ಅಕ್ಷಯ್ ಕುಮಾರ್ ಸಿನಿಮಾ ಉದ್ದಕ್ಕೂ ಕಾಣಲ್ಲ ಪೃಥ್ವಿರಾಜ್ ಮುಖ? ಮೂಡಿದೆ ಅನುಮಾನ

ಪೃಥ್ವಿರಾಜ್ ಅವರು ವಿವಿಧ ರೀತಿಯ ಪಾತ್ರ ಮಾಡಿ ಗಮನ ಸೆಳೆದಿದ್ದಾರೆ. ವಿಲನ್ ರೀತಿಯ ಪಾತ್ರಗಳನ್ನು ಮಾಡಲು ಅವರು ಎಂದಿಗೂ ಹಿಂದೇಟು ಹಾಕಿದವರಲ್ಲ. ಈಗ ಅವರು ಸ್ಟಾರ್ ಕಾಸ್ಟ್​ನ ಹಿಂದಿ ಚಿತ್ರಕ್ಕೆ ವಿಲನ್ ಆಗಿದ್ದಾರೆ. ಹೀಗಾಗಿ, ಅವರ ಪಾತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆ ಇರೋದು ಸಾಮಾನ್ಯ.

ಅಕ್ಷಯ್ ಕುಮಾರ್ ಸಿನಿಮಾ ಉದ್ದಕ್ಕೂ ಕಾಣಲ್ಲ ಪೃಥ್ವಿರಾಜ್ ಮುಖ? ಮೂಡಿದೆ ಅನುಮಾನ
ಪೃಥ್ವಿರಾಜ್

Updated on: Mar 30, 2024 | 12:27 PM

ಅಕ್ಷಯ್  ಕುಮಾರ್ (Akshay Kumar) ಹಾಗೂ ಟೈಗರ್​ ಶ್ರಾಫ್ ನಟನೆಯ ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿದೆ. ಹಿಂದಿ ಜೊತೆಗೆ ಈ ಸಿನಿಮಾ ಕನ್ನಡದಲ್ಲೂ ವೀಕ್ಷಣೆಗೆ ಲಭ್ಯವಿದೆ. ಅಕ್ಷಯ್ ಕುಮಾರ್ ಸಿನಿಮಾದಲ್ಲಿ ಪೃಥ್ವಿರಾಜ್ ಅವರು ವಿಲನ್ ಪಾತ್ರ ಮಾಡುತ್ತಿದ್ದಾರೆ. ಅವರ ಲುಕ್ ರಿವೀಲ್ ಆಗಿದೆ. ಈ ಚಿತ್ರದಲ್ಲಿ ಅವರು ಖಡಕ್ ವಿಲನ್ ಆಗೋ ಸೂಚನೆ ಸಿಕ್ಕಿದೆ.

ಪೃಥ್ವಿರಾಜ್ ಅವರು ವಿವಿಧ ರೀತಿಯ ಪಾತ್ರ ಮಾಡಿ ಗಮನ ಸೆಳೆದಿದ್ದಾರೆ. ವಿಲನ್ ರೀತಿಯ ಪಾತ್ರಗಳನ್ನು ಮಾಡಲು ಅವರು ಎಂದಿಗೂ ಹಿಂದೇಟು ಹಾಕಿದವರಲ್ಲ. ಈಗ ಅವರು ಸ್ಟಾರ್ ಕಾಸ್ಟ್​ನ ಹಿಂದಿ ಚಿತ್ರಕ್ಕೆ ವಿಲನ್ ಆಗಿದ್ದಾರೆ. ಹೀಗಾಗಿ, ಅವರ ಪಾತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆ ಇರೋದು ಸಾಮಾನ್ಯ. ಆ ನಿರೀಕ್ಷೆಗೆ ತಕ್ಕಂತೆ ಅವರ ಪಾತ್ರ ಇದೆ ಎನ್ನಲಾಗುತ್ತಿದೆ.

ಟ್ರೇಲರ್​ ಉದ್ದಕ್ಕೂ ಪೃಥ್ವಿರಾಜ್ ಅವರ ಪಾತ್ರದ ಪರಿಚಯ ಆಗಿರಲಿಲ್ಲ. ಮುಖಕ್ಕೆ ಮಾಸ್ಕ್ ಧರಿಸಿದ ವ್ಯಕ್ತಿ ಮಾತ್ರ ಕಾಣಿಸಿಕೊಂಡಿದ್ದ. ಅದು ಪೃಥ್ವಿರಾಜ್ ಅವರ ಪಾತ್ರವಂತೆ. ‘ಅವನು ಎವಿಲ್, ಅವನು ಡೇಂಜರಸ್, ಅವನಿಗೆ ಇರೋದು ಒಂದೇ ಉದ್ದೇಶ ಅದುವೇ ಸೇಡು’ ಎಂದು ಅಕ್ಷಯ್ ಕುಮಾರ್ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟರ್ ನೋಡಿದ ಬಳಿಕ ಅನೇಕರು ‘ಸಿನಿಮಾ ಉದ್ದಕ್ಕೂ ಪೃಥ್ವಿರಾಜ್ ಅವರು ಮುಖ ರಿವೀಲ್ ಆಗುವುದಿಲ್ಲವೇ’ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಅನೇಕರು ವಿವಿಧ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಒಂದು ಚಿತ್ರಕ್ಕಾಗಿ 16 ವರ್ಷ ಮುಡಿಪಿಟ್ಟ ಪೃಥ್ವಿರಾಜ್​; ಅಕ್ಷಯ್ ಕುಮಾರ್ ರಿಯಾಕ್ಷನ್ ಹೇಗಿತ್ತು?

‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ಇರಲಿದೆ. ಈ ಚಿತ್ರಕ್ಕೆ ದೊಡ್ಡ ಮಟ್ಟದ ಪ್ರಚಾರ ನೀಡುವ ಕೆಲಸ ಆಗುತ್ತಿದೆ. ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ಇದೇ ಮೊದಲ ಬಾರಿಗೆ ಒಂದಾಗಿದ್ದಾರೆ. ಈ ಸಿನಿಮಾ 3ಡಿಯಲ್ಲೂ ಲಭ್ಯವಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us