ಅಕ್ಷಯ್-ಶಾರುಖ್ ಆಲೋಚನೆಯಲ್ಲಿ ಇದೆ ಸಾಕಷ್ಟು ಹೋಲಿಕೆ? ಏನದು?

Akshay Kumar and Shah Rukh Khan: ಅಕ್ಷಯ್ ಕುಮಾರ್ ಮತ್ತು ಶಾರುಖ್ ಖಾನ್ ಬಾಲಿವುಡ್​ನ ದೊಡ್ಡ ಸ್ಟಾರ್ ನಟರು. ಇಬ್ಬರು ಸಿನಿಮಾ ಮಾಡುವ ರೀತಿ ಬೇರೆ-ಬೇರೆ. ಆದರೆ ಸಿನಿಮಾಗಳ ಬಗ್ಗೆ ಇಬ್ಬರ ಆಲೋಚನೆಯಲ್ಲಿ ಸಾಕಷ್ಟು ಸಾಮ್ಯತೆ ಇದೆ. ಇಬ್ಬರೂ ಸಹ ಸಿನಿಮಾ ರಂಗದ ಹಿನ್ನೆಲೆ ಇಲ್ಲದ ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ಇಬ್ಬರ ಆಲೋಚನೆಯಲ್ಲಿ ಏನಿದೆ ಅಂಥಹಾ ಹೋಲಿಕೆ?

ಅಕ್ಷಯ್-ಶಾರುಖ್ ಆಲೋಚನೆಯಲ್ಲಿ ಇದೆ ಸಾಕಷ್ಟು ಹೋಲಿಕೆ? ಏನದು?
Srk Ak
Updated By: ಮಂಜುನಾಥ ಸಿ.

Updated on: Feb 19, 2025 | 7:20 AM

ಅಕ್ಷಯ್ ಕುಮಾರ್ ಹಾಗೂ ಶಾರುಖ್ ಖಾನ್ ಅವರು ಬಾಲಿವುಡ್​ನ ಬೇಡಿಕೆಯ ಹೀರೋ. ಇವರಿಗೆ ದೊಡ್ಡ ಮಟ್ಟದಲ್ಲಿ ಖ್ಯಾತಿ ಇದೆ. ಇವರು ಮಾಡುವ ಸಿನಿಮಾ, ಕೆಲಸ ಮಾಡುವ ರೀತಿ, ಚಿತ್ರಗಳ ಆಯ್ಕೆಯಲ್ಲಿ ಸಾಕಷ್ಟು ಭಿನ್ನತೆ ಇದೆ. ಆದರೆ ಇವರ ಆಲೋಚನೆ ಒಂದೇ ರೀತಿ ಇದೆ. ಈ ಬಗ್ಗೆ ಇಬ್ಬರ ಸಂದರ್ಶನವನ್ನು ಹೋಲಿಕೆ ಮಾಡಿ ನೋಡಲಾಗುತ್ತಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಸೆಲೆಬ್ರಿಟಿ ಆದ ಬಳಿಕ ಮಧ್ಯಮ ವರ್ಗದ ಜೀವನವನ್ನು ಕೆಲವರು ಮಿಸ್ ಮಾಡಿಕೊಂಡಿದ್ದು ಇದೆ. ಆದರೆ, ಶಾರುಖ್ ಖಾನ್ ಹಾಗೂ ಅಕ್ಷಯ್ ಕುಮಾರ್ ಈ ವಿಚಾರದಲ್ಲಿ ಭಿನ್ನ. ಅವರಿಗೆ ಆ ಬಗ್ಗೆ ಯಾವುದೇ ಬೇಸರ ಇಲ್ಲ. ಸಾಕಷ್ಟು ಕಷ್ಟದಿಂದ ಬಂದ ಇವರಿಗೆ ಸೆಲೆಬ್ರಿಟಿ ಜೀವನವೇ ಹೆಚ್ಚು ಇಷ್ಟ ಆಗುತ್ತಿದೆ. ಶಾರುಖ್ ಈ ಮೊದಲು ಅದನ್ನು ಹೇಳಿದ್ದರೆ, ಅಕ್ಷಯ್ ಇತ್ತೀಚೆಗೆ ಈ ವಿಚಾರ ರಿವೀಲ್ ಮಾಡಿದ್ದಾರೆ.

ಶಾರುಖ್ ಖಾನ್ ಹೇಳಿದ್ದೇನು?

ಶಾರುಖ್ ಖಾನ್ ಅವರಿಗೆ ಈ ಮೊದಲು ಮಧ್ಯಮ ವರ್ಗದ ಜೀವನ ಮಿಸ್ ಮಾಡಿಕೊಳ್ಳುತ್ತೀರಾ ಎನ್ನುವ ಬಗ್ಗೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ್ದ ಅವರು, ‘ಇಲ್ಲ ನಾನು ಆ ರೀತಿ ಯಾವುದೇ ವಿಚಾರವನ್ನೂ ಮಿಸ್ ಮಾಡಿಕೊಳ್ಳುತ್ತಿಲ್ಲ. ನನಗೆ ಬೀಚ್ ಸೈಡ್ನಲ್ಲಿ ಪಾನಿ ಪುರಿ ತಿನ್ನಬೇಕು ಎನ್ನುವ ಯಾವುದೇ ಆಸೆ ಇಲ್ಲ. ಒಂದೊಮ್ಮೆ ತಿನ್ನಬೇಕು ಎಂದು ಅನಿಸಿದರೆ ನನಗೆ ಪಾನಿಪುರಿಯ ಜೊತೆ ಮರಳನ್ನು ಕೂಡ ಒಂದು ಬಾಕ್ಸ್ನಲ್ಲಿ ತಂದು ಕೊಡುತ್ತಾರೆ. ನನಗೆ ಆ ರೀತಿಯ ಆಸೆ ಇಲ್ಲ. ಹೀಗಾಗಿ ಸ್ಟಾರ್ ಆಗಿದ್ದೇನೆ’ ಎಂದಿದ್ದರು ಶಾರುಖ್ ಖಾನ್.

ಅಕ್ಷಯ್ ಕೂಡ ಹೀಗೆಯೇ

ಅಕ್ಷಯ್ ಕುಮಾರ್ ಕೂಡ ಇದೇ ರೀತಿಯ ಆಲೋಚನೆಗಳನ್ನು ಹೊಂದಿದ್ದಾರೆ. ಅವರು ಸೆಲೆಬ್ರಿಟಿ ಆದರೂ ರಸ್ತೆ ಬದಿಯಲ್ಲಿ ನಿಂತು ಪಾನಿ ಪುರಿ ತಿನ್ನುವ ಯಾವುದೇ ಆಸೆ ಇಲ್ಲ ಎಂದು ಹೇಳಿಕೊಂಡಿದ್ದಾರೆ. ಈ ವಿಚಾರದ ಮೂಲಕ ಇಬ್ಬರ ಆಲೋಚನೆ ಒಂದೇ ರೀತಿಯಲ್ಲಿ ಇದೆ ಎಂಬುದು ಸ್ಪಷ್ಟವಾಗುತ್ತದೆ.

ಇದನ್ನೂ ಓದಿ:ಅವೆಂಜರ್ಸ್ ಸರಣಿಯಲ್ಲಿ ಶಾರುಖ್ ಖಾನ್? ದೊಡ್ಡ ಹಿಂಟ್ ಕೊಟ್ಟ ಹಾಲಿವುಡ್​ ನಟ

ಎರಡೂ ಹೀರೋಗಳು ಬಾಲಿವುಡ್​ನಲ್ಲಿ ಬ್ಯುಸಿ ಇದ್ದಾರೆ. ಆದರೆ, ಸಿನಿಮಾ ಮಾಡುವ ವಿಚಾರದಲ್ಲಿ ಭಿನ್ನ. ಶಾರುಖ್ ಖಾನ್ ಅವರು ವರ್ಷಕ್ಕೆ ಒಂದೇ ಸಿನಿಮಾ ಮಾಡುತ್ತಾರೆ. ಅಕ್ಷಯ್ ಕುಮಾರ್ ಅವರು ವರ್ಷಕ್ಕೆ 3-4 ಸಿನಿಮಾ ಮಾಡುತ್ತಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ