‘ವಿಧಿ ಬದಲಿಸಲು ಸಾಧ್ಯವಿಲ್ಲ’; ಸಿನಿಮಾ ಸೋಲಿನ ಬಗ್ಗೆ ಅಕ್ಷಯ್ ಕುಮಾರ್ ಬೇಸರದ ಮಾತು

|

Updated on: Jul 24, 2024 | 7:04 AM

ಕಳೆದ ಕೆಲ ವರ್ಷಗಳಲ್ಲಿ ಅಕ್ಷಯ್ ಕುಮಾರ್ ನಟನೆಯ ಸುಮಾರು 11 ಸಿನಿಮಾಗಳು ರಿಲೀಸ್ ಆಗಿವೆ. ಈ ಪೈಕಿ ಗೆದ್ದಿರೋದು ಕೇವಲ 9 ಸಿನಿಮಾಗಳು ಮಾತ್ರ. ಇದು ಅಕ್ಷಯ್ ಕುಮಾರ್ ಅವರಿಗೆ ಸಾಕಷ್ಟು ಬೇಸರ ಉಂಟು ಮಾಡುತ್ತದೆ. ‘ಪ್ರತಿ ಸಿನಿಮಾ ಹಿಂದೆಯೂ ಸಾಕಷ್ಟು ಶ್ರಮ ಇರುತ್ತದೆ. ನನ್ನ ಸಿನಿಮಾ ಸೋಲುವುದನ್ನು ನೋಡುವುದು ನೋವುಂಟು ಮಾಡುತ್ತದೆ’ ಎಂದಿದ್ದಾರೆ ಅವರು.

‘ವಿಧಿ ಬದಲಿಸಲು ಸಾಧ್ಯವಿಲ್ಲ’; ಸಿನಿಮಾ ಸೋಲಿನ ಬಗ್ಗೆ ಅಕ್ಷಯ್ ಕುಮಾರ್ ಬೇಸರದ ಮಾತು
ಅಕ್ಷಯ್
Follow us on

ಅಕ್ಷಯ್ ಕುಮಾರ್ ಅವರು ಮುಟ್ಟಿದ್ದೆಲ್ಲವೂ ಚಿನ್ನ ಆಗುತ್ತಿದ್ದ ಕಾಲ ಒಂದಿತ್ತು. ಆದರೆ, ಈಗ ಕಾಲ ಬದಲಾಗಿದೆ. ಅವರಿಗೆ ಕಷ್ಟದ ಸಮಯ ಬಂದಿದೆ. ಮಾಡಿದ ಸಿನಿಮಾಗಳೆಲ್ಲವೂ ಫ್ಲಾಪ್ ಸಾಲಿಗೆ ಸೇರುತ್ತಿವೆ. ಈ ವರ್ಷ ಅವರ ನಟನೆಯ ಎರಡು ಸಿನಿಮಾಗಳು ರಿಲೀಸ್ ಆಗಿವೆ. ಈ ಎರಡೂ ಚಿತ್ರಗಳು ಫ್ಲಾಪ್ ಎನಿಸಿಕೊಂಡಿವೆ. ‘ಬಡೇ ಮಿಯಾ ಚೋಟೆ ಮಿಯಾ’ ಹೀನಾಯವಾಗಿ ಸೋತಿದೆ. ಅದೇ ರೀತಿ ‘ಸರ್ಫಿರಾ’ ಸಿನಿಮಾ ಕೂಡ ಸೋತು ಹೋಗಿದೆ. ಈ ಚಿತ್ರದ ಬಜೆಟ್ 100 ಕೋಟಿ ರೂಪಾಯಿ. ಆದರೆ, ಸಿನಿಮಾ ಗಳಿಸಿದ್ದು ಕೇವಲ 21 ಕೋಟಿ ರೂಪಾಯಿ. ಸ್ಟಾರ್ ಆಗಿ ಮೆರೆಯುತ್ತಿರುವ ಅಕ್ಷಯ್ ಕುಮಾರ್​ಗೆ ಈ ರೀತಿ ಮುಖಭಂಗ ಆದರೆ ಬೇಸರ ಆಗಿಯೇ ಆಗುತ್ತದೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.

‘ಪ್ರತಿ ಸಿನಿಮಾ ಹಿಂದೆಯೂ ಸಾಕಷ್ಟು ಶ್ರಮ ಇರುತ್ತದೆ. ನನ್ನ ಸಿನಿಮಾ ಸೋಲುವುದನ್ನು ನೋಡುವುದು ನೋವುಂಟು ಮಾಡುತ್ತದೆ. ಪ್ರತಿ ಸೋಲು ಕೂಡ ಯಶಸ್ಸಿನ ಮೌಲ್ಯವನ್ನು ತಿಳಿಸುತ್ತದೆ. ನಿಮ್ಮ ಹಸಿವನ್ನು ಹೆಚ್ಚಿಸುತ್ತದೆ. ನನ್ನ ವೃತ್ತಿ ಜೀವನದ ಆರಂಭದಲ್ಲೇ ಸೋಲನ್ನು ಡೀಲ್ ಮಾಡುವುದನ್ನು ಕಲಿತೆ’ ಎಂದಿದ್ದಾರೆ ಅಕ್ಷಯ್ ಕುಮಾರ್. ಅಕ್ಷಯ್ ಕುಮಾರ್ ಅವರ ವೃತ್ತಿ ಜೀವನದ ಆರಂಭದಲ್ಲಿ ಸತತ ಸೋಲು ಕಂಡರು.  ಈ ಕಾರಣಕ್ಕೆ ಅವರು ದೇಶ ತೊರೆದು ಕೆನಡಾದಲ್ಲಿ ಸೆಟಲ್ ಆಗಲು ಮುಂದಾಗಿದ್ದರು.

ಇದನ್ನೂ ಓದಿ: ಅಕ್ಷಯ್ ಕುಮಾರ್ ಸೋಲಿನ ಸಾಲಿಗೆ ಮತ್ತೊಂದು ಸಿನಿಮಾ; ಹೊಸ ಚಿತ್ರದ ಗಳಿಕೆ 2 ಕೋಟಿ ರೂ.!

‘ಪ್ರತಿ ಸೋಲು ನಿಮ್ಮ ಮೇಲೆ ಪ್ರಭಾವ ಬೀರುತ್ತದೆ, ನೋವನ್ನು ಕೊಡುತ್ತದೆ. ಆದರೆ, ಸಿನಿಮಾದ ವಿಧಿಯನ್ನು ಬದಲಿಸುವುದಿಲ್ಲ. ಅದು ನಮ್ಮ ನಿಯಂತ್ರಣದಲ್ಲಿ ಇಲ್ಲ. ಕಷ್ಟಪಟ್ಟು ಕೆಲಸ ಮಾಡೋದು ಮಾತ್ರ ನಿಮ್ಮ ಕೈಯಲ್ಲಿ ಇದೆ. ನಾನು ನನ್ನ ಮುಂದಿನ ಸಿನಿಮಾ ಬಗ್ಗೆ ಗಮನ ಹರಿಸುತ್ತೇನೆ’ ಎಂದಿದ್ದಾರೆ ಅಕ್ಷಯ್.

ಕಳೆದ ಕೆಲ ವರ್ಷಗಳಲ್ಲಿ ಅಕ್ಷಯ್ ಕುಮಾರ್ ನಟನೆಯ ಸುಮಾರು 11 ಸಿನಿಮಾಗಳು ರಿಲೀಸ್ ಆಗಿವೆ. ಈ ಪೈಕಿ ಗೆದ್ದಿರೋದು ಕೇವಲ 9 ಸಿನಿಮಾಗಳು ಮಾತ್ರ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.