ನಟಿ ಅನನ್ಯಾ ಪಾಂಡೆ (Ananya Panday) ಅವರು ಸಾಮಾನ್ಯವಾಗಿ ಇಂಥ ವಿಚಿತ್ರ ಬಟ್ಟೆ ಧರಿಸುವವರಲ್ಲ. ಆದರೆ ಅಪರೂಪಕ್ಕೆ ಎಂಬಂತೆ ಅವರು ಈ ರೀತಿ ಕಾಣಿಸಿಕೊಂಡಿದ್ದಾರೆ. ಏರೋಪ್ಲೇನ್ ಚಿಟ್ಟೆಯಂತೆ ಕಾಣುವ ಬಟ್ಟೆಯನ್ನು ಅನನ್ಯಾ ಪಾಂಡೆ ಧರಿಸಿದ್ದಾರೆ. ಅವರ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಅನನ್ಯಾ ಪಾಂಡೆ ಅವರು ಹೀಗೆ ವಿಚಿತ್ರವಾಗಿರುವ ಬಟ್ಟೆ ಧರಿಸಲು ಕಾರಣ ಏನು? ಕೀಟಗಳ ಬಗ್ಗೆ ಇರುವ ಕಾಳಜಿ! ಪ್ಯಾರಿಸ್ನಲ್ಲಿ ನಡೆದ ಫ್ಯಾಷನ್ ಶೋನಲ್ಲಿ ಅನನ್ಯಾ ಪಾಂಡೆ ಅವರು ಈ ವಿಶೇಷ ವಿನ್ಯಾಸದ ಕಾಸ್ಟ್ಯೂಮ್ ತೊಟ್ಟು ರ‍್ಯಾಂಪ್ ವಾಕ್ (Ramp Walk) ಮಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ..
ಅನನ್ಯಾ ಪಾಂಡೆ ಅವರು ಧರಿಸಿದ ಈ ಬಟ್ಟೆಯಲ್ಲಿ ಫ್ಯಾಷನ್ ಡಿಸೈನರ್ ರಾಹುಲ್ ಮಿಶ್ರಾ ವಿನ್ಯಾಸ ಮಾಡಿದ್ದಾರೆ. ‘ನಮ್ಮೊಂದಿಗೆ ಪರಿಸರದಲ್ಲಿ ವಾಸಿಸುವ ಹಲವು ಜಾತಿಯ ಕೀಟಗಳು ಮತ್ತು ಸರೀಸೃಪಗಳೊಂದಿಗೆ ಜೀವನವನ್ನು ಹಂಚಿಕೊಳ್ಳುವ ಸೂಕ್ಷ್ಮ ವ್ಯತ್ಯಾಸಗಳತ್ತ ಗಮನ ಸೆಳೆಯುವ ರಾಹುಲ್ ಮಿಶ್ರಾ ಅವರ ‘ಸೂಪರ್ ಹೀರೋಸ್’ ಸಂಗ್ರಹದ ಹಿಂದಿನ ಕಲ್ಪನೆಯು ಇಷ್ಟವಾಯಿತು. ಗ್ರಹದಲ್ಲಿ ನಮ್ಮ ಜೀವನವನ್ನು ನಿರ್ಮಿಸುವ ಅನ್ವೇಷಣೆಯಲ್ಲಿ, ನಾವು ಅವರ ಆವಾಸಸ್ಥಾನಗಳನ್ನು ಸ್ವಾಧೀನ ಮಾಡಿಸಿಕೊಂಡಿರಬಹುದು ಮತ್ತು ಅವುಗಳನ್ನು ಅಳಿವಿನಂಚಿಗೆ ತಳ್ಳಿರಬಹುದು’ ಎಂದು ಅನನ್ಯಾ ಪಾಂಡೆ ಅವರು ಪೋಸ್ಟ್ ಮಾಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಅನನ್ಯಾ ಪಾಂಡೆ ಹಂಚಿಕೊಂಡಿರುವ ಫೋಟೋಗಳು ವೈರಲ್ ಆಗಿವೆ. ಮೂರೂವರೆ ಲಕ್ಷಕ್ಕೂ ಅಧಿಕ ಜನರ ಲೈಕ್ ಮಾಡಿದ್ದಾರೆ. ಎರಡೂವರೆ ಸಾವಿರಕ್ಕೂ ಹೆಚ್ಚು ಕಮೆಂಟ್ಗಳ ಮೂಲಕ ಮೆಚ್ಚುಗೆ ಸೂಚಿಸಲಾಗಿದೆ. ಈ ರೀತಿಯ ಪ್ರಯೋಗಗಳ ಮೂಲಕ ಪ್ರಾಣಿ, ಪಕ್ಷಿ, ಕೀಟಗಳ ಬಗ್ಗೆ ಕಾಳಜಿ ಮೂಡಿಸುವ ಪ್ರಯತ್ನಕ್ಕೆ ಅನೇಕರು ಭೇಷ್ ಎಂದಿದ್ದಾರೆ.
ಇದನ್ನೂ ಓದಿ: ಬಾಯ್ಫ್ರೆಂಡ್ ಜೊತೆ ಲಂಡನ್ ಸುತ್ತಾಡಿದ ಅನನ್ಯಾ ಪಾಂಡೆ: ಯಾರು ಆ ಬಾಯ್ಫ್ರೆಂಡ್?
ಬಾಲಿವುಡ್ನಲ್ಲಿ ಅನನ್ಯಾ ಪಾಂಡೆ ಅವರು ನೆಲೆ ಕಂಡುಕೊಳ್ಳುತ್ತಿದ್ದಾರೆ. ಅಂದುಕೊಂಡ ಮಟ್ಟದಲ್ಲಿ ಅವರಿಗೆ ಇನ್ನೂ ಗೆಲವು ಸಿಕ್ಕಿಲ್ಲ. 2022ರಲ್ಲಿ ಬಿಡುಗಡೆಯಾದ ‘ಲೈಗರ್’ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಜೊತೆ ಅನನ್ಯಾ ಪಾಂಡೆ ನಟಿಸಿದ್ದರು. ಆ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ ಆ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸೋಲು ಕಂಡಿತು. ಇನ್ನು, ಹಾಗಂತ ಅನನ್ಯಾ ಅವರಿಗೆ ಸಿಗುವ ಅವಕಾಶಗಳು ಕಡಿಮೆ ಆಗಿಲ್ಲ. ನೆಪೋಟಿಸಂ ಆರೋಪ ಇದ್ದರೂ ಕೂಡ ಅವರಿಗೆ ಹೊಸ ಹೊಸ ಆಫರ್ಗಳು ಬರುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ