ಬಾಲಿವುಡ್ನಲ್ಲಿ (Bollywood) ಕೆಲವು ಜನಪ್ರಿಯ ಸಿನಿಮಾ ಸರಣಿಗಳಿವೆ. ‘ಧೂಮ್’, ‘ಟೈಗರ್’, ‘ರಾಜ್’, ‘ಸ್ಟುಡೆಂಟ್ ನಂಬರ್ 1’, ‘ಲವ್ ಆಜ್ ಕಲ್’, ‘ಹೇರಾ ಪೇರಿ’, ‘ಭೂಲ್ ಭುಲಯ್ಯ’, ‘ಗೋಲ್ಮಾಲ್’, ‘ಸೂರ್ಯವಂಶಿ’, ‘ಸಿಂಗಂ’ ಹೀಗೆ ಪಟ್ಟಿ ಬೆಳೆಯುತ್ತದೆ. ಇವುಗಳಲ್ಲಿ ಹಾಸ್ಯ ಪ್ರಧಾನ ಸಿನಿಮಾಗಳು ಕೆಲವಷ್ಟೆ. ಇದೇ ಪಟ್ಟಿಗೆ ಸೇರುತ್ತದೆ ‘ಜಾಲಿ ಎಲ್ಎಲ್ಬಿ’. ಕೋರ್ಟ್ನಲ್ಲಿ ನಡೆಯುವ ತಮಾಷೆ ಪ್ರಸಂಗಗಳ ಜೊತೆಗೆ ಕ್ಲಿಷ್ಟವಾದ ಪ್ರಕರಣಗಳನ್ನು ನಾಯಕ ಬುದ್ಧಿವಂತಿಕೆಯಿಂದ ಬಗೆಹರಿಸುವ ಕತೆಗಳನ್ನು ಈ ಸಿನಿಮಾ ಸರಣಿ ಒಳಗೊಂಡಿದೆ.
ಮೊದಲಿಗೆ ‘ಜಾಲಿ ಎಲ್ಎಲ್ಬಿ’ ಸಿನಿಮಾದಲ್ಲಿ ಬೇಜವಾಬ್ದಾರಿಯುತ ವಕೀಲನ ಪಾತ್ರದಲ್ಲಿ ಅರ್ಷದ್ ವಾರ್ಸಿ ನಟಿಸಿದ್ದರು. ಅರ್ಷದ್ ಎದುರಾಗಿ ಬೊಮನ್ ಇರಾನಿ ನಟಿಸಿದ್ದರು. ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಅದಾದ ಬಳಿಕ ‘ಜಾಲಿ ಎಲ್ಲ್ಬಿ 2’ ಸಿನಿಮಾನಲ್ಲಿ ಅರ್ಷದ್ ವಾರ್ಸಿಯನ್ನು ಪಕ್ಕಕ್ಕಿಟ್ಟು ಅಕ್ಷಯ್ ಕುಮಾರ್ ನಾಯಕರಾದರು. ಆ ಸಿನಿಮಾ ಸಹ ಸೂಪರ್-ಡೂಪರ್ ಹಿಟ್ ಆಯ್ತು. ಇದೀಗ ‘ಜಾಲಿ ಎಲ್ಎಲ್ಬಿ 3’ ಸಿನಿಮಾ ಸೆಟ್ಟೇರಲು ರೆಡಿಯಾಗಿದೆ.
ಇದನ್ನೂ ಓದಿ:ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಕೈಯಲ್ಲಿ ಎಷ್ಟು ಸಿನಿಮಾಗಳಿವೆ?
‘ಜಾಲಿ ಎಲ್ಎಲ್ಬಿ 3’ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಮತ್ತೆ ವಕೀಲರಾಗಿ ಮಿಂಚಲಿದ್ದಾರೆ. ಆದರೆ ಸರಣಿಯ ಮೊದಲ ಸಿನಿಮಾದಲ್ಲಿ ಜಾಲಿ ಆಗಿ ನಟಿಸಿದ್ದ ಅರ್ಷದ್ ವಾರ್ಸಿ ‘ಜಾಲಿ ಎಲ್ಎಲ್ಬಿ ’ ಸಿನಿಮಾ ಸರಣಿಗೆ ಮತ್ತೆ ಮರಳಿದ್ದಾರೆ. ‘ಜಾಲಿ ಎಲ್ಎಲ್ಬಿ 3’ ಸಿನಿಮಾನಲ್ಲಿ ಅಕ್ಷಯ್ ಕುಮಾರ್ ಹಾಗೂ ಅರ್ಷದ್ ವಾರ್ಸಿ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಇಬ್ಬರೂ ನಾಯಕ ನಟರಾಗಿ ನಟಿಸಲಿದ್ದಾರೆಯೇ ಅಥವಾ ಅರ್ಷದ್ ವಾರ್ಸಿ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆಯೇ ಕಾದು ನೋಡಬೇಕಿದೆ.
‘ಜಾಲಿ ಎಲ್ಎಲ್ಬಿ 3’ ಸಿನಿಮಾದ ಚಿತ್ರೀಕರಣ ಫೆಬ್ರವರಿ ತಿಂಗಳಲ್ಲಿ ಪ್ರಾರಂಭವಾಗಲಿದೆ. ಸಿನಿಮಾದ ನಿರ್ದೇಶವನ್ನು ಸುಭಾಷ್ ಕಪೂರ್ ನಿರ್ದೇಶನ ಮಾಡಲಿದ್ದಾರೆ. ಸಿನಿಮಾದ ಚಿತ್ರಕತೆಯನ್ನು ಅವರೇ ಬರೆದಿದ್ದಾರೆ. ಸಿನಿಮಾದ ನಾಯಕಿ ಹಾಗೂ ಇನ್ನಿತರೆ ಪಾತ್ರವರ್ಗಗಳ ಆಯ್ಕೆಯೂ ಪೂರ್ಣಗೊಂಡಿದ್ದು ಚಿತ್ರತಂಡವು ಮಾಹಿತಿಗಳನ್ನು ಹಂಚಿಕೊಳ್ಳಲಿದೆ. ಅಕ್ಷಯ್ ಕುಮಾರ್ ಇತ್ತೀಚೆಗಷ್ಟೆ ‘ಬಡೆ ಮಿಯಾ ಚೋಟೆ ಮಿಯಾ’ ಹಾಗೂ ‘ದಿ ಗ್ರೇಟ್ ಇಂಡಿಯನ್ ರೆಸ್ಕ್ಯೂ’ ಸಿನಿಮಾಗಳ ಚಿತ್ರೀಕರಣ ಮುಗಿಸಿದ್ದಾರೆ. ‘ಸ್ಕೈ ಫೋರ್ಸ್’ ಹೆಸರಿನ ಸಿನಿಮಾದಲ್ಲಿ ಪ್ರಸ್ತುತ ನಟಿಸುತ್ತಿದ್ದಾರೆ. ಇದರ ಜೊತೆಗೆ ‘ಜಾಲಿ ಎಲ್ಎಲ್ಬಿ 3’ ಸಿನಿಮಾದಲ್ಲಿಯೂ ನಟಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ