ಬಾಲಿವುಡ್ ಸೆಲೆಬ್ರಿಟಿಗಳಾದ ಮಲೈಕಾ ಅರೋರಾ (Malaika Arora) ಮತ್ತು ಅರ್ಜುನ್ ಕಪೂರ್ ಅವರು ಲಿವ್-ಇನ್ ರಿಲೇಷನ್ಶಿಪ್ನಲ್ಲಿ ಇದ್ದಾರೆ. ಇಬ್ಬರ ನಡುವೆ ಅನೇಕ ಸುದ್ದಿಗಳು ಹುಟ್ಟಿಕೊಳ್ಳುತ್ತವೆ. ಆದರೆ ಎಲ್ಲದಕ್ಕೂ ಅವರು ಪ್ರತಿಕ್ರಿಯೆ ನೀಡುವುದಿಲ್ಲ. ಕೆಲವೊಮ್ಮೆ ತೀರಾ ಕೆಳಮಟ್ಟದ ಗಾಸಿಪ್ಗಳು (Gossip) ಹರಡಿದಾಗ ಅದನ್ನು ತಳ್ಳಿಹಾಕುವುದು ಅನಿವಾರ್ಯ ಆಗುತ್ತದೆ. ಕಳೆದ ವರ್ಷ ಮಲೈಕಾ ಅರೋರಾ ಅವರು ಪ್ರೆಗ್ನೆಂಟ್ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ಅದನ್ನು ನೋಡಿ ಅರ್ಜುನ್ ಕಪೂರ್ ಗರಂ ಆಗಿದ್ದರು. ಈಗ ಬಾಲಿವುಡ್ ಬಬಲ್ಗೆ ನೀಡಿದ ಸಂದರ್ಶನದಲ್ಲಿ ಅವರು ಮತ್ತೊಮ್ಮೆ ಆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ (Arjun Kapoor) ನಡುವೆ ವಯಸ್ಸಿನ ಅಂತರ ದೊಡ್ಡದಿದೆ. ಹಾಗಿದ್ದರೂ ಕೂಡ ಇಬ್ಬರ ನಡುವೆ ಪ್ರೀತಿ ಚಿಗುರಿದ್ದು ಅಚ್ಚರಿ.
‘ನೆಗೆಟಿವಿ ಬಗ್ಗೆ ಜನರು ಬೇಗ ಆಕರ್ಷಿತರಾಗುತ್ತಾರೆ. ನಾವು ಕಲಾವಿದರು. ನಮ್ಮ ಪರ್ಸನಲ್ ಲೈಫ್ ಯಾವಾಗಲೂ ಗೌಪ್ಯವಾಗಿ ಇರುವುದಿಲ್ಲ. ಇರುವ ಸ್ವಲ್ಪ ಪ್ರಮಾಣದ ಪ್ರೈವೆಸಿಯನ್ನು ನೀವು ಗೌರವಿಸಬೇಕು. ಜನರನ್ನು ತಲುಪಲು ನಮಗೆ ಪತ್ರಕರ್ತರು ಬೇಕು. ಆದರೆ ನಮ್ಮ ಬಗ್ಗೆ ಮುಖ್ಯವಾದ ಯಾವುದೇ ಸುದ್ದಿ ಬರೆಯುವ ಮುನ್ನ ಅದು ನಿಜವೋ ಅಲ್ಲವೋ ಎಂದು ಒಮ್ಮೆ ನಮ್ಮ ಬಳಿ ಖಚಿತಪಡಿಸಿಕೊಳ್ಳಿ’ ಎಂದು ಅರ್ಜುನ್ ಕಪೂರ್ ಹೇಳಿದ್ದಾರೆ. ಅನೇಕ ಸಂದರ್ಭದಲ್ಲಿ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಮದುವೆ ವಿಚಾರದಲ್ಲಿ ಈ ಜೋಡಿ ಯಾವುದೇ ನಿರ್ಧಾರ ತೆಗೆದುಕೊಂಡಂತಿಲ್ಲ. ಇಬ್ಬರು ನಡುವೆ ವಯಸ್ಸಿನ ಅಂತರ ಇದೆ. ಮಲೈಕಾಗಿಂತ ಅರ್ಜುನ್ ಕಪೂರ್ ಅವರು 12 ವರ್ಷ ಚಿಕ್ಕವರು.
ಮದುವೆ ಆಗದೇ ಪ್ರೆಗ್ನೆಂಟ್ ಆದ ಇಲಿಯಾನಾ ಡಿಕ್ರೂಜ್
ನಟಿ, ಡ್ಯಾನ್ಸರ್ ಮಲೈಕಾ ಅರೋರಾ ಅವರು ಸಾಕಷ್ಟು ಜನಪ್ರಿಯತೆ ಹೊಂದಿದ್ದಾರೆ. ಸಿನಿಮಾಗಳಿಗಿಂತಲೂ ಅವರು ಖಾಸಗಿ ಜೀವನದ ಕಾರಣಕ್ಕೆ ಸುದ್ದಿ ಆಗಿದ್ದೇ ಹೆಚ್ಚು. 49ರ ಪ್ರಾಯದ ಮಲೈಕಾ ಅರೋರಾ ಅವರಿಗೆ ಫಿಟ್ನೆಸ್ ಬಗ್ಗೆ ಎಲ್ಲಿಲ್ಲದ ಕಾಳಜಿ. ಹಲವು ವರ್ಷಗಳ ಹಿಂದೆಯೇ ಅವರು ಪತಿ ಅರ್ಬಾಜ್ ಖಾನ್ಗೆ ವಿಚ್ಛೇದನ ನೀಡಿದರು. ಈ ಜೋಡಿಯ ಮಗನ ಹೆಸರು ಅರ್ಹಾನ್ ಖಾನ್. 20ರ ಹರೆಯದ ಅರ್ಹಾನ್ ಈಗ ಅಮೆರಿಕದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.
ಪ್ರೆಗ್ನೆಂಟ್ ಆಲಿಯಾಗೆ ಇಲ್ಲ ರೆಸ್ಟ್: ‘100 ವರ್ಷ ಆದ್ರೂ ಈ ಕೆಲಸ ಮಾಡ್ತೀನಿ’ ಎಂದ ನಟಿ
ವಿಚ್ಛೇದನದ ಬಳಿಕ ಕೆಲವು ಮಾಜಿ ದಂಪತಿಗಳು ವೈರಿಗಳಂತೆ ವರ್ತಿಸುತ್ತಾರೆ. ಆದರೆ ಅರ್ಬಾಜ್ ಖಾನ್ ಮತ್ತು ಮಲೈಕಾ ಅರೋರಾ ಅವರು ಆ ರೀತಿ ಇಲ್ಲ. ಪುತ್ರನ ಸಲುವಾಗಿ ಅವರು ತಮ್ಮ ನಡುವಿನ ಆಪ್ತತೆಯನ್ನು ಉಳಿಸಿಕೊಂಡಿದ್ದಾರೆ. 2023ರ ಜನವರಿ ತಿಂಗಳಲ್ಲಿ ಮಗನನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಬೀಳ್ಕೊಟ್ಟ ಬಳಿಕ ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ ಅವರು ತಬ್ಬಿಕೊಂಡಿದ್ದರು. ಆ ಸಂದರ್ಭದ ವಿಡಿಯೋ ವೈರಲ್ ಆಗಿತ್ತು. ಅವರಿಬ್ಬರ ನಡುವೆ ಉತ್ತಮ ಮನೋಭಾವ ಇದೆ ಎಂಬುದಕ್ಕೆ ಆ ವಿಡಿಯೋ ಸಾಕ್ಷಿಯಾಗಿತ್ತು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.