ಮೂರನೇ ವಾರದಲ್ಲಿ ಇಳಿಕೆ ಕಂಡ ‘ಅನಿಮಲ್’ ಗಳಿಕೆ; ಇಲ್ಲಿದೆ ಸಂಪೂರ್ಣ ವಿವರ

ಕಳೆದ ವೀಕೆಂಡ್​ನಲ್ಲಿ ಸಿನಿಮಾ ಭಾರತದಲ್ಲಿ ಒಳ್ಳೆಯ ಗಳಿಕೆ ಮಾಡಿತ್ತು. ಸೋಮವಾರ (ಡಿಸೆಂಬರ್ 12) 14.3 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಮಂಗಳವಾರ (ಡಿಸೆಂಬರ್ 13) 12 ಕೋಟಿ ರೂಪಾಯಿ ಗಳಿಕೆ ಆಗಿದೆ.

ಮೂರನೇ ವಾರದಲ್ಲಿ ಇಳಿಕೆ ಕಂಡ ‘ಅನಿಮಲ್’ ಗಳಿಕೆ; ಇಲ್ಲಿದೆ ಸಂಪೂರ್ಣ ವಿವರ
ರಣಬೀರ್, ಅನಿಲ್ ಕಪೂರ್
Follow us
ರಾಜೇಶ್ ದುಗ್ಗುಮನೆ
|

Updated on: Dec 13, 2023 | 10:45 AM

‘ಅನಿಮಲ್’ ಸಿನಿಮಾ (Animal Movie) ರಿಲೀಸ್ ಆದ ಮೊದಲ ಎರಡು ವಾರ ಅಬ್ಬರದ ಗಳಿಕೆ ಮಾಡಿತು. ಈಗ ನಿಧಾನವಾಗಿ ಸಿನಿಮಾದ ಗಳಿಕೆ ಇಳಿಕೆ ಕಾಣುತ್ತಿದೆ. ಹಾಗಂತ ಸಿನಿಮಾ ಕಲೆಕ್ಷನ್ ಒಂದಂಕಿ ತಲುಪಿಲ್ಲ. ವಾರದ ದಿನದಲ್ಲೂ ಎರಡಂಕಿಯಲ್ಲೇ ಮುಂದುವರಿಯುತ್ತಿದೆ. ಈ ವೀಕೆಂಡ್​ನಲ್ಲಿ ಮತ್ತೆ ಚಿತ್ರದ ಗಳಿಕೆ ಹೆಚ್ಚಬಹುದು. ಸಿನಿಮಾ ಭಾರತದಲ್ಲಿ ಒಟ್ಟಾರೆ ಆಗಿ 500 ಕೋಟಿ ರೂಪಾಯಿ ಗಳಿಕೆ ಮಾಡೋದು ಪಕ್ಕಾ ಎನ್ನುತ್ತಿದ್ದಾರೆ ಬಾಕ್ಸ್ ಆಫೀಸ್ ಪಂಡಿತರು. ಸದ್ಯ, ಭಾರತದಲ್ಲಿ 460 ಕೋಟಿ ರೂಪಾಯಿ ಹಾಗೂ ವಿಶ್ವ ಬಾಕ್ಸ್ ಆಫೀಸ್​ನಲ್ಲಿ 752 ಕೋಟಿ ರೂಪಾಯಿ ಆಗಿದೆ.

‘ಅನಿಮಲ್’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇತ್ತು. ಈ ಸಿನಿಮಾದ ಟ್ರೇಲರ್ ಅಬ್ಬರಿಸಿತ್ತು. ‘ಅರ್ಜುನ್ ರೆಡ್ಡಿ’ ಹಾಗೂ ‘ಕಬೀರ್ ಸಿಂಗ್’ ಅಂಥ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಸಂದೀಪ್ ರೆಡ್ಡಿ ವಂಗ ಅವರು ‘ಅನಿಮಲ್’ ನಿರ್ದೇಶನ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಸಿನಿಮಾ ಬಗ್ಗೆ ಹೆಚ್ಚಿನ ನಿರೀಕ್ಷೆಇತ್ತು. ಈ ನಿರೀಕ್ಷೆಯನ್ನು ಸಿನಿಮಾ ಹುಸಿ ಮಾಡಿಲ್ಲ. ಈ ಚಿತ್ರ ಅಬ್ಬರದ ಗಳಿಕೆ ಮಾಡುತ್ತಿದೆ. ಆದರೆ, ಈ ವಾರ ಕಲೆಕ್ಷನ್ ಕೊಂಚ ತಗ್ಗಿದೆ.

ಕಳೆದ ವೀಕೆಂಡ್​ನಲ್ಲಿ ಸಿನಿಮಾ ಭಾರತದಲ್ಲಿ ಒಳ್ಳೆಯ ಗಳಿಕೆ ಮಾಡಿತ್ತು. ಸೋಮವಾರ (ಡಿಸೆಂಬರ್ 12) 14.3 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಮಂಗಳವಾರ (ಡಿಸೆಂಬರ್ 13) 12 ಕೋಟಿ ರೂಪಾಯಿ ಗಳಿಕೆ ಆಗಿದೆ. ಇದು ತೀರಾ ಕಳಪೆ ಕಲೆಕ್ಷನ್ ಅಲ್ಲದೇ ಹೋದರೂ, ಕಳೆದ ವಾರಗಳಿಗೆ ಹೋಲಿಕೆ ಮಾಡಿದರೆ ಇದು ಕೊಂಚ ಕಡಿಮೆಯೇ.

ಇದನ್ನೂ ಓದಿ: ‘ಅನಿಮಲ್’ ಸಿನಿಮಾಕ್ಕೆ ನಾಯಕಿ ಆಗಬೇಕಿದ್ದಿದ್ದು ರಶ್ಮಿಕಾ ಅಲ್ಲ, ಇನ್ಯಾರು?

‘ಅನಿಮಲ್’ ಸಿನಿಮಾದಲ್ಲಿ ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ, ಬಾಬಿ ಡಿಯೋಲ್, ಅನಿಲ್ ಕಪೂರ್ ಮೊದಲಾದವರು ನಟಿಸಿದ್ದಾರೆ. ಸಿನಿಮಾ ಬಗ್ಗೆ ಒಂದು ವರ್ಗದ ಜನರು ಸಾಕಷ್ಟು ಟೀಕೆ ಮಾಡುತ್ತಿದ್ದಾರೆ. ಆದರೆ, ಈ ಟೀಕೆಯನ್ನು ಮೀರಿ ‘ಅನಿಮಲ್’ ಸಿನಿಮಾ ಕಲೆಕ್ಷನ್ ಮಾಡುತ್ತಿದೆ. ಈ ಚಿತ್ರದಿಂದ ರಣಬೀರ್ ಕಪೂರ್​, ರಶ್ಮಿಕಾ ಮೊದಲಾದವರು ದೊಡ್ಡ ಗೆಲುವು ಕಂಡಿದ್ದಾರೆ. ಇವರ ಬೇಡಿಕೆ ಕೂಡ ಹೆಚ್ಚಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ