ಅವಕಾಶ ಕೊಡಿ ಸಾಕು, ಒಂದು ರೂಪಾಯಿ ಸಂಭಾವನೆಯೂ ಬೇಡ; ನಿರ್ದೇಶಕನ ಎದುರು ಗೋಗರೆದ ಆಲಿಯಾ

| Updated By: ರಾಜೇಶ್ ದುಗ್ಗುಮನೆ

Updated on: Aug 11, 2021 | 2:45 PM

‘ಹೀರಾ ಮಂಡಿ’ ಹೆಸರಿನ ವೆಬ್​ ಸೀರಿಸ್ ಡೈರೆಕ್ಷನ್​ ಮಾಡೋಕೆ ಸಂಜಯ್​ ಲೀಲಾ ಬನ್ಸಾಲಿ ರೆಡಿ ಆಗಿದ್ದಾರೆ. ಇದು ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಲಿದೆ. ಇದು ಬನ್ಸಾಲಿ ಪಾಲಿಗೆ ವಿಶೇಷ ಪ್ರಾಜೆಕ್ಟ್​.

ಅವಕಾಶ ಕೊಡಿ ಸಾಕು, ಒಂದು ರೂಪಾಯಿ ಸಂಭಾವನೆಯೂ ಬೇಡ; ನಿರ್ದೇಶಕನ ಎದುರು ಗೋಗರೆದ ಆಲಿಯಾ
ಆರ್​ಆರ್​ಆರ್​ ಚಿತ್ರದ ಮೂಲಕ ದಕ್ಷಿಣ ಭಾರತ ಚಿತ್ರರಂಗಕ್ಕೆ ಆಲಿಯಾ ಭಟ್ ಕಾಲಿಟ್ಟಿದ್ದಾರೆ.
Follow us on

ಸ್ಟಾರ್​ ನಟ-ನಟಿಯರು ಸಂಭಾವನೆ ವಿಚಾರಕ್ಕೆ ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಅವರು ತೆಗೆದುಕೊಳ್ಳುವ ದೊಡ್ಡ ಮೊತ್ತದ ಸಂಭಾವನೆ ಅನೇಕರ ಕಣ್ಣು ಕುಕ್ಕುತ್ತದೆ. ಈಗ ಆಲಿಯಾ ಭಟ್​ ಕೂಡ ಸಂಭಾವನೆ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಹಾಗಂತ ಅವರು ದೊಡ್ಡ ಮೊತ್ತದ ಹಣ ಕೇಳಿಲ್ಲ. ಬದಲಿಗೆ ಫ್ರೀ ಆಗಿ ನಟಿಸೋಕೆ ರೆಡಿ ಆಗಿದ್ದಾರೆ!

‘ಹೀರಾ ಮಂಡಿ’ ಹೆಸರಿನ ವೆಬ್​ ಸೀರಿಸ್ ಡೈರೆಕ್ಷನ್​ ಮಾಡೋಕೆ ಸಂಜಯ್​ ಲೀಲಾ ಬನ್ಸಾಲಿ ರೆಡಿ ಆಗಿದ್ದಾರೆ. ಇದು ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಲಿದೆ. ಇದು ಬನ್ಸಾಲಿ ಪಾಲಿಗೆ ವಿಶೇಷ ಪ್ರಾಜೆಕ್ಟ್​. ಏಕೆಂದರೆ, ಬೆಳ್ಳಿ ಪರದೆಯಲ್ಲಿ ಛಾಪು ಮೂಡಿಸಿರುವ ಅವರಿಗೆ ಇದು ಮೊದಲ ಒಟಿಟಿ ಪ್ರಾಜೆಕ್ಟ್​. ಈ ವೆಬ್​ ಸೀರಿಸ್​ ಅನ್ನು ನೆಟ್​ಫ್ಲಿಕ್ಸ್​ ನಿರ್ಮಾಣ ಮಾಡುತ್ತಿದೆ.

ಹೀರಾ ಮಂಡಿ ಕಥೆ ಸ್ವಾತಂತ್ರ್ಯ ಪೂರ್ವದ ಹಿನ್ನೆಲೆಯಲ್ಲಿ ಸಾಗಲಿದೆ. ಇಡೀ ಕಥೆ ನಡೆಯುವುದು ಲಾಹೋರ್​ನಲ್ಲಿ. ಐಶ್ವರ್ಯಾ ರೈ, ಮಾಧುರಿ ದೀಕ್ಷಿತ್​, ದೀಪಿಕಾ ಪಡುಕೋಣೆ, ಪರಿಣೀತಿ ಚೋಪ್ರಾ, ವಿದ್ಯಾ ಬಾಲನ್​ ಮೊದಲಾದವರನ್ನು ಪಾತ್ರವರ್ಗಕ್ಕೆ ಸೇರಿಸಬೇಕು ಎಂಬುದು ಬನ್ಸಾಲಿ ಆಲೋಚನೆ.

ಆಲಿಯಾ ಭಟ್​ ಕೂಡ ಈ ವೆಬ್​ ಸೀರಿಸ್​ನಲ್ಲಿ ನಟಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಆಲಿಯಾ ಭಟ್​ ಹಾಗೂ ಬನ್ಸಾಲಿ ಕಾಂಬಿನೇಷನ್​ನಲ್ಲಿ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ಮೂಡಿ ಬರುತ್ತಿದೆ. ಈಗಾಗಲೇ ಸಿನಿಮಾ ಕೆಲಸಗಳು ಪೂರ್ಣಗೊಂಡಿದ್ದು, ರಿಲೀಸ್​ಗೆ ರೆಡಿ ಇದೆ. ಈ ಚಿತ್ರದ ಕೆಲಸದ ಸಂದರ್ಭದಲ್ಲಿ ಆಲಿಯಾ ಅವರು ಬನ್ಸಾಲಿ ಅವರ ವೆಬ್​ ಸೀರಿಸ್​ನಲ್ಲಿ ನಟಿಸುವ ಇಂಗಿತ ವ್ಯಕ್ತಪಡಿಸಿದ್ದರು. ಅಲ್ಲದೆ, ಯಾವುದೇ ಪಾತ್ರ ಕೊಟ್ಟರೂ ನಟಿಸುತ್ತೇನೆ. ಅದಕ್ಕೆ ನನಗೆ ಸಂಭಾವನೆಯೂ ಬೇಡ ಎಂಬುದಾಗಿ ಆಲಿಯಾ ಹೇಳಿದ್ದರು ಎನ್ನಲಾಗಿದೆ.

ಆದರೆ, ಆಲಿಯಾ ಮನವಿಯನ್ನು ಬನ್ಸಾಲಿ ತಿರಸ್ಕರಿಸಿದ್ದಾರೆ. ವೆಬ್​ ಸೀರಿಸ್​ನಲ್ಲಿ ನಟಿಸೋಕೆ ಅವಕಾಶ ನೀಡುವ ಭರವಸೆ ಜತೆಗೆ ಸಂಭಾವನೆ ತೆಗೆದುಕೊಳ್ಳಲೇಬೇಕು ಎನ್ನುವ ಷರತ್ತು ಹಾಕಿದ್ದಾರೆ. ಹೀರಾ ಮಂಡಿಯ ಸಂಪೂರ್ಣ ನಿರ್ಮಾಣ ಜವಾಬ್ದಾರಿ ನೆಟ್​ಫ್ಲಿಕ್ಸ್​ ತೆಗೆದುಕೊಂಡಿದೆ. ಹೀಗಾಗಿ, ಎಲ್ಲಾ ಕಲಾವಿದರಿಗೆ ಅವರೇ ಸಂಭಾವನೆ ನೀಡಲಿದ್ದಾರೆ.

ಹೀರಾ ಮಂಡಿ 7 ಎಪಿಸೋಡ್​ಗಳಲ್ಲಿ ಮೂಡಿ ಬರುತ್ತಿದೆ. ಮೊದಲ ಎಪಿಸೋಡ್​ಗೆ ಮಾತ್ರ ಬನ್ಸಾಲಿ ನಿರ್ದೇಶನ ಇರಲಿದೆ. ಉಳಿದ ಆರು ಎಪಿಸೋಡ್​ಗೆ  ವಿಭು ಪುರಿ ನಿರ್ದೇಶನ ಮಾಡಲಿದ್ದಾರೆ.

ಇದನ್ನೂ ಓದಿ: ಸಂಜಯ್​ ಲೀಲಾ ಬನ್ಸಾಲಿ ಚಿತ್ರರಂಗದ ಪಯಣಕ್ಕೆ 25 ವರ್ಷ; ಇಲ್ಲಿದೆ ಅವರ ಸಿನಿ ಜರ್ನಿ ಬಗ್ಗೆ ಮಾಹಿತಿ