Akshay Kumar: ಗಣಿಗಾರಿಕೆ ಕುರಿತು ಅಕ್ಷಯ್​ ಕುಮಾರ್​ ಹೊಸ ಸಿನಿಮಾ; ಗೆಲುವಿಗಾಗಿ ಟೈಟಲ್​ ಬದಲಾವಣೆ ಮಾಡಿದ ಚಿತ್ರತಂಡ?

The Great Indian Rescue: ಅಕ್ಷಯ್​ ಕುಮಾರ್​ ಅವರು ಬಯೋಪಿಕ್​ಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿ​ದ್ದಾರೆ. ರಿಯಲ್​ ಲೈಫ್​ ಘಟನೆಗಳನ್ನು ಆಧರಿಸಿದ ಸಿನಿಮಾಗಳಲ್ಲಿ ಅವರು ಹೆಚ್ಚಾಗಿ ನಟಿಸುತ್ತಾರೆ.

Akshay Kumar: ಗಣಿಗಾರಿಕೆ ಕುರಿತು ಅಕ್ಷಯ್​ ಕುಮಾರ್​ ಹೊಸ ಸಿನಿಮಾ; ಗೆಲುವಿಗಾಗಿ ಟೈಟಲ್​ ಬದಲಾವಣೆ ಮಾಡಿದ ಚಿತ್ರತಂಡ?
ಅಕ್ಷಯ್ ಕುಮಾರ್

Updated on: May 11, 2023 | 7:20 PM

ಬಹಳ ವೇಗವಾಗಿ ಸಿನಿಮಾ ಕೆಲಸಗಳನ್ನು ಮುಗಿಸೋದು ಅಕ್ಷಯ್​ ಕುಮಾರ್ (Akshay Kumar)​ ಅವರ ರೂಢಿ. ಹಾಗಾಗಿ ಪ್ರತಿ ವರ್ಷ ಅವರ 4-5 ಸಿನಿಮಾಗಳು ಬಿಡುಗಡೆ ಆಗುತ್ತವೆ. ಈ ಅವಸರದ ಕಾರಣದಿಂದ ಕೆಲವೊಮ್ಮೆ ಅವರು ಎಡವಿದ್ದೂ ಉಂಟು. ಹಾಗಂತ ಅಕ್ಷಯ್​ ಕುಮಾರ್​ ಅವರ ವೇಗಕ್ಕೆ ಬ್ರೇಕ್​ ಬಿದ್ದಿಲ್ಲ. ಈಗಲೂ ಕೂಡ ಅವರು ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. 2023ರಲ್ಲಿ ಅಕ್ಷಯ್​ ಕುಮಾರ್​ ಅಭಿನಯದ ‘ಸೆಲ್ಫಿ’ ಸಿನಿಮಾ ತೆರೆಕಂಡಿತು. ಆದರೆ ಆ ಚಿತ್ರ ಗೆಲುವು ಕಾಣಲಿಲ್ಲ. ಈಗ ಅವರ ಮುಂಬರುವ ಸಿನಿಮಾಗಳಿಗಾಗಿ ಫ್ಯಾನ್ಸ್​ ಕಾದಿದ್ದಾರೆ. ಆ ಪೈಕಿ ‘ಕ್ಯಾಪ್ಸೂಲ್​ ಗಿಲ್​’ (Capsule Gill) ಚಿತ್ರದ ಬಗ್ಗೆ ಹೆಚ್ಚು ನಿರೀಕ್ಷೆ ಇದೆ. ಈ ಸಿನಿಮಾದ ಬಗ್ಗೆ ಒಂದು ಗಾಸಿಪ್​ ಕೇಳಿಬಂದಿದೆ. ಬಿಡುಗಡೆಗೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಈ ಚಿತ್ರದ ಟೈಟಲ್​ ಬದಲಾವಣೆ ಮಾಡಲಾಗಿದೆ ಎಂದು ‘ಬಾಲಿವುಡ್​ ಹಂಗಾಮಾ’ ವರದಿ ಮಾಡಿದೆ. ‘ದಿ ಗ್ರೇಟ್​ ಇಂಡಿಯನ್​ ರೆಸ್ಕ್ಯೂ’ (The Great Indian Rescue) ಎಂದು ಶೀರ್ಷಿಕೆ ಇಡಲಾಗಿದೆ ಎಂದು ಹೇಳಲಾಗುತ್ತಿದೆ. ಗಣಿಗಾರಿಕೆ ಕುರಿತು ಈ ಸಿನಿಮಾ ಮೂಡಿಬರುತ್ತಿದೆ.

ಅಕ್ಷಯ್​ ಕುಮಾರ್​ ಅವರು ಬಯೋಪಿಕ್​ಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿ​ದ್ದಾರೆ. ರಿಯಲ್​ ಲೈಫ್​ ಘಟನೆಗಳನ್ನು ಆಧರಿಸಿದ ಸಿನಿಮಾಗಳಲ್ಲಿ ಅವರು ಹೆಚ್ಚಾಗಿ ನಟಿಸುತ್ತಾರೆ. ಈಗ ‘ದಿ ಗ್ರೇಟ್​ ಇಂಡಿಯನ್​ ರೆಸ್ಕ್ಯೂ’ ಸಿನಿಮಾದಲ್ಲೂ ಅಂಥದ್ದೇ ಒಂದು ಕಥಾಹಂದರ ಇರಲಿದೆ. 1989ರಲ್ಲಿ ನಡೆದ ಒಂದು ಗಣಿ ದುರಂತದ ಬಗ್ಗೆ ಈ ಸಿನಿಮಾದಲ್ಲಿ ಹೇಳಲಾಗುವುದು. ಅದರಲ್ಲಿ ಅಕ್ಷಯ್​ ಕುಮಾರ್​ ಅವರು ಮೈನಿಂಗ್​ ಇಂಜಿನಿಯರ್​ ಜಸ್ವಂತ್​ ಸಿಂಗ್​ ಗಿಲ್​ ಪಾತ್ರವನ್ನು ಮಾಡುತ್ತಿದ್ದಾರೆ. ಜಸ್ವಂತ್​ ಸಿಂಗ್​ ಗಿಲ್​ ಅವರು 65 ಜನರ ಪ್ರಾಣ ಉಳಿಸಿದ ಕಥೆಯನ್ನು ಈ ಸಿನಿಮಾ ವಿವರಿಸಲಿದೆ.

ಇದನ್ನೂ ಓದಿ: ಅಕ್ಷಯ್​ ಕುಮಾರ್​ ಜತೆ ವಿದೇಶ ಸುತ್ತಿದ ಮೌನಿ ರಾಯ್​

ಇದನ್ನೂ ಓದಿ
Salman Khan: ಶ್ರೀಮಂತರ ಮದುವೆಯಲ್ಲಿ ಡ್ಯಾನ್ಸ್​ ಮಾಡಿದ ಅಕ್ಷಯ್​, ಸಲ್ಲು: ಇದಕ್ಕಾಗಿ ಪಡೆದ ಹಣ ಎಷ್ಟು?
Lionel Messi Biopic: ‘ಲಿಯೋನೆಲ್‌ ಮೆಸ್ಸಿ ಬಯೋಪಿಕ್​ನಲ್ಲಿ ಅಕ್ಷಯ್​ ಕುಮಾರ್​ ನಟಿಸಬೇಕು’; ಮೀಮ್ಸ್​ ವೈರಲ್​
Akshay Kumar: ಛತ್ರಪತಿ ಶಿವಾಜಿ ಪಾತ್ರ ಮಾಡಲು ಹೋಗಿ ಟ್ರೋಲ್​ ಆದ ಅಕ್ಷಯ್​ ಕುಮಾರ್​; ಇಲ್ಲಿದೆ ಕಾರಣ
Akshay Kumar: ಸತತ ಸೋಲಿನ ಬಳಿಕ ಲೈಂಗಿಕ ಶಿಕ್ಷಣದ ಬಗ್ಗೆ ಸಿನಿಮಾ ಮಾಡಲು ಮುಂದಾದ ನಟ ಅಕ್ಷಯ್​ ಕುಮಾರ್​

‘ಕ್ಯಾಪ್ಸೂಲ್​ ಗಿಲ್​’ ಎಂಬುದಕ್ಕಿಂತಲೂ ‘ದಿ ಗ್ರೇಟ್​ ಇಂಡಿಯನ್​ ರೆಸ್ಕ್ಯೂ’ ಎಂಬ ಶೀರ್ಷಿಕೆಯೇ ಈ ಸಿನಿಮಾಗೆ ಸೂಕ್ತ ಆಗಲಿದೆ ಎಂದು ಚಿತ್ರತಂಡ ಅಭಿಪ್ರಾಯ ಪಟ್ಟಿದೆ. ಹಾಗಾಗಿ ಶೀರ್ಷಿಕೆ ಬದಲಾಯಿಸಲು ನಿರ್ಧರಿಸಲಾಗಿದೆ ಎಂದು ವರದಿ ಆಗಿದೆ. ಆದರೆ ಚಿತ್ರತಂಡದಿಂದ ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಬಹಿರಂಗ ಆಗಬೇಕಿದೆ.

ಇದನ್ನೂ ಓದಿ: Akshay Kumar: ‘ಸೆಲ್ಫೀ’ ಹೀನಾಯ ಸೋಲು; ‘ಎಲ್ಲ ತಪ್ಪು ನನ್ನದೇ’ ಎಂದು ಹೊಣೆ ಹೊತ್ತುಕೊಂಡ ಅಕ್ಷಯ್​ ಕುಮಾರ್​

ಈ ಸಿನಿಮಾದ ಬಿಡುಗಡೆ ಬಗ್ಗೆ ಒಂದಷ್ಟು ಗೊಂದಲಗಳು ಇವೆ. ‘ಸೂರರೈ ಪೋಟ್ರು’ ಸಿನಿಮಾದ ಹಿಂದಿ ರಿಮೇಕ್​ನಲ್ಲೂ ಅಕ್ಷಯ್​ ಕುಮಾರ್​ ಅವರು ನಟಿಸಿದ್ದಾರೆ. ಸೆಪ್ಟೆಂಬರ್​ 1ರಂದು ಆ ಚಿತ್ರ ಬಿಡುಗಡೆ ಆಗಲಿದೆ. ಅದಕ್ಕೂ ಮುನ್ನವೇ ‘ದಿ ಗ್ರೇಟ್​ ಇಂಡಿಯನ್​ ರೆಸ್ಕ್ಯೂ’ ಬಿಡುಗಡೆ ಆಗಬಹುದು ಎಂದು ಹೇಳಲಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:20 pm, Thu, 11 May 23

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us