‘ನನ್ನನ್ನು ತೆಗೆದು ಹಾಕಲಾಯಿತು’; ಬಿಗ್ ಬಜೆಟ್​ ಸಿನಿಮಾದಿಂದ ಹೊರಗಿಟ್ಟಿದ್ದಕ್ಕೆ ಅಕ್ಷಯ್ ಬೇಸರ

ಅಕ್ಷಯ್ ಕುಮಾರ್ ಅವರು ಭೂಲ್ ಭುಲಯ್ಯ 2 ಮತ್ತು 3 ರಲ್ಲಿ ನಟಿಸದಿರುವುದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ತಮ್ಮ ಅಭಿಮಾನಿಗಳೊಂದಿಗೆ ಮಾತನಾಡಿದ್ದಾರೆ. ಅವರನ್ನು ಚಿತ್ರದಿಂದ ತೆಗೆದುಹಾಕಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಚಿತ್ರದ ನಿರ್ದೇಶಕ ಅನೀಸ್ ಬಾಜ್ಮಿ ಅವರು ಅಕ್ಷಯ್ ಅವರೊಂದಿಗೆ ಉತ್ತಮ ಸ್ನೇಹವನ್ನು ಹೊಂದಿದ್ದು, ಭವಿಷ್ಯದಲ್ಲಿ ಅವರೊಂದಿಗೆ ಚಿತ್ರ ನಿರ್ಮಿಸುವ ಬಗ್ಗೆ ಚರ್ಚಿಸಿದ್ದಾರೆ. ಭೂಲ್ ಭುಲಯ್ಯ ಸರಣಿಯ ಯಶಸ್ಸು ಮತ್ತು ಅಕ್ಷಯ್ ಅವರ ಭವಿಷ್ಯದ ಯೋಜನೆಗಳ ಬಗ್ಗೆ ಚರ್ಚಿಸಲಾಗಿದೆ.

‘ನನ್ನನ್ನು ತೆಗೆದು ಹಾಕಲಾಯಿತು’; ಬಿಗ್ ಬಜೆಟ್​ ಸಿನಿಮಾದಿಂದ ಹೊರಗಿಟ್ಟಿದ್ದಕ್ಕೆ ಅಕ್ಷಯ್ ಬೇಸರ
ಅಕ್ಷಯ್
Edited By:

Updated on: Jan 23, 2025 | 11:00 AM

ಅಕ್ಷಯ್ ಕುಮಾರ್ ಅವರು ಬಾಲಿವುಡ್​ನ ಸ್ಟಾರ್ ಹೀರೋ. ಅವರಿಗೆ ಸಾಕಷ್ಟು ಬೇಡಿಕೆ ಇದೆ. ವರ್ಷಕ್ಕೆ ಮೂರರಿಂದ ನಾಲ್ಕು ಸಿನಿಮಾಗಳು ರಿಲೀಸ್ ಆಗುತ್ತವೆ. ಅವರ ಸಿನಿಮಾಗಳು ಸತತ ಸೋಲು ಕಂಡರೂ ಸಿನಿಮಾ ಮಡೋದನ್ನು ಮಾತ್ರ ಅವರು ನಿಲ್ಲಿಸಿಲ್ಲ. ಅವರು ‘ಭೂಲ್ ಭುಲಯ್ಯ’ ಸಿನಿಮಾದಲ್ಲಿ ನಟಿಸಿದ್ದರು. ಆದರೆ, ‘ಭೂಲ್ ಭುಲಯ್ಯ’ ಎರಡು ಹಾಗೂ ಮೂರನೇ ಭಾಕ್ಕೆ ಅಕ್ಷಯ್ ಕುಮಾರ್ ಬದಲು ಕಾರ್ತಿಕ್ ಆರ್ಯನ್ ನಟಿಸಿದರು. ಈ ಬಗ್ಗೆ ಅಕ್ಷಯ್ ಉತ್ತರಿಸಿದ್ದಾರೆ.

ಅಕ್ಷಯ್ ಕುಮಾರ್ ಅವರು ಬಾಲಿವುಡ್​ನ ಸ್ಟಾರ್ ನಟ ಹೌದು. ಆದರೆ, ಅವರ ಸಿನಿಮಾಗಳು ಹೀನಾಯ ಕಲೆಕ್ಷನ್ ಮಾಡುತ್ತಿವೆ. ನಿರ್ಮಾಪಕರಿಗೆ ಅವರಿಂದ ನಷ್ಟವೇ ಹೆಚ್ಚು. ಅಲ್ಲದೆ ಅವರು ದೊಡ್ಡ ಮೊತ್ತದಲ್ಲಿ ಸಂಭಾವನೆ ಪಡೆಯುತ್ತಾರೆ. ಈ ಕಾರಣದಿಂದಲೇ ಅವರನ್ನು ‘ಭೂಲ್ ಭುಲಯ್ಯ 2’ ಚಿತ್ರದಿಂದ ಹೊರಕ್ಕೆ ಇಡಲಾಯಿತು ಎನ್ನುವ ಮಾತಿದೆ. ಈ ಬಗ್ಗೆ ಕೊನೆಗೂ ಅಕ್ಷಯ್ ಮೌನ ಮುರಿದಿದ್ದಾರೆ.

ಇತ್ತೀಚೆಗೆ ಅವರು ಸಂದರ್ಶನ ಒಂದರಲ್ಲಿ ಅಭಿಮಾನಿಗಳ ಜೊತೆ ಮಾತನಾಡುವ ಅವಕಾಶ ಪಡೆದರು. ಈ ವೇಳೆ ಓರ್ವ ಅಭಿಮಾನಿ, ‘ನೀವಿಲ್ಲ ಎಂಬ ಕಾರಣಕ್ಕೆ ಭೂಲ್ ಬುಲಯ್ಯ 2 ಹಾಗೂ ‘ಭೂಲ್ ಭುಲಯ್ಯ 3 ಚಿತ್ರವನ್ನು ವೀಕ್ಷಿಸಿಲ್ಲ’ ಎಂದರು. ಇದಕ್ಕೆ ಅಕ್ಷಯ್ ಉತ್ತರಿಸಿ, ‘ಅವರು ನನ್ನನ್ನು ತೆಗೆದು ಹಾಕಿದರು, ಅಷ್ಟೇ’ ಎಂದಿದ್ದಾರೆ. ಅಕ್ಷಯ್ ಕುಮಾರ್​ಗೆ ಈ ಬಗ್ಗೆ ಬೇಸರ ಇದೆ ಎನ್ನಲಾಗಿದೆ.

ಇದನ್ನೂ ಓದಿ: ಬಿಗ್ ಬಾಸ್ 18 ಶೂಟ್​ಗೆ ತಡವಾಗಿ ಬಂದ ಸಲ್ಮಾನ್; ಸಿಟ್ಟಿನಿಂದ ಹೊರ ನಡೆದ ಅಕ್ಷಯ್ ಕುಮಾರ್?

1993ರಲ್ಲಿ ಬಂದ ಮಲಯಾಳಂನ ‘ಮಣಿಚಿತ್ರತಳು’ ಸಿನಿಮಾದ ರಿಮೇಕ್ ಆಗಿದೆ. ಇದನ್ನು ಹಿಂದಿಗೆ ‘ಭೂಲ್ ಭುಲಯ್ಯ’ ಹೆಸರಲ್ಲಿ ರಿಮೇಕ್ ಮಾಡಲಾಯಿತು. ಅಕ್ಷಯ್ ಕುಮಾರ್ ಅವರು ಡಾಕ್ಟರ್ ಆದಿತ್ಯ ಶ್ರಿವಾಸ್ತವ್ ಹೆಸರಿನ ಪಾತ್ರ ಮಾಡಿದ್ದರು. ಆದರೆ, ಎರಡನೇ ಪಾರ್ಟ್​ನಲ್ಲಿ ಅವರ ಬದಲು ಕಾರ್ತಿಕ್ ಬಂದರು. ಈ ಚಿತ್ರ ಹಿಟ್ ಆಯಿತು. ಮೂರನೇ ಪಾರ್ಟ್​ ವಿಮರ್ಶೆಯಲ್ಲಿ ಸೋತಿದೆ. ಆದರೆ, ಬಾಕ್ಸ್ ಆಫೀಸ್​ನಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ. ಈ ಚಿತ್ರದ ನಿರ್ದೇಶಕ ಅನೀಸ್ ಬಾಜ್ಮಿ ಅವರು ಅಕ್ಷಯ್ ಜೊತೆ ಒಳ್ಳೆಯ ಗೆಳೆತನ ಇದ್ದು ಮುಂದಿನ ದಿನಗಳಲ್ಲಿ ಸಿನಿಮಾ ಮಾಡೋದಾಗಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:59 am, Thu, 23 January 25

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us