AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Anupam Kher: ಬೋಳು ತಲೆಯವರಿಗೆ ವಿಡಿಯೋ ಅರ್ಪಿಸಿದ ಅನುಪಮ್​ ಖೇರ್​; ಕೂದಲು ಇರುವವರಿಗೆ ಸವಾಲು

Anupam Kher Viral Video: ಅನುಪಮ್​ ಖೇರ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಆಗಾಗ ಅವರು ಹೊಸ ಪೋಸ್ಟ್​ ಹಂಚಿಕೊಳ್ಳುತ್ತಾರೆ. ಅವರ ಈ ವಿಡಿಯೋ ಸಖತ್​ ವೈರಲ್​ ಆಗಿದೆ.

Anupam Kher: ಬೋಳು ತಲೆಯವರಿಗೆ ವಿಡಿಯೋ ಅರ್ಪಿಸಿದ ಅನುಪಮ್​ ಖೇರ್​; ಕೂದಲು ಇರುವವರಿಗೆ ಸವಾಲು
ಅನುಪಮ್​ ಖೇರ್​
ಮದನ್​ ಕುಮಾರ್​
|

Updated on: Jul 17, 2023 | 5:55 PM

Share

ಖ್ಯಾತ ನಟ ಅನುಪಮ್​ ಖೇರ್ (Anupam Kher)​ ಅವರು ಈವರೆಗೂ 500ಕ್ಕೂ ಅಧಿಕ ಸಿನಿಮಾಗಳನ್ನು ಮಾಡಿದ್ದಾರೆ. ಕೆಲವೇ ದಿನಗಳ ಹಿಂದೆ ಅವರು 538ನೇ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಈಗ ಅವರು ಹೊಸ ಅವತಾರದಲ್ಲಿ ಜನರ ಎದುರು ಬಂದಿದ್ದಾರೆ. ಬೋಳು ತಲೆಯಿಂದಲೇ ಫೇಮಸ್​ ಆದವರು ಅನುಪಮ್​ ಖೇರ್​. ತಲೆಯಲ್ಲಿ ಕೂದಲು ಇರುವ ಎಲ್ಲರಿಗೂ ಅವರು ಸವಾಲು ಹಾಕಿದ್ದಾರೆ. ಬೋಳು ತಲೆಯ (Bald Head) ಮೇಲೆ ವಿಚಿತ್ರ ವಿನ್ಯಾಸದ ಟ್ಯಾಟೂ ಹಾಕಿಸಿಕೊಂಡು ಅವರು ಪೋಸ್​ ನೀಡಿದ್ದಾರೆ. ತಲೆಯಲ್ಲಿ ಕೂದಲು ಇರುವವರು ಇದನ್ನು ಮಾಡಲು ಸಾಧ್ಯವೇ ಎಂದು ಅನುಪಮ್​ ಖೇರ್​ ಪ್ರಶ್ನಿಸಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋ (Anupam Kher Viral Video) ವೈರಲ್​ ಆಗಿದೆ. ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಅನುಪಮ್​ ಖೇರ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಆಗಾಗ ಅವರು ಹೊಸ ಹೊಸ ಪೋಸ್ಟ್​ ಹಂಚಿಕೊಳ್ಳುತ್ತಾ ಇರುತ್ತಾರೆ. ಈಗ ಅವರು ಪೋಸ್ಟ್​ ಮಾಡಿರುವ ಈ ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ. ಬೋಳು ತಲೆಯ ಜನರಿಗಾಗಿ ಅವರು ಈ ವಿಡಿಯೋವನ್ನು ಡೆಡಿಕೇಟ್​ ಮಾಡಿದ್ದಾರೆ. ಸಾವಿರಾರು ಮಂದಿ ಇದಕ್ಕೆ ಲೈಕ್​ ಮಾಡಿದ್ದು, ಹಲವಾರು ಕಮೆಂಟ್​ಗಳು ಬಂದಿವೆ. ಲಕ್ಷಾಂತರ ಬಾರಿ ಈ ವಿಡಿಯೋ ವೀಕ್ಷಣೆ ಕಂಡಿದೆ.

View this post on Instagram

A post shared by Anupam Kher (@anupampkher)

‘ಜಗತ್ತಿನಲ್ಲಿ ಇರುವ ಬೋಳು ತಲೆಯವರಿಗಾಗಿ ಈ ಪೋಸ್ಟ್​ ಅರ್ಪಣೆ. ತಾವು ಏನು ಬೇಕಾದರೂ ಮಾಡಬಹುದು ಅಂತ ಕೂದಲು ಇದ್ದವರು ಜಂಬಪಡುತ್ತಾರೆ. ಆದರೆ ಅವರು ಇದನ್ನು ಮಾಡಲು ಸಾಧ್ಯವೇ? ಖಂಡಿತಾ ಇಲ್ಲ’ ಎಂದು ಅನುಪಮ್​ ಖೇರ್ ಅವರು ಬರೆದುಕೊಂಡಿದ್ದಾರೆ. ಬಹಳ ವರ್ಷಗಳಿಂದ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ತಲೆಯಲ್ಲಿ ಕೂದಲು ಇಲ್ಲದ ವ್ಯಕ್ತಿಯೊಬ್ಬ ನಟ ಆಗುವುದು ಕಷ್ಟ ಇದ್ದಂತಹ ದಿನಗಳಲ್ಲಿ ಅನುಪಮ್​ ಖೇರ್​ ಅವರು ತಮ್ಮ ಬೋಳುತಲೆಯನ್ನೇ ಒಂದು ಐಡೆಂಟಿಟಿ ಆಗಿಸಿಕೊಂಡು ಹಲವು ಪಾತ್ರಗಳನ್ನು ಮಾಡಿದ್ದರು.

ಇದನ್ನೂ ಓದಿ: Vijay 69: ಅನುಪಮ್​ ಖೇರ್​ ಹೊಸ ಚಿತ್ರಕ್ಕೆ ‘ವಿಜಯ್​ 69’ ಶೀರ್ಷಿಕೆ; ಇಂಥ ಟೈಟಲ್​ ಇಟ್ಟಿದ್ದಕ್ಕೆ ಇದೆ ಒಂದು ಕಾರಣ

ವಿವೇಕ್​ ಅಗ್ನಿಹೋತ್ರಿ ನಿರ್ದೇಶನ ಮಾಡಿದ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾದಲ್ಲಿ ಅನುಪಮ್​ ಖೇರ್​ ಅವರು ಒಂದು ಪ್ರಮುಖ ಪಾತ್ರ ಮಾಡಿದ್ದರು. ಆ ಸಿನಿಮಾದಿಂದ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಿದೆ. ಈಗ ಅವರಿಗೆ ಹೊಸ ಹೊಸ ಅವಕಾಶಗಳು ಹರಿದುಬರುತ್ತಿವೆ. 538ನೇ ಸಿನಿಮಾದಲ್ಲಿ ಅವರು ರವೀಂದ್ರನಾಥ್​ ಟ್ಯಾಗೋರ್​ ಪಾತ್ರವನ್ನು ಮಾಡಲಿದ್ದಾರೆ. ಆ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ