‘ಮಿಷನ್​ ರಾಣಿಗಂಜ್​’ ಸಿನಿಮಾ ಹೇಗಿದೆ? ಮೊದಲ ಶೋ ನೋಡಿ ವಿಮರ್ಶೆ ತಿಳಿಸಿದ ಪ್ರೇಕ್ಷಕರು

|

Updated on: Oct 06, 2023 | 12:37 PM

ಟಿನು ಸುರೇಶ್​ ದೇಸಾಯಿ ಅವರು ‘ಮಿಷನ್​ ರಾಣಿಗಂಜ್​’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. 1989ರಲ್ಲಿ ರಾಣಿಗಂಜ್​ ಕಲ್ಲಿದ್ದಲು ಗಣಿಯಲ್ಲಿ ನಡೆದ ಸತ್ಯ ಘಟನೆಯನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ. ಗಣಿ ತಜ್ಞ ಜಸ್ವಂತ್​ ಸಿಂಗ್​ ಗಿಲ್​ ಅವರ ಪಾತ್ರಕ್ಕೆ ಅಕ್ಷಯ್​ ಕುಮಾರ್​ ಬಣ್ಣ ಹಚ್ಚಿದ್ದಾರೆ. ಈ ಚಿತ್ರದ ಟ್ವಿಟರ್​ ವಿಮರ್ಶೆ ಇಲ್ಲಿದೆ..

‘ಮಿಷನ್​ ರಾಣಿಗಂಜ್​’ ಸಿನಿಮಾ ಹೇಗಿದೆ? ಮೊದಲ ಶೋ ನೋಡಿ ವಿಮರ್ಶೆ ತಿಳಿಸಿದ ಪ್ರೇಕ್ಷಕರು
ಮಿಷನ್​ ರಾಣಿಗಂಜ್​
Follow us on

ನಟ ಅಕ್ಷಯ್​ ಕುಮಾರ್​ (Akshay Kumar) ಅವರು ಪ್ರತಿ ಬಾರಿ ಸಿನಿಮಾ ಆಯ್ಕೆ ಮಾಡಿಕೊಳ್ಳುವಾಗ ಕಥೆ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಅವರು ರಿಯಲ್​ ಲೈಫ್​ ಘಟನೆಗಳಿಂದ ಆಧರಿಸಿದ ಕಥೆಗಳಿಗೆ ಆದ್ಯತೆ ನೀಡಿದ್ದಾರೆ. ಇಂದು (ಅಕ್ಟೋಬರ್​ 6) ಬಿಡುಗಡೆ ಆಗಿರುವ ಮಿಷನ್​ ರಾಣಿಗಂಜ್​’ (Mission Raniganj) ಸಿನಿಮಾದಲ್ಲೂ ಅದು ಮುಂದುವರಿದಿದೆ. ನೈಜ ಕಥೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಇದರಲ್ಲಿ ಅಕ್ಷಯ್​ ಕುಮಾರ್​ ಅವರಿಗೆ ಜೋಡಿಯಾಗಿ ಪರಿಣೀತಿ ಚೋಪ್ರಾ ನಟಿಸಿದ್ದಾರೆ. ಮೊದಲ ದಿನ ಮೊದಲ ಶೋ ನೋಡಿಬಂದಿರುವ ಪ್ರೇಕ್ಷಕರು ಸೋಶಿಯಲ್​ ಮೀಡಿಯಾ ಮೂಲಕ ತಮ್ಮ ವಿಮರ್ಶೆ ತಿಳಿಸುತ್ತಿದ್ದಾರೆ. ನೆಟ್ಟಿಗರ ವಿಮರ್ಶೆ (Mission Raniganj Twitter Review) ಇಲ್ಲಿದೆ ನೋಡಿ..

‘ಇದು ಒಳ್ಳೆಯ ಸಿನಿಮಾ’ ಎಂದು ಬಹುತೇಕ ಪ್ರೇಕ್ಷಕರು ಹೇಳುತ್ತಿದ್ದಾರೆ. ಕೆಲವರು 5ಕ್ಕೆ 4 ಸ್ಟಾರ್​ ನೀಡಿದ್ದಾರೆ. ‘ಸಿನಿಮಾ ಹಿಟ್​ ಆಗತ್ತೋ ಅಥವಾ ಫ್ಲಾಪ್​ ಆಗತ್ತೋ ಎಂಬುದು ಮುಖ್ಯವಲ್ಲ. ಜನರು ಈ ಚಿತ್ರದ ಬಗ್ಗೆ ಒಳ್ಳೆಯ ಮಾತುಗಳನ್ನು ಆಡುತ್ತಿದ್ದಾರೆ. ಮೊದಲು ನಿಮ್ಮ ಹತ್ತಿರದ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿ’ ಎಂದು ಕೂಡ ನೆಟ್ಟಿಗರೊಬ್ಬರು ಟ್ವೀಟ್​ ಮಾಡಿದ್ದಾರೆ.

ಟಿನು ಸುರೇಶ್​ ದೇಸಾಯಿ ಅವರು ‘ಮಿಷನ್​ ರಾಣಿಗಂಜ್​’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. 1989ರಲ್ಲಿ ರಾಣಿಗಂಜ್​ ಕಲ್ಲಿದ್ದಲು ಗಣಿಯಲ್ಲಿ ನಡೆದ ಸತ್ಯ ಘಟನೆಯನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ. ಗಣಿ ತಜ್ಞ ಜಸ್ವಂತ್​ ಸಿಂಗ್​ ಗಿಲ್​ ಅವರ ಪಾತ್ರಕ್ಕೆ ಅಕ್ಷಯ್​ ಕುಮಾರ್​ ಬಣ್ಣ ಹಚ್ಚಿದ್ದಾರೆ. ಗಣಿಯಲ್ಲಿ ದುರಂತವೊಂದು ನಡೆದಾಗ ಅಲ್ಲಿದ್ದ ಕಾರ್ಮಿಕರನ್ನು ಜಸ್ವಂತ್​ ಸಿಂಗ್​ ಗಿಲ್​ ಅವರು ಕಾಪಾಡುತ್ತಾರೆ. ಆ ಶೌರ್ಯದ ಘಟನೆಯನ್ನು ಆಧರಿಸಿ ಮೂಡಿಬಂದಿರುವ ಈ ಸಿನಿಮಾ ಸ್ಫೂರ್ತಿದಾಯವಾಗಿದೆ ಎಂದು ಪ್ರೇಕ್ಷಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ.

‘ಸಿನಿಮಾದಲ್ಲಿ ಎಮೋಷನಲ್​ ದೃಶ್ಯಗಳು ತುಂಬ ಚೆನ್ನಾಗಿ ಮೂಡಿಬಂದಿವೆ. ಅಕ್ಷಯ್​ ಕುಮಾರ್​ ಅವರ ನಟನೆಗೆ ರಾಷ್ಟ್ರ ಪ್ರಶಸ್ತಿ ಬರಬೇಕು. ಆದರೆ ಗ್ರಾಫಿಕ್ಸ್​ ಗುಣಮಟ್ಟ ತುಂಬ ಕಳಪೆ ಆಗಿದೆ’ ಎಂದು ಪ್ರೇಕ್ಷಕರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ರೀತಿ ಮಿಶ್ರಪ್ರತಿಕ್ರಿಯೆ ಪಡೆದಿರುವುದರಿಂದ ಮೊದಲ ದಿನ ಈ ಸಿನಿಮಾಗೆ ಸಾಧಾರಣ ಕಲೆಕ್ಷನ್​ ಆಗುವ ನಿರೀಕ್ಷೆ ಇದೆ. ಇದಲ್ಲದೇ ಹಲವು ಸಿನಿಮಾಗಳಲ್ಲಿ ಅಕ್ಷಯ್​ ಕುಮಾರ್​ ನಟಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.