ಅಕ್ಷಯ್ ಕುಮಾರ್ ಅವರಿಗೆ ಹೀರೋ ಆಗಿ ಯಶಸ್ಸು ಸಿಗುತ್ತಿಲ್ಲ. ಅವರು ಮಾಡಿದ ಸಾಲು ಸಾಲು ಸಿನಿಮಾಗಳು ಫ್ಲಾಪ್ ಆಗುತ್ತಿವೆ. ಈ ಕಾರಣಕ್ಕೆ ಅವರು ವಿಲನ್ ಆಗಲು ಹೊರಟಿದ್ದಾರೆ. ಹೌದು, ಅಕ್ಷಯ್ ಕುಮಾರ್ ಹಿಂದಿಯ ‘ಸ್ತ್ರೀ 3’ ಚಿತ್ರದಲ್ಲಿ ವಿಲನ್ ಪಾತ್ರ ಮಾಡುತ್ತಿದ್ದಾರೆ. ‘ಸ್ತ್ರೀ 2’ ಚಿತ್ರದ ಕ್ಲೈಮ್ಯಾಕ್ಸ್ ನೋಡಿದ ಅನೇಕರಿಗೆ ಹೀಗೊಂದು ಅನುಮಾನ ಶುರುವಾಗಿದೆ.
‘ಸ್ತ್ರೀ’ ಸಿನಿಮಾ 2018ರಲ್ಲಿ ರಿಲೀಸ್ ಆಗಿತ್ತು. ಅದರ ಮುಂದುವರಿದ ಭಾಗವಾಗಿ ‘ಸ್ತ್ರೀ 2’ ಸಿನಿಮಾ ಮೂಡಿ ಬಂದಿದೆ. ಈ ಚಿತ್ರದಲ್ಲಿ ಸರ್ಕಟ್ ಹೆಸರಿನ ದೆವ್ವದ ಪಾತ್ರ ಗಮನ ಸೆಳೆದಿದೆ. (Spoiler Alert: ಸ್ತ್ರೀ 2 ಸಿನಿಮಾ ಇನ್ನೂ ನೋಡಿಲ್ಲ ಎಂದಾದರೆ ಮುಂದೆ ಓದಬೇಡಿ). ‘ಸ್ತ್ರೀ 2’ ಸಿನಿಮಾ ಕ್ಲೈಮ್ಯಾಕ್ಸ್ನಲ್ಲಿ ಸರ್ಕಟ್ನ ಆತ್ಮ ಅಕ್ಷಯ್ ಕುಮಾರ್ ದೇಹ ಸೇರುತ್ತದೆ. ಈ ಮೂಲಕ ಅಕ್ಷಯ್ ಕುಮಾರ್ ಅವರ ಪಾತ್ರ ಬದಲಾಗುತ್ತದೆ. ಈ ರೀತಿಯಲ್ಲಿ ‘ಸ್ತ್ರೀ 2’ ಕ್ಲೈಮ್ಯಾಕ್ಸ್ ಇದೆ. ‘ಸ್ತ್ರೀ 2’ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿರೋ ಅಕ್ಷಯ್ ಮೂರನೇ ಪಾರ್ಟ್ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
‘ಸ್ತ್ರೀ 3’ ಸಿನಿಮಾಗೆ ಈಗಾಗಲೇ ಸ್ಕ್ರಿಪ್ಟ್ ಬರೆಯಲಾಗಿದೆ ಎಂದು ‘ಸ್ತ್ರೀ 2’ ನಿರ್ದೇಶಕ ಅಮರ್ ಕೌಶಿಕ್ ಅವರು ಈ ಮೊದಲು ಘೋಷಣೆ ಮಾಡಿದ್ದರು. ‘ಸ್ತ್ರೀ’ ಸಿನಿಮಾ 2018ರಲ್ಲಿ ರಿಲೀಸ್ ಆಗಿತ್ತು. ‘ಸ್ತ್ರೀ 2’ ಸಿನಿಮಾ ರಿಲೀಸ್ ಆಗೋಕೆ ಆರು ವರ್ಷಗಳು ಬೇಕಾದವು. ಈಗ ಮೂರನೇ ಪಾರ್ಟ್ಗೆ ಅಷ್ಟೊಂದು ಸಮಯ ಹಿಡಿಯವುದಿಲ್ಲ ಎಂದು ನಿರ್ದೇಶಕರು ಹೇಳಿದ್ದಾರೆ.
ಇದನ್ನೂ ಓದಿ: ಅಕ್ಷಯ್ ಕುಮಾರ್ ಸಿನಿಮಾ ಆಯ್ಕೆ ಬಗ್ಗೆ ಆಪ್ತರಿಂದಲೇ ಮೂಡಿದೆ ಪ್ರಶ್ನೆ; ಬೇಸರ ಹೊರಹಾಕಿದ ನಟ
‘ಸ್ತ್ರೀ 2’ ಸಿನಿಮಾ ಭಾರತದ ಬಾಕ್ಸ್ ಆಫೀಸ್ನಲ್ಲಿ 11 ದಿನಕ್ಕೆ 384 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಹಾರರ್ ಶೈಲಿಯಲ್ಲಿ ಮೂಡಿ ಬಂದ ಈ ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆಗಿದೆ. ಈ ಚಿತ್ರವನ್ನು ಜನರು ಮುಗಿಬಿದ್ದು ವೀಕ್ಷಣೆ ಮಾಡುತ್ತಿದ್ದಾರೆ. ‘ಸ್ತ್ರೀ 2’ ಚಿತ್ರದಲ್ಲಿ ಭರ್ಜರಿ ಹಾಸ್ಯ ಇದೆ. ಇದು ಸಿನಿಮಾಗೆ ಸಹಕಾರಿ ಆಗಿದೆ. ಹಾರರ್ ಕಾಮಿಡಿ ಶೈಲಿಯಲ್ಲಿ ಸಿನಿಮಾ ಮೂಡಿ ಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.