ಅನೇಕ ಸಿನಿಮಾಗಳಲ್ಲಿ ಡಬಲ್ ಮೀನಿಂಗ್ ಹಾಡುಗಳನ್ನು ಬರೆಯಲಾಗುತ್ತದೆ. ಇದಕ್ಕೆ ಕೆಲವೊಮ್ಮೆ ಕಲಾವಿದರು ತಕರಾರು ತೆಗೆದಿದ್ದೂ ಇದೆ. ಅದೇ ರೀತಿ ಅನಿಲ್ ಕಪೂರ್ ಅವರ ಸಿನಿಮಾ ಒಂದರಲ್ಲಿ ಡಬಲ್ ಮೀನಿಂಗ್ ಹಾಡು ಇತ್ತು. ಈ ಬಗ್ಗೆ ಅವರಿಗೆ ಈಗಲೂ ಬೇಸರ ಇದೆ. ಅತ್ಯಂತ ಸಿಟ್ಟು ತರಿಸಿದ ಹಾಡು ಇದು ಎಂದು ಅವರು ಪರಿಗಣಿಸಿದ್ದಾರೆ. ಈ ಮೊದಲ ‘ಕಾಫಿ ವಿತ್ ಕರಣ್’ ಶೋದಲ್ಲಿ ಹೇಳಿಕೊಂಡಿದ್ದಾರೆ.
‘ಖಡಾ ಹೇ..ಖಡಾ ಹೇ’ (ನಿಂತಿದೆ.. ನಿಂತಿದೆ) ಅನ್ನೋ ಹಾಡು 1994ರ ‘ಅಂದಾಜ್’ ಸಿನಿಮಾದ್ದು. ಈ ಸಿನಿಮಾದಲ್ಲಿ ಅನಿಲ್ ಕಪೂರ್, ಜೂಹಿ ಚಾವ್ಲಾ, ಕರೀಶ್ಮಾ ಕಪೂರ್ ಮೊದಲಾದವರು ನಟಿಸಿದ್ದರು. ಈ ಹಾಡಿನ ಬಗ್ಗೆ ಅನಿಲ್ ಕಪೂರ್ ಅವರಿಗೆ ಈಗಲೂ ಬೇಸರ ಇದೆ. ‘ಅತ್ಯಂತ ಇರಿಟೇಟ್ ಸಾಂಗ್ ಇದು’ ಎಂದು ಅನಿಲ್ ಕಪೂರ್ ಅವರು ಕರೆದಿದ್ದಾರೆ.
‘ಅತಿ ಹೆಚ್ಚು ಇರಿಟೇಷನ್ ಸಾಂಗ್ ಯಾವುದು’ ಎಂದು ಕರಣ್ ಜೋಹರ್ ಪ್ರಶ್ನೆ ಮಾಡಿದ್ದಾರೆ. ‘ನನ್ನದೇ ಸಿನಿಮಾದ ಹಾಡು. ಖಡಾ ಹೇ ಸಾಂಗ್. ಅತ್ಯಂತ ಕೆಟ್ಟ ಸಾಂಗ್ ಅದು. ನಾನು ಹಾಗೂ ಜೂಹಿ ಛಾವ್ಲಾ ಇಬ್ಬರೂ ನಿರ್ಮಾಪಕರ ಜೊತೆ ಜಗಳ ಆಡಿದೆವು. ಜೂಹಿ ಅತ್ತರು. ಸಿನಿಮಾದ ಶೂಟಿಂಗ್ ಕೂಡ ಬಹುತೇಕ ನಿಂತಿತ್ತು’ ಎಂದಿದ್ದರು ಅನಿಲ್ ಕಪೂರ್.
ಇದನ್ನೂ ಓದಿ:ಮೋದಿ ಪ್ರಮಾಣವಚನದಲ್ಲಿ ಭಾಗಿಯಾಗಲಿದ್ದಾರೆ ರಜನೀಕಾಂತ್, ಅನಿಲ್ ಕಪೂರ್
ಈ ಸಿನಿಮಾ ಅಂದಿನ ಕಾಲಕ್ಕೆ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಅನೇಕರು ಈ ಹಾಡಿಗೆ ವಿರೋಧ ವ್ಯಕ್ತಪಡಿಸಿದ್ದರು. ಆದಾಗ್ಯೂ ಈ ಹಾಡು ರಿಲೀಸ್ ಆಯಿತು. ಅನಿವಾರ್ಯವಾಗಿ ಅನಿಲ್ ಕಪೂರ್ ಹಾಗೂ ಜೂಹಿ ಒಟ್ಟಾಗಿ ಡ್ಯಾನ್ಸ್ ಮಾಡಿದರು. ಈ ಹಾಡು ಈಗಲೂ ಇನ್ಸ್ಟಾಗ್ರಾಮ್ನಲ್ಲಿ ಆಗಾಗ ವೈರಲ್ ಆಗುತ್ತಲೇ ಇರುತ್ತದೆ. ಈ ಹಾಡು ರಿಲೀಸ್ ಆಗಿ ಬರೋಬ್ಬರಿ 30 ವರ್ಷಗಳು ಕಳೆದಿವೆ.
ಅನಿಲ್ ಕಪೂರ್ ಅವರು ಈಗಲೂ ಕೆಲವು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಇತ್ತೀಚೆಗೆ ಅವರು ‘ಬಿಗ್ ಬಾಸ್ ಹಿಂದಿ ಸೀಸನ್ 3’ ಅನ್ನು ನಡೆಸಿಕೊಟ್ಟಿದ್ದರು. ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರ ಮಾಡಿ ಅವರು ಗಮನ ಸೆಳೆದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ