ಬಾಲಿವುಡ್ನ ಕ್ಯೂಟ್ ಕಪಲ್ ಎನಿಸಿಕೊಂಡಿರುವ ಆಲಿಯಾ ಭಟ್ (Alia Bhatt) ಮತ್ತು ರಣಬೀರ್ ಕಪೂರ್ ಅವರು ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಈ ಜೋಡಿ ಈಗ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿ ಇದೆ. ಆಲಿಯಾ ಭಟ್ ತಾಯಿ ಆಗುತ್ತಿರುವ ವಿಷಯ ತಿಳಿದು ಅಭಿಮಾನಿಗಳು ಸಖತ್ ಖುಷಿಪಟ್ಟಿದ್ದಾರೆ. ಪತ್ನಿ ಗರ್ಭಿಣಿ ಆಗಿರುವ ಈ ಸಂದರ್ಭದಲ್ಲಿ ರಣಬೀರ್ ಕಪೂರ್ (Ranbir Kapoor) ಅವರು ಬೇರೆ ನಟಿಯ ಜೊತೆ ಸಿಕ್ಕಾಪಟ್ಟೆ ಆಪ್ತವಾಗಿ ಪೋಸ್ ನೀಡಿದ್ದಾರೆ. ಹಾಗಂತ ಇದೇನೂ ಅವರ ವೈಯಕ್ತಿಕ ವಿಚಾರ ಅಲ್ಲ. ಏನಿದ್ದರೂ ಪಕ್ಕಾ ಪ್ರೊಫೆಷನಲ್. ಹೌದು, ‘ಶಂಷೇರಾ’ ಚಿತ್ರಕ್ಕಾಗಿ ನಟಿ ವಾಣಿ ಕಪೂರ್ (Vaani Kapoor) ಜೊತೆ ರಣಬೀರ್ ಕಪೂರ್ ಅವರು ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳು ವೈರಲ್ ಆಗಿವೆ.
ಹಲವು ನಟಿಯರ ಜೊತೆಗೆ ಲವ್ವಿ-ಡವ್ವಿ ನಡೆಸಿದ ಕಾರಣದಿಂದಲೇ ರಣಬೀರ್ ಕಪೂರ್ ಅವರು ಹೆಚ್ಚು ಸುದ್ದಿ ಆಗಿದ್ದರು. ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್, ಮಹಿರಾ ಖಾನ್ ಮುಂತಾದ ನಟಿಯರ ಜೊತೆ ಅವರು ಪ್ರೀತಿಯಲ್ಲಿ ಮುಳುಗಿದ್ದರು ಎಂಬ ವಿಷಯ ಜಗತ್ತಿಗೇ ತಿಳಿದಿದೆ. ನಂತರ ಅವರು ಆಲಿಯಾ ಜೊತೆ ಡೇಟಿಂಗ್ ಶುರು ಮಾಡಿಕೊಂಡರು. ಅಂತೂ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಅಭಿಮಾನಿಗಳಿಗೆ ಸಮಾಧಾನ ನೀಡಿತು.
ಸಾಮಾನ್ಯವಾಗಿ ಮದುವೆ ಆದ ಬಳಿಕ ಸಿನಿಮಾದಲ್ಲಿ ಹಾಟ್ ದೃಶ್ಯಗಳಲ್ಲಿ ನಟಿಸಲು ಕೆಲವು ಕಲಾವಿದರು ಹಿಂದೇಟು ಹಾಕುತ್ತಾರೆ. ಆದರೆ ರಣಬೀರ್ ಕಪೂರ್ ಹಾಗಲ್ಲ. ನಟಿ ವಾಣಿ ಕಪೂರ್ ಜೊತೆ ಅವರು ಬೋಲ್ಡ್ ಫೋಟೋಶೂಟ್ನಲ್ಲಿ ಭಾಗಿ ಆಗಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಸಿಕ್ಕಾಪಟ್ಟೆ ಕಾಲೆಳೆದಿದ್ದಾರೆ. ‘ಇದನ್ನೆಲ್ಲ ಆಲಿಯಾ ಭಟ್ ನೋಡಿದರೆ ನಿಮ್ಮ ಕಥೆ ಮುಗಿಯಿತು’ ಎಂದು ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ.
‘ಗಲ್ಲಿ ಬಾಯ್’ ಚಿತ್ರದಲ್ಲಿ ಆಲಿಯಾ ಮಾಡಿದ ಪಾತ್ರ ಗಮನ ಸೆಳೆದಿತ್ತು. ತನ್ನ ಪ್ರಿಯಕರನ ಜೊತೆ ಫ್ಲರ್ಟ್ ಮಾಡಲು ಬಂದ ಬೇರೆ ಯುವತಿಗೆ ಬಿಯರ್ ಬಾಟಲ್ನಿಂದ ಹೊಡೆಯುವ ದೃಶ್ಯದಲ್ಲಿ ಆಲಿಯಾ ಸಖತ್ ಉಗ್ರವಾಗಿ ನಟಿಸಿದ್ದರು. ಈಗ ಅಭಿಮಾನಿಗಳು ಅದೇ ಸೀನ್ ನೆನಪಿಸಿಕೊಳ್ಳುತ್ತಿದ್ದಾರೆ. ‘ಆಲಿಯಾ ಬಾಟಲ್ ತಗೊಂಡು ಬರ್ತಾರೆ, ಹುಷಾರ್..’ ಎಂದು ವಾಣಿ ಕಪೂರ್ಗೆ ನೆಟ್ಟಿಗರು ಎಚ್ಚರಿಗೆ ನೀಡುತ್ತಿದ್ದಾರೆ. ಈ ರೀತಿ ಅನೇಕ ಮೀಮ್ಸ್ ಹರಿದಾಡುತ್ತಿದೆ.
ಇದನ್ನೂ ಓದಿ: Alia Bhatt: ಪ್ರೆಗ್ನೆಂಟ್ ಆಗಿದ್ದು ಆಲಿಯಾ ಭಟ್, ಆದರೆ ಸುದ್ದಿ ಕೇಳಿ ಕಣ್ಣೀರು ಹಾಕಿದ್ದು ಕರಣ್ ಜೋಹರ್
Published On - 7:15 am, Thu, 7 July 22