
ಸೆಲೆಬ್ರಿಟಿಗಳ ದುನಿಯಾದಲ್ಲಿ ಲವ್, ಡೇಟಿಂಗ್ ಎಂಬುದೆಲ್ಲ ಅತಿ ಸಹಜ. ಆದರೆ ಅನೇಕರು ತಮ್ಮ ವೈಯಕ್ತಿಕ ವಿಚಾರಗಳನ್ನು ಮುಚ್ಚಿಡುತ್ತಾರೆ. ನಟಿ ಅಮೀಶಾ ಪಟೇಲ್ (Ameesha Patel) ಬದುಕಿನಲ್ಲಿಯೂ ಹಾಗೆಯೇ ಆಗುತ್ತಿದೆ. ಉದ್ಯಮಿ ಫೈಸಲ್ ಪಟೇಲ್ (Faisal Patel) ಜೊತೆ ಅವರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಆ ವಿಚಾರವನ್ನು ಅವರು ಎಂದಿಗೂ ಒಪ್ಪಿಕೊಂಡಿಲ್ಲ. ಅದೇನೇ ಇರಲಿ, ಇತ್ತೀಚೆಗೆ ಒಂದು ವಿಲಕ್ಷಣ ಘಟನೆ ನಡೆದಿದೆ. ಅಮೀಶಾ ಪಟೇಲ್ ಇದನ್ನು ನಿರೀಕ್ಷಿಸಿಯೇ ಇರಲಿಲ್ಲ. ಇಷ್ಟು ದಿನ ಗುಟ್ಟಾಗಿ ಇಟ್ಟಿದ್ದ ಅವರ ಪ್ರೇಮ್ ಕಹಾನಿ ಈಗ ಜಗಜ್ಜಾಹೀರಾಗಿದೆ. ಬಹಿರಂಗವಾಗಿಯೇ ಫೈಸಲ್ ಪಟೇಲ್ ಮದುವೆ ಪ್ರಮೋಸ್ ಮಾಡಿದ್ದಾರೆ. ಆ ವಿಚಾರ ಈಗ ಸಖತ್ ವೈರಲ್ ಆಗಿದೆ.
ಫೈಸಲ್ ಪಟೇಲ್ ಮತ್ತು ಅಮೀಶಾ ಪಟೇಲ್ ಅವರು ಈಗಾಗಲೇ ಅನೇಕ ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದುಂಟು. ಇತ್ತೀಚೆಗೆ ಫೈಸಲ್ ಪಟೇಲ್ ಅವರ ಬರ್ತ್ಡೇ ಪಾರ್ಟಿಯಲ್ಲಿ ಅಮೀಶಾ ಕೂಡ ಭಾಗಿ ಆಗಿದ್ದರು. ಬಳಿಕ ಆ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅದಕ್ಕೆ ಊಹಿಸಲೂ ಆಗದಂತಹ ಪ್ರತಿಕ್ರಿಯೆ ಬರುತ್ತದೆ ಎಂದು ಅಮೀಶಾ ನಿರೀಕ್ಷಿಸಿರಲಿಲ್ಲ.
‘ಹ್ಯಾಪಿ ಬರ್ತ್ಡೇ ಮೈ ಡಾರ್ಲಿಂಗ್ ಫೈಸಲ್ ಪಟೇಲ್. ಲವ್ ಯೂ. ಅದ್ಭುತವಾದ ವರ್ಷ ನಿಮ್ಮದಾಗಲಿ’ ಎಂದು ಅಮೀಶಾ ಪಟೇಲ್ ಪೋಸ್ಟ್ ಮಾಡಿದ್ದರು. ಅದಕ್ಕೆ ಕಮೆಂಟ್ ಮಾಡಿರುವ ಫೈಸಲ್ ಅವರು, ‘ಧನ್ಯವಾದಗಳು ಅಮೀಶಾ.. ನಾನು ಸಾರ್ವಜನಿಕವಾಗಿಯೇ ಪ್ರಪೋಸ್ ಮಾಡುತ್ತಿದ್ದೇನೆ. ನನ್ನನ್ನು ಮದುವೆ ಆಗ್ತೀರಾ’ ಎಂದು ಕೇಳಿದ್ದಾರೆ. ಈ ಕಮೆಂಟ್ ನೋಡಿ ಎಲ್ಲರಿಗೂ ಅಚ್ಚರಿ ಆಗಿದೆ.
ಫೈಸಲ್ ಪಟೇಲ್ ಈ ರೀತಿ ಕಮೆಂಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಅದು ವೈರಲ್ ಆಗಿದೆ. ಅಮೀಶಾ ಪಟೇಲ್ ಅವರು ಉತ್ತರ ನೀಡುವುದಕ್ಕೂ ಮುನ್ನವೇ ಫೈಸಲ್ ಆ ಕಮೆಂಟ್ ಡಿಲೀಟ್ ಮಾಡಿದ್ದಾರೆ. ಒಟ್ಟಿನಲ್ಲಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬುದಕ್ಕೆ ಈ ಟ್ವೀಟ್ ಮತ್ತು ಫೋಟೋಗಳು ಸಾಕ್ಷಿ ಒದಗಿಸುತ್ತಿವೆ. ಕಳೆದ 2 ದಶಕಗಳಿಂದಲೂ ಅಮೀಶಾ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಈಗಲೂ ಅವರ ಕೈಯಲ್ಲಿ ಅನೇಕ ಆಫರ್ಗಳಿವೆ. ಸದ್ಯ ‘ಗದರ್ 2’ ಸಿನಿಮಾದ ಕೆಲಸಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ.
ಫೈಸಲ್ ಪಟೇಲ್ ನೇರವಾಗಿ ಪ್ರಪೋಸ್ ಮಾಡಿರುವ ವಿಷಯದ ಬಗ್ಗೆ ಅಮೀಶಾ ಅವರು ಇನ್ನೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಶೀಘ್ರದಲ್ಲೇ ಅವರು ಅಧಿಕೃತವಾಗಿ ತಮ್ಮ ಪ್ರೀತಿಯ ವಿಚಾರವನ್ನು ಬಹಿರಂಗಪಡಿಸಬಹುದು ಎಂದು ನಿರೀಕ್ಷಿಸಲಾಗುತ್ತಿದೆ.
ಇದನ್ನೂ ಓದಿ:
ಗುಟ್ಟಾಗಿ ಮದುವೆ ಆದ ಸೀರಿಯಲ್ ನಟ; ಫೋಟೋ ವೈರಲ್ ಆದ ಬಳಿಕ ಅಚ್ಚರಿಪಟ್ಟ ಫ್ಯಾನ್ಸ್
ಬಾಯ್ಫ್ರೆಂಡ್ ಕಳೆದುಕೊಂಡಿದ್ದ ಸಂಜಯ್ ದತ್ ಪುತ್ರಿಗೆ ಅಭಿಮಾನಿಯ ಪ್ರಪೋಸ್; ಒಪ್ಪಿಕೊಂಡ್ರಾ ತ್ರಿಶಾಲಾ?