ಈ ಸೆಲೆಬ್ರಿಟಿಗಳು ಕಟ್ಟೋ ಎಲೆಕ್ಟ್ರಿಸಿಟಿ ಬಿಲ್ ಎಷ್ಟು ಗೊತ್ತಾ?
Bollywood celebrities: ಬಾಲಿವುಡ್ ನಟ, ನಟಿಯರ ಜೀವನ ಐಶಾರಾಮಿ ಜೀವನ. ಕೋಟ್ಯಂತರ ಮೌಲ್ಯದ ವಾಚು, ಲಕ್ಷಾಂತರ ಬೆಲೆಯ ಬಟ್ಟೆ, ಬ್ಯಾಗುಗಳನ್ನು ಧರಿಸುತ್ತಾರೆ ಅವರು. ಭಾರಿ ದೊಡ್ಡ ಮನೆಗಳನ್ನು ಹೊಂದಿರುವ ಬಾಲಿವುಡ್ ಸೆಲೆಬ್ರಿಟಿಗಳ ತಿಂಗಳ ಕರೆಂಟ್ ಬಿಲ್ ಭಾರಿ ದೊಡ್ಡದಾಗಿಯೇ ಬರುತ್ತದೆ. ಅಂದಹಾಗೆ ಸಿನಿಮಾ ಸೆಲೆಬ್ರಿಟಿಗಳ ತಿಂಗಳ ಕರೆಂಟ್ ಬಿಲ್ ಎಷ್ಟು? ಇಲ್ಲಿದೆ ಮಾಹಿತಿ.

ಸ್ಟಾರ್ ಹೀರೋ ಹಾಗೂ ಹೀರೋಯಿನ್ಗಳ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಫ್ಯಾನ್ಸ್ ಸದಾ ಕಾತುರರಾಗಿರುತ್ತಾರೆ. ಅವರ ಬಗ್ಗೆ ಯಾವುದೇ ಹೊಸ ವಿಚಾರ ತಿಳಿದರೂ ಆಸಕ್ತಿಯಿಂದ ನೋಡುತ್ತಾರೆ. ನಟರ ಆಸ್ತಿ ಎಷ್ಟು? ಅವರ ಸಂಭಾವನೆ ಎಷ್ಟು? ಅವರ ಬಳಿ ಯಾವ ಕಾರುಗಳು ಇವೆ? ಹೀಗೆ ಅನೇಕ ವಿಚಾರ ತಿಳಿದುಕೊಳ್ಳಲು ಫ್ಯಾನ್ಸ್ ಉತ್ಸುಕರಾಗಿರುತ್ತಾರೆ. ಇದರ ಜತೆಗೆ ಸೆಲೆಬ್ರಿಟಿಗಳ ಮನೆಗೆ ಬರುವ ಎಲೆಕ್ಟ್ರಿಸಿಟ ಬಿಲ್ ಎಷ್ಟು ಎಂಬ ಕುತೂಹಲವೂ ಅನೇಕರಲ್ಲಿ ಇದೆ. ಆ ಪ್ರಶ್ನೆಗೂ ಉತ್ತರ ಇದೆ.
ಬಾಲಿವುಡ್ನಲ್ಲಿ ಬಹುತೇಕ ಸೆಲೆಬ್ರಿಟಿಗಳು ಮುಂಬೈನಲ್ಲಿ ಸ್ವಂತ ಮನೆ ಹೊಂದಿದ್ದಾರೆ. ಅದರಲ್ಲೂ ಪಾಶ್ ಏರಿಯಾಗಳಲ್ಲಿ ಒಂದಾದ ಬಾಂದ್ರಾದಲ್ಲಿ ಮನೆ ಇದೆ. ಶಾರುಖ್ ಖಾನ್ ಅವರ ನಿವಾಸ ‘ಮನ್ನತ್’, ಅಮಿತಾಭ್ ಬಚ್ಚನ್ ಅವರ ಐಷಾರಾಮಿ ಬಂಗಲೆ ಸೇರಿ ಅನೇಕ ಕಲಾವಿದರ ಮನೆ ಈ ಭಾಗದಲ್ಲೇ ಇದೆ.
ಮನೆ ಅಂದವಾಗಿ ಕಾಣಬೇಕು ಎಂಬ ಕಾರಣಕ್ಕೆ ಸೆಲೆಬ್ರಿಟಿಗಳು ಪ್ರತಿನಿತ್ಯ ರಾತ್ರಿ ಮನೆಯನ್ನು ಲೈಟ್ನಿಂದ ಅಲಂಕಾರ ಮಾಡುತ್ತಾರೆ. ಹಾಗಾದರೆ, ಸೆಲೆಬ್ರಿಟಿಗಳ ಮನೆಗೆ ಬರುವ ಪವರ್ಬಿಲ್ ಎಷ್ಟು ಎಂಬ ಮಾಹಿತಿ ಇಲ್ಲಿದೆ.
ಶಾರುಖ್ ಖಾನ್ ಅವರು ಮುಂಬೈನಲ್ಲಿ ‘ಮನ್ನತ್’ ಹೆಸರಿನ ಮನೆ ಹೊಂದಿದ್ದಾರೆ. ಈ ನಿವಾಸ ತುಂಬಾನೇ ದೊಡ್ಡದಾಗಿದೆ. ಶಾರುಖ್ ಖಾನ್ ಪ್ರತಿ ತಿಂಗಳು 43-45 ಲಕ್ಷ ರೂಪಾಯಿ ಪವರ್ ಬಿಲ್ ಪಾವತಿಸುತ್ತಿದ್ದಾರೆ ಎಂದು ವರದಿ ಆಗಿದೆ. ಈ ಮನೆಯಲ್ಲಿ ಹಲವು ರೂಂಗಳು ಇವೆ.
ಇದನ್ನೂ ಓದಿ:ಬಾಲಿವುಡ್ ಮೇಲೆ ಆಸೆ, ತೆಲುಗು ಸಿನಿಮಾಗಳ ಕೈಬಿಟ್ಟ ಶ್ರೀಲೀಲಾ
ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಮದುವೆ ಆಗಿದ್ದಾರೆ. ಇವರು ಮುಂಬೈನಲ್ಲಿ ವಾಸವಾಗಿದ್ದಾರೆ. ಇವರು ನಾಲ್ಕು ರೂಂನ ಫ್ಲ್ಯಾಟ್ ಹೊಂದಿದ್ದಾರೆ. ಈ ದಂಪತಿ ಪ್ರತಿ ತಿಂಗಳು 8-10 ಲಕ್ಷ ರೂಪಾಯಿ ಎಲೆಕ್ಟ್ರಿಸಿಟಿ ಬಿಲ್ ತುಂಬುತ್ತಾರೆ ಎನ್ನಲಾಗಿದೆ.
ಸಲ್ಮಾನ್ ಖಾನ್ ಅವರು ಬಾಲಿವುಡ್ನ ಬೇಡಿಕೆಯ ನಟ. ಅವರು ಮುಂಬೈನಲ್ಲಿ ಹಲವು ಪ್ರಾಪರ್ಟಿ ಹೊಂದಿದ್ದಾರೆ. ಗ್ಯಾಲಕ್ಸಿ ಅಪಾರ್ಟ್ಮೆಂಟ್ನಲ್ಲಿ ಸಲ್ಲು ವಾಸವಾಗಿದ್ದಾರೆ. ಅವರು ಪ್ರತಿ ತಿಂಗಳು 23-25 ಲಕ್ಷ ರೂಪಾಯಿ ಎಲೆಕ್ಟ್ರಿಸಿಟ ಬಿಲ್ ಪಾವತಿಸುತ್ತಾರೆ ಎಂದು ವರದಿ ಆಗಿದೆ.
ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಮದುವೆ ಆಗಿ ಹಲವು ವರ್ಷ ಕಳೆದಿದೆ. ಇಬ್ಬರೂ ಹಾಯಾಗಿ ಸಂಸಾರ ನಡೆಸುತ್ತಾ ಇದ್ದಾರೆ. ಈ ದಂಪತಿ ಮುಂಬೈನಲ್ಲಿ 4 ರೂಂನ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದಾರೆ. ಈ ದಂಪತಿ 13-15 ಲಕ್ಷ ರೂಪಾಯಿ ಎಲೆಕ್ಟ್ರಿಸಿಟಿ ಬಿಲ್ ಕಟ್ಟುತ್ತಿದ್ದಾರೆ ಎನ್ನಲಾಗಿದೆ.
ಅಮಿತಾಭ್ ಬಚ್ಚನ್ ಅವರು ಹಲವು ವರ್ಷಗಳ ಕಾಲ ಬಾಲಿವುಡ್ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಜುಹುದಲ್ಲಿ ತಮ್ಮದೇ ಬಂಗಲೆ ಹೊಂದಿದ್ದಾರೆ. ಅವರು ಪ್ರತಿ ತಿಂಗಳು 22-25 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಪಾವತಿಸುತ್ತಾರಂತೆ
ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಬಾಲಿವುಡ್ನ ಬೇಡಿಕೆಯ ಕಲಾವಿದರು. ಸೈಫ್ ಅವರು ಮುಂಬೈನ ಸದ್ಗುರು ಶರಣ್ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದಾರೆ. ಇವರು ಪ್ರತಿ ತಿಂಗಳು 30-32 ಲಕ್ಷ ರೂಪಾಯಿ ಪವರ್ಬಿಲ್ ಪೇ ಮಾಡುತ್ತಾರೆ. ಆಮಿರ್ ಖಾನ್ ಅವರು ಮುಂಬೈನಲ್ಲಿ ಅಪಾರ್ಟ್ಮೆಂಟ್ ಹೊಂದಿದ್ದಾರೆ. ಅವರು 9-11 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಪಾವತಿಸುತ್ತಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ