ಆಲಿಯಾ ಭಟ್ (Alia Bhatt) ಹಾಗೂ ರಣಬೀರ್ ಕಪೂರ್ ಮದುವೆ ವಿಚಾರ ಈ ಮೊದಲಿನಿಂದಲೂ ಚರ್ಚೆ ಆಗುತ್ತಿದ್ದ ವಿಚಾರ. ಇವರು ಪ್ರೀತಿಯಲ್ಲಿ ಬಿದ್ದು ಹಲವು ವರ್ಷಗಳೇ ಕಳೆದಿವೆ. 2019ರಿಂದ ಈಚೆಗೆ ಇವರ ಮದುವೆ ವಿಚಾರ ಹೆಚ್ಚು ಚರ್ಚೆ ಆಗುತ್ತಿತ್ತು. ವಿವಾಹ ವಿಚಾರದಲ್ಲಿ ಈ ದಂಪತಿ ಗುಟ್ಟು ಕಾಯ್ದುಕೊಂಡಿದ್ದರು. ಇನ್ಸ್ಟಾಗ್ರಾಮ್ನಲ್ಲಿ(Alia Bhatt Instagram) ಫೋಟೋ ಹಂಚಿಕೊಳ್ಳುವ ಮೂಲಕ ಈ ವಿಚಾರವನ್ನು ಆಲಿಯಾ ಭಟ್ (Alia Bhatt Wedding Photos) ಅಧಿಕೃತ ಮಾಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ದಂಪತಿಗೆ ಅಭಿಮಾನಿಗಳು, ಸೆಲೆಬ್ರಿಟಿಗಳು ಶುಭಕೋರುತ್ತಿದ್ದಾರೆ.
ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಒಟ್ಟಾಗಿ ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಸೆಟ್ಟೇರಿ ಹಲವು ವರ್ಷಗಳೇ ಕಳೆದಿವೆ. ಈ ಸಿನಿಮಾದ ಸೆಟ್ನಲ್ಲಿ ಇಬ್ಬರಿಗೂ ಪ್ರೀತಿ ಮೂಡಿದೆ ಎನ್ನಲಾಗಿದೆ. ವಿಶೇಷ ಎಂದರೆ, ಆಲಿಯಾಗೆ ಚಿಕ್ಕ ವಯಸ್ಸಿನಿಂದಲೇ ರಣಬೀರ್ ಕಪೂರ್ ಅವರ ಮೇಲೆ ಕ್ರಶ್ ಇತ್ತು. ಹೀಗಿರುವಾಗಲೇ ಇಬ್ಬರೂ ಜತೆಯಾಗಿ ನಟಿಸುವ ಅವಕಾಶ ಸಿಕ್ಕಿತ್ತು. ಆ ಸಂದರ್ಭದಲ್ಲಿ ಇಬ್ಬರ ನಡುವೆ ಪ್ರೀತಿ ಮೊಳೆತಿದೆ. ಈಗ ಇಬ್ಬರೂ ಮದುವೆ ಆಗುವ ಹೊಸ ಬದುಕು ಆರಂಭಿಸಿದ್ದಾರೆ.
ಬಾಲಿವುಡ್ ಜೋಡಿಯ ಈ ಮದುವೆ ರಣಬೀರ್ ಕಪೂರ್ ಅವರ ಮುಂಬೈ ನಿವಾಸದಲ್ಲಿ ನಡೆದಿದೆ. ಆಪ್ತರು ಮಾತ್ರ ಈ ಮದುವೆಯಲ್ಲಿ ಪಾಲ್ಗೊಂಡಿದ್ದಾರೆ. ನೀತು ಕಪೂರ್, ಕರೀನಾ ಕಪೂರ್, ಕರಿಶ್ಮಾ ಕಪೂರ್, ಆಲಿಯಾ ಮೆಂಟರ್, ನಿರ್ಮಾಪಕ ಕರಣ್ ಜೋಹರ್ ಸೇರಿ ಕೆಲವೇ ಕೆಲವು ಮಂದಿ ಈ ಮದುವೆಗೆ ಸಾಕ್ಷಿ ಆದರು. ಆಲಿಯಾ ಮದುವೆಯಲ್ಲಿ ಕರಣ್ ಜೋಹರ್ ಅವರು ಕಣ್ಣೀರು ಹಾಕುತ್ತಿರುವ ವಿಡಿಯೋ ವೈರಲ್ ಆಗಿದೆ.
ವಿವಾಹ ಕಾರ್ಯದ 8 ಫೋಟೋಗಳನ್ನು ಆಲಿಯಾ ಹಂಚಿಕೊಂಡಿದ್ದಾರೆ. ಇದಕ್ಕೆ ಚೆಂದದ ಕ್ಯಾಪ್ಶನ್ ನೀಡಿದ್ದಾರೆ. ‘ಕುಟುಂಬದವರು, ಗೆಳಯರ ಸಮ್ಮುಖದಲ್ಲಿ, ನಮ್ಮದೇ ಮನೆಯಲ್ಲಿ, ನಮ್ಮ ನೆಚ್ಚಿನ ಸ್ಥಳದಲ್ಲಿ, ನಮ್ಮ ಸಂಬಂಧವನ್ನು ಐದು ವರ್ಷ ಕಳೆದ ಬಾಲ್ಕನಿಯಲ್ಲಿ, ನಾವು ಮದುವೆ ಆದೆವು’ ಎಂದು ಆಲಿಯಾ ಬರೆದುಕೊಂಡಿದ್ದಾರೆ.
ಕಳೆದ ವರ್ಷಾಂತ್ಯಕ್ಕೆ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಮದುವೆ ನೆರವೇರಿತ್ತು. ಈ ಮದುವೆಯಲ್ಲಿ ಮೊಬೈಲ್ನಲ್ಲಿ ಫೋಟೋ ತೆಗೆಯಲು ಅವಕಾಶ ಇರಲಿಲ್ಲ. ಆದರೆ, ಆಲಿಯಾ ಮದುವೆಯಲ್ಲಿ ಆ ರೀತಿ ಇರಲಿಲ್ಲ ಎನ್ನಲಾಗುತ್ತಿದೆ. ಇವರು ಮದುವೆ ಆಗುತ್ತಿರುವ ವಿಡಿಯೋಗಳು ಅವರ ಫ್ಯಾನ್ ಪೇಜ್ಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಮದುವೆ ವಿಚಾರ ಖಚಿತಪಡಿಸಿದ ಆಲಿಯಾ ಭಟ್; ಒಂದೇ ಕಮೆಂಟ್ ಮೂಲಕ ಎಲ್ಲವೂ ಬಹಿರಂಗ
Published On - 7:37 pm, Thu, 14 April 22