Met Gala 2024: ಸೀರೆಯಲ್ಲಿ ಮೆಟ್ ಗಾಲಾ ರೆಡ್ ಕಾರ್ಪೆಟ್​ನಲ್ಲಿ ಮಿಂಚಿದ ಆಲಿಯಾ ಭಟ್

ಮೆಟ್​ ಗಾಲಾ ಎಂಬುದು ಪ್ರತಿ ವರ್ಷ ನ್ಯೂಯಾರ್ಕ್​ನಲ್ಲಿ ನಡೆಯುವ ಒಂದು ಫ್ಯಾಷನ್​ ಹಬ್ಬ. ಜಗತ್ತಿನ ಹಲವು ಖ್ಯಾತ ಸೆಲೆಬ್ರಿಟಿಗಳು ಈ ಸಮಾರಂಭದಲ್ಲಿ ಭಾಗವಹಿಸುತ್ತಾರೆ. ಈ ಬಾರಿ ಅದ್ದೂರಿಯಾಗಿಯೇ ಮೆಟ್​ ಗಾಲಾ ಆಯೋಜನೆಗೊಂಡಿದೆ. ಆಲಿಯಾ ಟ್ರೆಡಿಷನಲ್ ಲುಕ್​ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ ಅಂತಾರಾಷ್ಟ್ರೀಯ ಪಾಪರಾಜಿಗಳು ಆಲಿಯಾ ಭಟ್ ಹೆಸರನ್ನು ಕೂಗಿದ್ದಾರೆ.

Met Gala 2024: ಸೀರೆಯಲ್ಲಿ ಮೆಟ್ ಗಾಲಾ ರೆಡ್ ಕಾರ್ಪೆಟ್​ನಲ್ಲಿ ಮಿಂಚಿದ ಆಲಿಯಾ ಭಟ್
ಆಲಿಯಾ

Updated on: May 07, 2024 | 7:35 AM

ನಟಿ ಆಲಿಯಾ ಭಟ್ (Alai Bhatt) ಅವರು ಕ್ವೀನ್ ಆಫ್ ಫ್ಯಾಷನ್ ಎಂದೇ ಫೇಮಸ್ ಆದವರು. ಅವರು ರೆಡ್ ಕಾರ್ಪೆಟ್​ ಮೇಲೆ ಹೆಜ್ಜೆ ಹಾಕುವಾಗ ಬೇರೆಯದೇ ರೀತಿಯಲ್ಲಿ ಕಾಣಿಸುತ್ತಾರೆ. ಈ ಬಾರಿ ಅವರು ಮೆಟ್​ ಗಾಲಾ ಕೆಂಪು ಹಾಸಿನ ಮೇಲೆ ಹೆಜ್ಜೆ ಹಾಕಿದ್ದಾರೆ. ಈ ವೇಳೆ ಆಲಿಯಾ ಭಟ್ ಸಬ್ಯಸಾಚಿ ಸೀರೆ ಉಟ್ಟು ಗಮನ ಸೆಳೆದಿದ್ದಾರೆ ಅನ್ನೋದು ವಿಶೇಷ. ಈ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಮೆಟ್​ ಗಾಲಾ ಎಂಬುದು ಪ್ರತಿ ವರ್ಷ ನ್ಯೂಯಾರ್ಕ್​ನಲ್ಲಿ ನಡೆಯುವ ಒಂದು ಫ್ಯಾಷನ್​ ಹಬ್ಬ. ಜಗತ್ತಿನ ಹಲವು ಖ್ಯಾತ ಸೆಲೆಬ್ರಿಟಿಗಳು ಈ ಸಮಾರಂಭದಲ್ಲಿ ಭಾಗವಹಿಸುತ್ತಾರೆ. ಈ ಬಾರಿ ಅದ್ದೂರಿಯಾಗಿಯೇ ಮೆಟ್​ ಗಾಲಾ ಆಯೋಜನೆಗೊಂಡಿದೆ. ಆಲಿಯಾ ಟ್ರೆಡಿಷನಲ್ ಲುಕ್​ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ ಅಂತಾರಾಷ್ಟ್ರೀಯ ಪಾಪರಾಜಿಗಳು ಆಲಿಯಾ ಭಟ್ ಹೆಸರನ್ನು ಕೂಗಿದ್ದಾರೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ‘ಆಲಿಯಾ ಭಟ್ ಅವರು ಅದ್ಭುತವಾಗಿ ಕಾಣಿಸುತ್ತಿದ್ದರು’ ಎಂದು ಕೆಲವರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ಆಲಿಯಾ ಭಟ್ ಅವರ ಸೀರೆಯನ್ನು ಹಾಡಿ ಹೊಗಳಿದ್ದಾರೆ.

‘ನನಗೆ ಖುಷಿ ಆಗುತ್ತಿದೆ. ನಾನು ಸಖತ್ ಎಗ್ಸೈಟ್ ಆಗಿದ್ದೇನೆ. ತಿಂಗಳುಗಳ ಸಿದ್ಧತೆ, ಸಾಕಷ್ಟು ಚರ್ಚೆ ಎಲ್ಲವೂ ಈ ಕ್ಷಣಕ್ಕಾಗಿದೆ. ಈ ಕ್ಷಣ ಸಖತ್ ಸ್ಪೆಷಲ್. ಮೆಟ್​ ಗಾಲಾದಲ್ಲಿ ಇದು ಎರಡನೇ ಬಾರಿ. ಸೀರೆ ಉಟ್ಟು ಇದು ಮೊದಲ ಮೆಟ್ ಗಾಲಾ ಈವೆಂಟ್’ ಎಂದು ಅವರು ಖುಷಿಯಿಂದ ಹೇಳಿಕೊಂಡಿದ್ದಾರೆ. ಆಲಿಯಾ ಭಟ್ ಅವರು 2023ರಲ್ಲೂ ಮೆಟ್​ ಗಾಲಾ ಈವೆಂಟ್​​ನಲ್ಲಿ ಕಾಣಿಸಿಕೊಂಡಿದ್ದರು. ಈಗ ಅವರು ಮತ್ತೊಮ್ಮೆ ಕೆಂಪು ಹಾಸಿನ ಮೇಲೆ ಕಂಗೊಳಿಸಿದ್ದಾರೆ.

ಇದನ್ನೂ ಓದಿ: ರಣ್​ಬೀರ್ ಕಪೂರ್-ಆಲಿಯಾ ಭಟ್ ಹೊಸ ಬಂಗಲೆಯ ಬಜೆಟ್ ಎಷ್ಟು ಕೋಟಿ?

ಮದುವೆ ಬಳಿಕ ಆಲಿಯಾ ಭಟ್ ಅವರು ಪ್ರೆಗ್ನೆನ್ಸಿ ಘೋಷಣೆ ಮಾಡಿದರು. ಮದುವೆ ಆದ ಏಳೇ ತಿಂಗಳಿಗೆ ಮಗು ಜನಿಸಿತು. ಆ ಬಳಿಕ ಆಲಿಯಾ ಮಗುವಿನ ಆರೈಕೆಯಲ್ಲಿ ಬ್ಯುಸಿ ಇದ್ದರು. ಈಗ ‘ಜಿಗ್ರಾ’ ಸಿನಿಮಾ ಶೂಟ್​ನಲ್ಲಿ ಅವರು ಬ್ಯುಸಿ ಇದ್ದಾರೆ. ಈ ಚಿತ್ರವನ್ನು ವಸನ್ ಬಾಲಾ ಅವರು ನಿರ್ದೇಶನ ಮಾಡುತ್ತಿದ್ದು ಆಲಿಯಾ ಹಾಗೂ ಕರಣ್ ಜೋಹರ್ ಒಟ್ಟಾಗಿ ನಿರ್ಮಿಸುತ್ತಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಲವ್ ಆ್ಯಂಡ್ ವಾರ್’ ಚಿತ್ರದಲ್ಲಿ ನಟಿಸುತ್ತಿದ್ದು, ರಣಬೀರ್ ಕಪೂರ್, ವಿಕ್ಕಿ ಕೌಶಲ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.