‘ಕೇಸರಿ 2’ ಸಿನಿಮಾ ನೋಡಿದ ನೆಟ್ಟಿಗರು ಹೇಳಿದ್ದೇನು? ಸಿನಿಮಾ ಹೇಗಿದೆ?

Kesari 2 twitter review: ಅಕ್ಷಯ್ ಕುಮಾರ್ ನಟನೆಯ ‘ಕೇಸರಿ 2’ ಸಿನಿಮಾ ಇಂದಷ್ಟೆ ಬಿಡುಗಡೆ ಆಗಿದೆ. ಜಲಿಯನ್ ವಾಲಾಭಾಗ್ ಘಟನೆಯ ನ್ಯಾಯಾಲಯ ವಿಚಾರಣೆಯ ಕತೆಯನ್ನು ಸಿನಿಮಾ ಒಳಗೊಂಡಿದೆ. ಸಿನಿಮಾ ನೋಡಿದ ಮಂದಿ ಟ್ವಿಟ್ಟರ್​ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದು, ಸಿನಿಮಾದ ಟ್ವಿಟ್ಟರ್ ವಿಮರ್ಶೆ ಇಲ್ಲಿದೆ.

‘ಕೇಸರಿ 2’ ಸಿನಿಮಾ ನೋಡಿದ ನೆಟ್ಟಿಗರು ಹೇಳಿದ್ದೇನು? ಸಿನಿಮಾ ಹೇಗಿದೆ?
Kesari 2

Updated on: Apr 18, 2025 | 3:48 PM

ಅಕ್ಷಯ್ ಕುಮಾರ್ (Akshay Kumar) ನಟನೆಯ ‘ಕೇಸರಿ 2’ (Kesari 2) ಸಿನಿಮಾ ಇಂದು (ಏಪ್ರಿಲ್ 18) ಬಿಡುಗಡೆ ಆಗಿದೆ. ಸತತ ಸೋಲುಗಳನ್ನು ಕಂಡು ಸುಸ್ತಾಗಿರುವ ಅಕ್ಷಯ್ ಅವರನ್ನು ‘ಕೇಸರಿ 2’ ಗೆಲುವಿನ ದಡ ತಲುಪಿಸಲಿದೆಯೇ? ಅಥವಾ ಸೋಲಿನ ಸರಣಿಗೆ ಮತ್ತೊಂದು ಸೇರ್ಪಡೆ ಎಂಬಂತಾಗುತ್ತದೆಯೇ? ಭಾರತೀಯ ಸ್ವಾತಂತ್ರ್ಯ ಹೋರಾಟದ ಇತಿಹಾಸದ ರಕ್ತ ಸಿಕ್ತ ಅಧ್ಯಾಯವಾದ ‘ಜಲಿಯನ್ ವಾಲಾಭಾಗ್’ ಹತ್ಯಾಕಾಂಡ ಹಾಗೂ ಆ ಘಟನೆ ಕುರಿತು ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ಕುರಿತಾದ ಕತೆಯನ್ನು ‘ಕೇಸರಿ 2’ ಸಿನಿಮಾ ಒಳಗೊಂಡಿದೆ. ಸಿನಿಮಾ ನೋಡಿದ ಹಲವರು ಮೊದಲ ಶೋ ಮುಗಿಯುತ್ತಿದ್ದಂತೆ ತಮ್ಮ ಅಭಿಪ್ರಾಯಗಳನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ. ಇಲ್ಲಿದೆ ‘ಕೇಸರಿ 2’ ಸಿನಿಮಾದ ಟ್ವಿಟ್ಟರ್ ವಿಮರ್ಶೆ…

ಅಕ್ಕಿಯಾನ್ ಭಾಯ್ ಎಂಬುವರು ಟ್ವೀಟ್ ಮಾಡಿ, ‘ಮೈನವಿರೇಳಿಸುವಂಥಹಾ ಸಿನಿಮಾ ಇದು. ‘ಕೇಸರಿ 2’ ಕೇವಲ ಸಿನಿಮಾ ಮಾತ್ರವಲ್ಲ ಇದು ಮನಸ್ಸಿಗೆ ತಾಗುವ ಒಂದು ಕತೆ. ಭಾವುಕತೆ, ರಾಷ್ಟ್ರಪ್ರೇಮ ಎಲ್ಲವನ್ನೂ ಒಳಗೊಂಡ ಮನಸ್ಸಿಗೆ ತಾಗುವ ಸಿನಿಮಾ’ ಎಂದಿದ್ದಾರೆ. ಸಿನಿಮಾಕ್ಕೆ 4.5 ರೇಟಿಂಗ್ ನೀಡಿರುವ ಅವರು, ಚಿತ್ರಮಂದಿರದಲ್ಲಿ ಸಿನಿಮಾ ಮುಗಿದ ಮೇಲೆ ಚಪ್ಪಾಳೆ ತಟ್ಟುತ್ತಿರುವ ವಿಡಿಯೋ ಸಹ ಹಂಚಿಕೊಂಡಿದ್ದಾರೆ.

ಸೆಲೆಬ್ರಿಟಿ ಸಿನಿಮಾ ವಿಮರ್ಶಕ ತರಣ್ ಆದರ್ಶ್ ‘ಕೇಸರಿ 2’ ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಸಿನಿಮಾಕ್ಕೆ ನಾಲ್ಕು ಸ್ಟಾರ್ ನೀಡಿರುವ ಅವರು, ‘ಕೇಸರಿ 2’ ಪವರ್​ಫುಲ್, ಮನಸ್ಸಿಗೆ ತಾಗುವ, ಗಟ್ಟಿ ಭಾವನಾತ್ಮಕ ಸನ್ನಿವೇಶಗಳನ್ನು ಹೊಂದಿರುವ, ಹಿಡಿದಿಟ್ಟುಕೊಳ್ಳುವ ಕತೆಯನ್ನು ಒಳಗೊಂಡಿರುವ ಸಿನಿಮಾ. ಅಕ್ಷಯ್ ಕುಮಾರ್ ಮತ್ತು ಮಾಧವನ್ ಇಬ್ಬರ ನಟನೆಯೂ ಅದ್ಭುತ. ಖಂಡಿತ ನೋಡಬೇಕಾದ ಸಿನಿಮಾಗಳಲ್ಲಿ ಇದು ಸಹ ಒಂದು’ ಎಂದಿದ್ದಾರೆ.

ಅಮ್ರಿತ್ ಪ್ರೀತಮ್ ಎಂಬುವರು ಟ್ವೀಟ್ ಮಾಡಿ, ‘ಕೇಸರಿ 2’ ಒಂದು ಅತ್ಯದ್ಭುತವಾದ ಸಿನಿಮಾ. ಅಕ್ಷಯ್ ಕುಮಾರ್ ಮತ್ತೊಂದು ಅತ್ಯದ್ಭುತ ಸಿನಿಮಾ ನೀಡಿದ್ದಾರೆ’ ಎಂದಿದ್ದಾರೆ ಸಿನಿಮಾಕ್ಕೆ ಐದಕ್ಕೆ ನಾಲ್ಕು ಅಂಕ ನೀಡಿದ್ದಾರೆ. ಅತುಲ್ ಸಿಂಗ್ ಚಾನು ಎಂಬುವರು ಟ್ವೀಟ್ ಮಾಡಿ, ‘ಇದೊಂದು ಭಾವನಾತ್ಮಕ ಸಿನಿಮಾ. ಸಿನಿಮಾದ ಹಲವು ದೃಶ್ಯಗಳಲ್ಲಿ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತದೆ. ಬ್ರಿಟೀಷರ ಮೇಲೆ ಜನರಲ್ ಡಯಾರ್ ಮೇಲೆ ಕೋಪ ಉಕ್ಕಿ ಬರುತ್ತದೆ. ಇಂಥಹಾ ಸಿನಿಮಾ ಮಾಡಿದ್ದಕ್ಕೆ ಧನ್ಯವಾದ’ ಎಂದಿದ್ದಾರೆ.

ಪುನೀತ್ ಸಿಂಗ್ ಎಂಬುವರು ಟ್ವೀಟ್ ಮಾಡಿ, ‘ಕೇಸರಿ 2‘ ಸ್ಪೋಟಕ ಸಿನಿಮಾ. ಶಕ್ತಿ, ಹೆಮ್ಮೆ, ರಾಷ್ಟ್ರಪ್ರೇಮ ಎಲ್ಲವನ್ನೂ ಒಟ್ಟಿಗೆ ಒಳಗೊಂಡಿರುವ ಸಿನಿಮಾ ಇದಾಗಿದೆ. ಅಕ್ಷಯ್ ಕುಮಾರ್ ಹಾಗೂ ಮಾಧವನ್ ಅವರ ನಟನೆ ಅದ್ಭುತ. ಸಿನಿಮಾದ ನಿರ್ದೇಶನವೂ ಅದ್ಭುತವಾಗಿದೆ. ಇದೊಂದು ಮಿಸ್ ಮಾಡಬಾರದ ಸಿನಿಮಾ’ ಎಂದಿದ್ದಾರೆ.