AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಧುರಂಧರ್ 2’ ಯಶಸ್ಸಿನ ಓಟಕ್ಕೆ ಬ್ರೇಕ್ ಕೊಟ್ಟ ‘ಭೂತ್ ಬಂಗ್ಲ’; ವೀಕೆಂಡ್​​ನಲ್ಲಿ ಭರ್ಜರಿ ಕಲೆಕ್ಷನ್

ರಣವೀರ್ ಸಿಂಗ್ ನಟನೆಯ 'ಧುರಂಧರ್ 2' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಒಂದು ತಿಂಗಳಿಂದ ಭರ್ಜರಿ ಕಲೆಕ್ಷನ್ ಮಾಡಿತ್ತು. ಆದರೆ, ಈಗ ಅಕ್ಷಯ್ ಕುಮಾರ್ ಅಭಿನಯದ 'ಭೂತ್ ಬಂಗ್ಲ' ಈ ಯಶಸ್ಸಿನ ಓಟಕ್ಕೆ ಬ್ರೇಕ್ ಹಾಕಿದೆ. 'ಭೂತ್ ಬಂಗ್ಲ' ರಿಲೀಸ್ ಆದ ಕೇವಲ ಮೂರೇ ದಿನಗಳಲ್ಲಿ ಉತ್ತಮ ಗಳಿಕೆ ಕಂಡಿದ್ದು, 'ಧುರಂಧರ್ 2' ಪ್ರದರ್ಶನವನ್ನು ಹಿಂದಿಕ್ಕಿದೆ.

‘ಧುರಂಧರ್ 2’ ಯಶಸ್ಸಿನ ಓಟಕ್ಕೆ ಬ್ರೇಕ್ ಕೊಟ್ಟ ‘ಭೂತ್ ಬಂಗ್ಲ’; ವೀಕೆಂಡ್​​ನಲ್ಲಿ ಭರ್ಜರಿ ಕಲೆಕ್ಷನ್
ಅಕ್ಷಯ್-ರಣವೀರ್
ರಾಜೇಶ್ ದುಗ್ಗುಮನೆ
|

Updated on: Apr 20, 2026 | 7:38 AM

Share

ರಣವೀರ್ ಸಿಂಗ್ (Ranveer Singh) ಅವರ ‘ಧುರಂಧರ್ 2’ ಸಿನಿಮಾ ಒಳ್ಳೆಯ ರೀತಿಯಲ್ಲಿ ಕಲೆಕ್ಷನ್ ಮಾಡುತ್ತಾ ಸಾಗುತ್ತಾ ಇತ್ತು. ಸಿನಿಮಾ ರಿಲೀಸ್ ಆಗಿ ಸರಿಯಾಗಿ ಒಂದು ತಿಂಗಳು ಕಳೆದಿದೆ. ಆದಾಗ್ಯೂ ಇದರ ಓಟ ನಿಂತಿರಲಿಲ್ಲ. ಆದರೆ, ಈ ವೇಗಕ್ಕೆ ಅಕ್ಷಯ್ ಕುಮಾರ್ ನಟನೆಯ ‘ಭೂತ್ ಬಂಗ್ಲ’ ಸಿನಿಮಾ ಬ್ರೇಕ್ ಹಾಕಿದೆ. ಅಕ್ಷಯ್ ಕುಮಾರ್ ಚಿತ್ರ ಬಾಕ್ಸ್ ಆಫೀಸ್​​ನಲ್ಲಿ ಒಳ್ಳೆಯ ಗಳಿಕೆ ಮಾಡುತ್ತಾ ಇದೆ. ಒಂದಾದ ಬಳಿಕ ಒಂದು ಗೆಲುವು ಸಿಗುತ್ತಿರುವುದಕ್ಕೆ ಬಾಲಿವುಡ್ ಮಂದಿ ಕೂಡ ಖುಷಿಯಾಗಿದ್ದಾರೆ.

ರಣವೀರ್ ಸಿಂಗ್ ‘ಧುರಂಧರ್ 2’ ಸಿನಿಮಾ ಮಾರ್ಚ್ 19ರಂದು ರಿಲೀಸ್ ಆಯಿತು. ಸಿನಿಮಾ ರಿಲೀಸ್ ಆಗಿ 30 ದಿನ ಆಗಿದೆ. ಈ ಸಿನಿಮಾ ವಿಶ್ವ ಮಟ್ಟದಲ್ಲಿ 1756 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಭಾರತದ ಗ್ರಾಸ್ ಕಲೆಕ್ಷನ್ 1,335 ಕೋಟಿ ರೂಪಾಯಿ ಆಗಿದೆ. ಭಾನುವಾರ ಈ ಚಿತ್ರ 4 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದಕ್ಕೂ ಹಿಂದಿನ ಭಾನುವಾರ (ಏಪ್ರಿಲ್ 12) ಸಿನಿಮಾ 17 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಇದಕ್ಕೆ ಹೋಲಿಕೆ ಮಾಡಿದರೆ ಏಪ್ರಿಲ್ 19ರ ಗಳಿಕೆ ಬಹಳವೇ ಕಡಿಮೆ ಆಗಿದೆ. ಇದಕ್ಕೆ ಕಾರಣ ಆಗಿದ್ದು ಅಕ್ಷಯ್ ಕುಮಾರ್ ಅವರ ‘ಭೂತ್ ಬಂಗ್ಲ’ ಸಿನಿಮಾ.

‘ಧುರಂಧರ್ 2’ ಸಿನಿಮಾ ಅಬ್ಬರದ ಮಧ್ಯೆ ಸಿಕ್ಕಿ ಹಾಕಿಕೊಳ್ಳುವುದು ಬೇಡ ಎಂಬ ಕಾರಣಕ್ಕೆ ‘ಭೂತ್ ಬಂಗ್ಲ’ ಸಿನಿಮಾದ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿತ್ತು. ಏಪ್ರಿಲ್ 17ರಂದು ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರ ಭಾನುವಾರ 23 ಕೋಟಿ ರೂಪಾಯಿ ಗಳಿಕೆ ಮಾಡಿದೆ. ‘ಧುರಂಧರ್ 2’ ಚಿತ್ರಕ್ಕೆ ನೀಡಲಾಗಿದ್ದ ಶೋಗಳ ಸಂಖ್ಯೆ ಕಡಿಮೆ ಮಾಡಲಾಗಿದೆ. ಇದನ್ನು ‘ಭೂತ್ ಬಂಗ್ಲ’ಗೆ ನೀಡಲಾಗಿದೆ.

ಇದನ್ನೂ ಓದಿ: ದೀಪಿಕಾ ಪಡುಕೋಣೆ ಮತ್ತೆ ಪ್ರೆಗ್ನೆಂಟ್; 2ನೇ ಮಗುವಿನ ನಿರೀಕ್ಷೆಯಲ್ಲಿ ರಣವೀರ್ ಸಿಂಗ್

ಅಕ್ಷಯ್ ಕುಮಾರ್, ರಾಜ್​ಪಾಲ್ ಯಾದವ್ ಸೇರಿದಂತೆ ಅನೇಕರು ‘ಭೂತ್ ಬಂಗ್ಲ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ವಿಶ್ವ ಮಟ್ಟದ ಗಳಿಕೆ 95 ಕೋಟಿ ರೂಪಾಯಿ ಆಗಿದೆ. ಇದು ‘ಧುರಂಧರ್ 2’ ಯಶಸ್ಸಿನ ಓಟಕ್ಕೆ ಸಣ್ಣ ಬ್ರೇಕ್ ಹಾಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us