ಐಶ್ವರ್ಯ-ಅಭಿಷೇಕ್ ವಿಚ್ಛೇದನ ವದಂತಿ: ಅಮಿತಾಬ್ ಬಚ್ಚನ್ ಟ್ವೀಟ್ ವೈರಲ್

|

Updated on: Dec 12, 2023 | 7:59 PM

Amitabh Bachchan: ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಇದರ ನಡುವೆ ಅಮಿತಾಬ್ ಬಚ್ಚನ್ ಮಾಡಿರುವ ಟ್ವೀಟ್ ಚರ್ಚೆಗೆ ಇಂಬು ನೀಡಿದೆ.

ಐಶ್ವರ್ಯ-ಅಭಿಷೇಕ್ ವಿಚ್ಛೇದನ ವದಂತಿ: ಅಮಿತಾಬ್ ಬಚ್ಚನ್ ಟ್ವೀಟ್ ವೈರಲ್
Follow us on

ಬಾಲಿವುಡ್​ನ (Bollywood) ತಾರಾ ದಂಪತಿ ಐಶ್ವರ್ಯಾ ರೈ (Aishwarya Rai) ಮತ್ತು ಅಭಿಷೇಕ್ ಬಚ್ಚನ್ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಇಬ್ಬರೂ ವಿಚ್ಛೇದನ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿ ತುಸು ಜೋರಾಗಿಯೇ ಹರಿದಾಡುತ್ತಿದೆ. ಅಮಿತಾಬ್ ಬಚ್ಚನ್, ಐಶ್ವರ್ಯಾ ರೈ ಅವರನ್ನು ಇನ್​ಸ್ಟಾಗ್ರಾಂನಲ್ಲಿ ಅನ್​ಫಾಲೋ ಮಾಡಿದ್ದಾರೆ ಎಂಬುದು ಈ ಸುದ್ದಿಗೆ ಇನ್ನಷ್ಟು ಪುಷ್ಠಿ ನೀಡಿದೆ. ಇದರ ಬೆನ್ನಲ್ಲೆ ಇದೀಗ ಅಮಿತಾಬ್ ಬಚ್ಚನ್ ಮಾಡಿರುವ ಟ್ವೀಟ್ ಈ ವಿಚ್ಛೇದನ ಸುದ್ದಿಯನ್ನು ಇನ್ನಷ್ಟು ಖಾತ್ರಿಗೊಳಿಸುತ್ತಿದೆ.

‘‘ಎಲ್ಲವನ್ನೂ ಹೇಳಿಯಾಯ್ತು, ಎಲ್ಲವನ್ನೂ ಮಾಡಿಯಾಯ್ತು, ಈಗ ಹೇಳಿದ್ದನ್ನು ಮಾಡಬೇಕಾಗಿದೆ, ಮಾಡಿದ್ದನ್ನು ಹೇಳಬೇಕಾಗಿದೆ’’ ಎಂದು ಟ್ವೀಟ್ ಮಾಡಿದ್ದಾರೆ ಅಮಿತಾಬ್ ಬಚ್ಚನ್, ತಮ್ಮ ಚಿತ್ರವೊಂದನ್ನು ಈ ಸಾಲುಗಳೊಟ್ಟಿಗೆ ಹಂಚಿಕೊಂಡಿದ್ದಾರೆ. ನೆಟ್ಟಿಗರು, ಬಚ್ಚನ್​ರ ಈ ಟ್ವೀಟ್​ ಅನ್ನು ಮಗ-ಸೊಸೆಯ ವಿಚ್ಛೇದನದೊಟ್ಟಿಗೆ ಲಿಂಕ್ ಮಾಡಿ ನೋಡುತ್ತಿದ್ದಾರೆ.

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ 2007ರಲ್ಲಿ ಪ್ರೀತಿಸಿ ಮದುವೆಯಾದರು. ಇಬ್ಬರಿಗೂ ಆದ್ಯಾ ಹೆಸರಿನ ಹೆಣ್ಣು ಮಗಳಿದ್ದಾಳೆ. 16 ವರ್ಷದ ದಾಂಪತ್ಯವನ್ನು ಈ ಜೋಡಿ ಅಂತ್ಯ ಮಾಡುವ ಯೋಚನೆಯಲ್ಲಿದೆ ಎನ್ನಲಾಗುತ್ತಿದೆ. ದಾಂಪತ್ಯದಲ್ಲಿ ವಿರಸ ಮೂಡಲು ಕಾರಣಗಳೇನು ಎಂಬುದು ಇನ್ನೂ ಖಾತ್ರಿಯಾಗಿಲ್ಲ.

ಇದನ್ನೂ ಓದಿ:ಐಶ್ವರ್ಯಾ ರೈನ ಅನ್​ಫಾಲೋ ಮಾಡಿದ ಅಮಿತಾಭ್​; ನಿಜವಾಯ್ತಾ ವಿಚ್ಛೇದನ ವಿಚಾರ?

ಕಳೆದ ಕೆಲ ವಾರಗಳಿಂದಲೂ ಅಭಿಷೇಕ್-ಐಶ್ವರ್ಯಾರ ವಿಚ್ಛೇದನ ಕುರಿತಾದ ಸುದ್ದಿಗಳು ಹರಿದಾಡುತ್ತಿವೆ. ಇವರ ದಾಂಪತ್ಯದ ಕುರಿತು ಸುದ್ದಿಗಳು ಹರಿದಾಡಲು ಆರಂಭಿಸಿದ ಬಳಿಕ ಇತ್ತೀಚೆಗಷ್ಟೆ ಇಡೀ ಬಚ್ಚನ್ ಕುಟುಂಬ ‘ದಿ ಆರ್ಚೀಸ್’ ಸಿನಿಮಾದ ಪ್ರೀಮಿಯರ್ ಶೋನಲ್ಲಿ ಕಾಣಿಸಿಕೊಂಡಿತು. ಶೋಗೆ ಅಭಿಷೇಕ್ ಹಾಗೂ ಐಶ್ವರ್ಯಾ ಒಟ್ಟಿಗೆ ಆಗಮಿಸಿದ್ದರು. ಆ ಮೂಲಕ ವಿಚ್ಛೇದನ ಸುದ್ದಿಗೆ ಬ್ರೇಕ್ ನೀಡಲು ಯತ್ನಿಸಿದರು.

ಅಭಿಷೇಕ್ ಬಚ್ಚನ್ 20 ವರ್ಷಗಳಿಂದಲೂ ಚಿತ್ರರಂಗದಲ್ಲಿದ್ದಾರೆ ಆದರೆ ಸ್ಟಾರ್ ಎನ್ನಿಸಿಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ. ಇನ್ನು ಐಶ್ವರ್ಯಾ ರೈ ಮದುವೆಗೆ ಮುನ್ನ ಟಾಪ್ ನಟಿಯಾಗಿದ್ದರು. ಮದುವೆಯ ಬಳಿಕ ನಟನೆ ಮುಂದುವರೆಸಿದರಾದರೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಇತ್ತೀಚೆಗೆ ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್’ ಸಿನಿಮಾದಲ್ಲಿ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:34 pm, Tue, 12 December 23