ಬಚ್ಚನ್​, ಖಾನ್​, ಕಪೂರ್, ಡಿಯೋಲ್​; ಬಾಲಿವುಡ್​ನಲ್ಲಿವೆ ಪವರ್​ಫುಲ್ ಫ್ಯಾಮಿಲಿಗಳು  

ಬಚ್ಚನ್ ಕುಟುಂಬ, ಖಾನ್ ಕುಟುಂಬ, ಡಿಯೋಲ್ ಕುಟುಂಬ, ಕಪೂರ್ ಕುಟುಂಬ ಸೇರಿ ಅನೇಕ ಕುಟುಂಬಗಳು ಹಿಂದಿ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿವೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಬಚ್ಚನ್​, ಖಾನ್​, ಕಪೂರ್, ಡಿಯೋಲ್​; ಬಾಲಿವುಡ್​ನಲ್ಲಿವೆ ಪವರ್​ಫುಲ್ ಫ್ಯಾಮಿಲಿಗಳು   
ಬಾಲಿವುಡ್​ನಲ್ಲಿವೆ ಪವರ್​ಫುಲ್ ಫ್ಯಾಮಿಲಿಗಳು  
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Dec 08, 2023 | 8:53 AM

ಬಾಲಿವುಡ್​​ನಲ್ಲಿ  ನೆಪೋಟಿಸಂ ಸ್ವಲ್ಪ ಜೋರಾಗಿಯೇ ಇದೆ. ಹಲವರು, ಮಕ್ಕಳು, ಮೊಮ್ಮೊಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಹೀಗಾಗಿ ಒಂದೇ ಕುಟುಂಬದ ಹಲವರು ಚಿತ್ರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಬಚ್ಚನ್ ಕುಟುಂಬ, ಖಾನ್ ಕುಟುಂಬ, ಡಿಯೋಲ್ ಕುಟುಂಬ, ಕಪೂರ್ ಕುಟುಂಬ (Kapoor Family) ಸೇರಿ ಅನೇಕ ಕುಟುಂಬಗಳು ಹಿಂದಿ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿವೆ. ಸ್ಟಾರ್​ ಕಿಡಗಳಿಗೆ ಸುಲಭದಲ್ಲಿ ಅವಕಾಶ ಕೂಡ ಸಿಗುತ್ತಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಕುಟುಂಬ

ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ತಾಯಿ ಶರ್ಮಿಳಾ ಟಾಗೋರ್ ಅವರು ಹಿರಿಯ ನಟಿ. ಅವರು ನಟನೆಯ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಸೈಫ್​ ಅಲಿ ಖಾನ್ ಅವರು ಮೊದಲು ಅಮೃತಾ ಸಿಂಗ್ ಜೊತೆ ಮದುವೆ ಆಗಿದ್ದರು. ಅವರಿಗೆ ಸಾರಾ ಅಲಿ ಖಾನ್ ಹಾಗೂ ಇಬ್ರಾಹಿಂ ಅಲಿ ಖಾನ್ ಹೆಸರಿನ ಮಕ್ಕಳಿದ್ದಾರೆ. ಸೈಫ್ ಅವರು ನಂತರ ಅಮೃತಾ ಅವರಿಂದ ವಿಚ್ಛೇದನ ಪಡೆದು ಕರೀನಾ ಕಪೂರ್ ಜೊತೆ ಮದುವೆ ಆದರು. ಸಾರಾ, ಕರೀನಾ ಹಗೂ ಸೈಫ್ ಅಲಿ ಖಾನ್ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಕರೀನಾಗೆ ತೈಮೂರ್ ಹಾಗೂ ಜೇ ಹೆಸರಿನ ಮಕ್ಕಳಿದ್ದಾರೆ. ಸೈಫ್​ಗೆ ಸೋಹಾ ಅಲಿ ಖಾನ್ ಹೆಸರಿನ ಸಹೋದರಿ ಇದ್ದಾರೆ.

ಶಾರುಖ್ ಖಾನ್ ಕುಟುಂಬ

ಶಾರುಖ್ ಖಾನ್ ಅವರು ಗೌರಿ ಖಾನ್ ಅವರನ್ನು ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಈ ದಂಪತಿಗೆ ಆರ್ಯನ್ ಖಾನ್, ಸುಹಾನಾ ಖಾನ್ ಹಾಗೂ ಅಬ್ರಾಮ್ ಹೆಸರಿನ ಮಕ್ಕಳಿದ್ದಾರೆ. ಆರ್ಯನ್ ಅವರು ನಿರ್ದೇಶಕರಾಗಿ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ. ಸುಹಾನಾ ಖಾನ್ ಅವರು ‘ದಿ ಆರ್ಚೀಸ್’ ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದ್ದಾರೆ. ಈ ಸಿನಿಮಾ ಡಿಸೆಂಬರ್ 7ರಂದು ನೆಟ್​ಫ್ಲಿಕ್ಸ್​​ ಒಟಿಟಿಯಲ್ಲಿ ರಿಲೀಸ್ ಆಗಲಿದೆ.

ಸಲ್ಮಾನ್ ಖಾನ್

ನಟ ಸಲ್ಮಾನ್ ಖಾನ್ ಅವರು ದೊಡ್ಡ ಸೂಪರ್ ಸ್ಟಾರ್​. ಅವರ ತಂದೆ ಸಲೀಮ್ ಖಾನ್ ಅವರು ನಟ, ನಿರ್ಮಾಪಕ. ಸಲ್ಮಾನ್ ಅವರ ಸಹೋದರ ಅರ್ಬಾಜ್ ಖಾನ್ ಹಾಗೂ ಸೋಹೈಲ್ ಖಾನ್ ಅವರು ಹೀರೋಗಳು. ಅರ್ಬಾಜ್ ಅವರ ಮಾಜಿ ಪತ್ನಿ ಮಲೈಕಾ ಅರೋರಾ ನಟಿ ಹಾಗೂ ಮಾಡೆಲ್.

ಅನಿಲ್ ಕಪೂರ್

ಅನಿಲ್ ಕಪೂರ್ ಅವರ ಅಣ್ಣ ಬೋನಿ ಕಪೂರ್ ಅವರು ನಿರ್ಮಾಪಕ. ಅವರ ಪತ್ನಿ ಶ್ರೀದೇವಿ ನಟಿ ಆಗಿದ್ದರು. ಅವರ ಮಗಳು ಜಾನ್ವಿ ಕಪೂರ್ ನಟಿ. ಅನಿಲ್​ ಕಪೂರ್ ಮತ್ತೊಂದು ಸಹೋದರ ಸಂಜಯ್ ಕಪೂರ್ ಕೂಡ ನಟ. ಈ ಕುಟುಂಬದವರೇ ಆದ ಜಾನ್ವಿ, ಅರ್ಜುನ್, ಖುಷಿ, ಸೋನಮ್, ಹರ್ಷವರ್ಧನ್ ಸಿನಿಮಾ ರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ.

ಧರ್ಮೇಂದ್ರ ಕುಟುಂಬ

ಧರ್ಮೇಂದ್ರ ಅವರು ಬಾಲಿವುಡ್​ನ ಹಿರಿಯ ನಟ. ಅವರು ಮೋಸ್ಟ್ ಹ್ಯಾಂಡ್ಸಮ್ ಹೀರೋ ಎನ್ನುವ ಖ್ಯಾತಿ ಪಡೆದಿದ್ದರು. ಅವರ ಎರಡನೇ ಪತ್ನಿ ಹೇಮಾ ಮಾಲಿನಿ ಅವರು ಬಾಲಿವುಡ್​ನ ಡ್ರೀಮ್ ಗರ್ಲ್​ ಎಂದೇ ಫೇಮಸ್. ಧರ್ಮೇಂದ್ರ ಮಕ್ಕಳಾದ ಸನ್ನಿ, ಬಾಬಿ ಹಾಗೂ ಇಶಾ ಅವರು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಇವರ ಸಂಬಂಧಿ ಅಭಯ್ ಕೂಡ ನಟ. ಸನ್ನಿ ಮಗ ಕರಣ್ ಹಾಗೂ ರಾಜ್ವೀರ್ ಅವರು ಈಗ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ.

ಕಪೂರ್ ಕ್ಲಾನ್

ಕಪೂರ್ ಕುಟುಂಬ ಮೊದಲಿನಿಂದಲೂ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿ ಇದೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ಇವರ ಕುಟುಂಬದವರು ನೀಡಿದ್ದಾರೆ. ರಾಜ್​ ಕಪೂರ್ ಸೂಪರ್ ಸ್ಟಾರ್ ಆಗಿದ್ದರು. ರಿಷಿ ಕಪೂರ್, ರಬಿತಾ, ನೀತು ಕರೀಷ್ಮಾ, ರಣಬೀರ್ ಕಪೂರ್ ಸೇರಿ ಅನೇಕರು ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ.

ಇದನ್ನೂ ಓದಿ:ತಗ್ಗುತ್ತಿದೆ ‘ಬ್ರಹ್ಮಾಸ್ತ್ರ’ ಸಿನಿಮಾ ಕಲೆಕ್ಷನ್; ರಣಬೀರ್​-ಆಲಿಯಾ ಚಿತ್ರ ಬಾಚಿದ ಹಣ ಎಷ್ಟು?

ಅಮಿತಾ ಭಚ್ಚನ್ ಕುಟುಂಬ

ಅಮಿತಾಭ್ ಬಚ್ಚನ್ ಕುಟುಂಬ ಕೂಡ ದೊಡ್ಡದಾಗಿದೆ. ಅವರು ನಟಿ ಜಯಾ ಬಚ್ಚನ್ ಅವರನ್ನು ಮದುವೆ ಆದರು. ಅವರ ಮಗ ಅಭಿಷೇಕ್ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅಮಿತಾಭ್ ಸೊಸೆ ಐಶ್ವರ್ಯಾ ರೈ ಬಚ್ಚನ್ ಅವರ ಬಗ್ಗೆ ಅಂತೂ ಮತ್ತೆ ಹೊಸದಾಗಿ ಹೇಳಬೇಕಿಲ್ಲ. ಅಮಿತಾಭ್ ಮಗಳ ಮಗ ಅಗಸ್ತ್ಯ ಈಗತಾನೇ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್