3 ಕೋಟಿ ರೂ. ಕಾರು ಖರೀದಿ ಮಾಡಿದ ಅನನ್ಯಾ; ನಂಬರ್ ಪ್ಲೇಟ್ ವಿಶೇಷತೆ ಏನು?
ಅನನ್ಯಾ ಕಾರಿನ ಸಂಖ್ಯೆ ಕೊನೆಯಾಗೋದು 3000 ನಂಬರ್ನಿಂದ. ಮಾರ್ವೆಲ್ ಸಿನಿಮಾದಲ್ಲಿ ‘ಐ ಲವ್ ಯೂ 3000’ ಅನ್ನೋ ಲೈನ್ ಬರುತ್ತದೆ. ‘ಎಲ್ಲಕ್ಕಿಂತ ಹೆಚ್ಚು ನಿನ್ನನ್ನು ಪ್ರೀತಿಸುತ್ತೇನೆ’ ಎಂಬ ಅರ್ಥ ಇದೆ. ಹೀಗಾಗಿ, ಅನನ್ಯಾ ಮಾರ್ವೆಲ್ ಪ್ರೇಮಿ ಆಗಿರಬಹುದು ಎಂದು ಅನೇಕರು ಊಹಿಸಿದ್ದಾರೆ.
ಬಾಲಿವುಡ್ ನಟಿ ಅನನ್ಯಾ ಪಾಂಡೆ ಅವರು ಸದಾ ಸುದ್ದಿಯಲ್ಲಿ ಇರುತ್ತಾರೆ. ಇತ್ತೀಚೆಗೆ ಅವರು ಹಾರ್ದಿಕ್ ಪಾಂಡ್ಯ ಅವರನ್ನು ಇನ್ಸ್ಟಾಗ್ರಾಮ್ನಲ್ಲಿ ಫಾಲೋ ಮಾಡಿ ಸುದ್ದಿ ಆಗಿದ್ದರು. ಈಗ ಅವರು ಲಕ್ಷುರಿ ರೇಂಜ್ ರೋವರ್ ಖರೀದಿ ಮಾಡಿದ್ದಾರೆ. ಇದರ ಬೆಲೆ ಬರೋಬ್ಬರಿ 3+ ಕೋಟಿ ರೂಪಾಯಿ. ಈಗ ಅವರು ಖರೀದಿ ಮಾಡಿರೋ ಕಾರು ಸಖತ್ ಚರ್ಚೆ ಆಗುತ್ತಿದೆ. ಇದಕ್ಕೆ ಕಾರಣ ಆಗಿರೋದು ಕಾರಿನ ನಂಬರ್ಪ್ಲೇಟ್.
‘ಸ್ಟುಡೆಂಟ್ ಆಫ್ ದಿ ಇಯರ್ 2’ ಚಿತ್ರದ ಮೂಲಕ ಅನನ್ಯಾ ಪಾಂಡೆ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಆ ಬಳಿಕ ಅವರು ಕೆಲವು ಸಿನಿಮಾ ಮಾಡಿದರು. ಆದರೆ ಯಾವುದೂ ಕೈ ಹಿಡಿಯಲಿಲ್ಲ. ಈಗ ಅವರು ದುಬಾರಿ ಕಾರು ಖರೀದಿ ಮಾಡಿದ್ದಾರೆ. ಅವರು ಖರೀದಿಸಿದ ರೇಂಜ್ ರೋವರ್ ಕಾರಿನ ಬೆಲೆ ಬರೋಬ್ಬರಿ 3.38 ಕೋಟಿ ರೂಪಾಯಿ.
ಅನನ್ಯಾ ಪಾಂಡೆ ಬಳಿ ಹಲವು ಕಾರುಗಳು ಇವೆ. ಇದರ ಜೊತೆಗೆ ಈಗ ಹೊಸ ಕಾರು ಸೇರ್ಪಡೆ ಆಗಿದೆ. ಇವರ ಕಾರಿನ ಸಂಖ್ಯೆ ಕೊನೆಯಾಗೋದು 3000 ನಂಬರ್ನಿಂದ. ಅವರು ಇದನ್ನು ವಿಶೇಷವಾಗಿ ಖರೀದಿ ಮಾಡಿದ್ದಾರೆ ಎನ್ನಲಾಗಿದೆ. ಅವರ ಜನ್ಮದಿನ ಅಕ್ಟೋಬರ್ 30. ಈ ಕಾರಣಕ್ಕೆ ಅವರು 3000 ಖರೀದಿ ಮಾಡಿರಬಹುದು ಎಂದು ಕೆಲವರು ಊಹಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಹಾಲಿವುಡ್ನ ಮಾರ್ವೆಲ್ ಸಿನಿಮಾದಲ್ಲಿ ಬರೋ ಲೈನ್ಗೋಸ್ಕರ ಈ ನಂಬರ್ಪ್ಲೇಟ್ ಪಡೆಯಲಾಗಿದೆ ಎನ್ನಲಾಗಿದೆ.
ಮಾರ್ವೆಲ್ ಸಿನಿಮಾದಲ್ಲಿ ‘ಐ ಲವ್ ಯೂ 3000’ ಅನ್ನೋ ಲೈನ್ ಬರುತ್ತದೆ. ‘ಎಲ್ಲಕ್ಕಿಂತ ಹೆಚ್ಚು ನಿನ್ನನ್ನು ಪ್ರೀತಿಸುತ್ತೇನೆ’ ಎಂಬ ಅರ್ಥ ಇದೆ. ಹೀಗಾಗಿ, ಅನನ್ಯಾ ಮಾರ್ವೆಲ್ ಪ್ರೇಮಿ ಆಗಿರಬಹುದು ಎಂದು ಅನೇಕರು ಊಹಿಸಿದ್ದಾರೆ.
ಇದನ್ನೂ ಓದಿ: ಅನನ್ಯಾ ಪಾಂಡೆ ಕೈಯಲ್ಲಿ ಹಿಡಿದಿರುವ ಬ್ಯಾಗಿನ ಬೆಲೆಗೆ ಒಂದು ಹೊಸ ಕಾರು ಕೊಳ್ಳಬಹುದು!
ಇತ್ತೀಚೆಗೆ ಅನನ್ಯಾ ಪಾಂಡೆ ಅವರು ಅಂಬಾನಿ ಮನೆ ಮದುವೆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಈ ವಿವಾಹ ಸಮಾರಂಭದಲ್ಲಿ ಅವರು ಹಾರ್ದಿಕ್ ಪಾಂಡ್ಯ ಜೊತೆ ಕಾಣಿಸಿಕೊಂಡಿದ್ದರು. ಆ ಬಳಿಕ ಇನ್ಸ್ಟಾಗ್ರಾಮ್ನಲ್ಲಿ ಇಬ್ಬರೂ ಪರಸ್ಪರ ಫಾಲೋ ಮಾಡಿಕೊಳ್ಳುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.