿನ ಮಹಿಳೆ

ಏಕಾನ್​ಗೆ ಭಾರತ ಹೊಸದೇನೂ ಅಲ್ಲ. ಈ ಹಿಂದೆ ಶಾರುಖ್ ಖಾನ್ ನಟಿಸಿ, ನಿರ್ಮಾಣವೂ ಮಾಡಿದ್ದ ‘ರಾ-ಒನ್’ ಸಿನಿಮಾದಲ್ಲಿ ‘ಚಮಕ್ ಚಲ್ಲೊ’ ಹಾಡನ್ನು ಏಕಾನ್ ಹಾಡಿದ್ದರು. ಆಗಲೂ ಬಾಲಿವುಡ್​ನ ಹಲವು ಸ್ಟಾರ್​ಗಳೊಟ್ಟಿಗೆ ಪಾರ್ಟಿ ಸಹ ಮಾಡಿದ್ದರು ಏಕಾನ್. ಇದೀಗ ಮತ್ತೊಮ್ಮೆ ಭಾರತಕ್ಕೆ ಬಂದು ಬಾಲಿವುಡ್ ತಾರೆಯರೊಟ್ಟಿಗೆ ಬೆರೆತಿದ್ದಾರೆ. ಪ್ರೀ ವೆಡ್ಡಿಂಗ್​ನಲ್ಲಿ ಪ್ರದರ್ಶನ ನೀಡುವ ವೇಳೆ ಶಾರುಖ್ ಖಾನ್​ರನ್ನು ವೇದಿಕೆಗೆ ಎಳೆತಂದು ಡ್ಯಾನ್ಸ್ ಮಾಡಿಸಿದ್ದಾರೆ. ಸಲ್ಮಾನ್ ಖಾನ್ ಜೊತೆ ಜುಗಲ್​ಬಂಧಿ ಸಹ ಮಾಡಿದ್ದಾರೆ.

ಅನಂತ್-ರಾಧಿಕಾ ಪ್ರೀ ವೆಡ್ಡಿಂಗ್​ನಲ್ಲಿ ಪ್ರದರ್ಶನ ನೀಡಲು ಏಕಾನ್​ಗೆ ಸುಮಾರು 30 ಕೋಟಿ ರೂಪಾಯಿಗಳನ್ನು ಸಂಭಾವನೆ ರೂಪದಲ್ಲಿ ನೀಡಲಾಗಿದೆ ಎನ್ನಲಾಗುತ್ತಿದೆ. ಏಕಾನ್, ವಿಶ್ವದ ದುಬಾರಿ ಪಾಪ್ ಗಾಯಕರಲ್ಲಿ ಒಬ್ಬರು, ಹಾಗಾಗಿ ಭಾರಿ ಮೊತ್ತದ ಸಂಭಾವನೆ ನೀಡಿ ಅವರನ್ನು ಕರೆಸಿ ಖಾಸಗಿ ಕಾರ್ಯಕ್ರಮ ಕೊಡಿಸಲಾಗಿದೆ. ಕೆಲವು ದಿನಗಳ ಹಿಂದೆ ಪ್ರದರ್ಶನ ನೀಡಿದ ರಿಯಾನಾಗೆ ಸುಮಾರು 74 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿತ್ತಂತೆ. ಪ್ರೀ ವೆಡ್ಡಿಂಗ್​ಗೆ ರಿಯಾನಾ, ಏಕನ್​ ಅವರುಗಳನ್ನು ಕರೆಸಿರುವ ಅಂಬಾನಿ, ಮದುವೆಗೆ ಟೇಲರ್ ಸ್ವಿಫ್ಟ್ ಅನ್ನೇ ಕರೆಸುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us