Alia Bhatt: ಪ್ರೆಗ್ನೆಂಟ್​ ಆಲಿಯಾಗೆ ಇಲ್ಲ ರೆಸ್ಟ್​: ‘100 ವರ್ಷ ಆದ್ರೂ ಈ ಕೆಲಸ ಮಾಡ್ತೀನಿ’ ಎಂದ ನಟಿ

ಆಲಿಯಾ ಭಟ್​ ನಟನೆಯ ‘ಡಾರ್ಲಿಂಗ್ಸ್​’ ಚಿತ್ರದ ಬಳಿಕ ‘ಬ್ರಹ್ಮಾಸ್ತ್ರ’ ಸಿನಿಮಾ ಬಿಡುಗಡೆ ಆಗಲಿದೆ. ‘ರಾಕಿ ಔರ್ ರಾಣಿ ಕಿ ಪ್ರೇಮ್​ ಕಹಾನಿ’ ಹಾಗೂ ‘ಹಾರ್ಟ್​ ಆಫ್​ ಸ್ಟೋನ್​’ ಚಿತ್ರದಲ್ಲೂ ಅವರು ನಟಿಸುತ್ತಿದ್ದಾರೆ.

Alia Bhatt: ಪ್ರೆಗ್ನೆಂಟ್​ ಆಲಿಯಾಗೆ ಇಲ್ಲ ರೆಸ್ಟ್​: ‘100 ವರ್ಷ ಆದ್ರೂ ಈ ಕೆಲಸ ಮಾಡ್ತೀನಿ’ ಎಂದ ನಟಿ
ಆಲಿಯಾ ಭಟ್
Follow us
TV9 Web
| Updated By: ಮದನ್​ ಕುಮಾರ್​

Updated on: Aug 03, 2022 | 9:11 AM

ನಟಿ ಆಲಿಯಾ ಭಟ್​​ (Alia Bhatt) ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಪ್ರಿಯಕರ ರಣಬೀರ್​ ಕಪೂರ್ (Ranbir Kapoor)​ ಜೊತೆ ಮದುವೆಯಾಗಿ ಎರಡೂವರೆ ತಿಂಗಳಿಗೆ ಪ್ರೆಗ್ನೆನ್ಸಿ ಘೋಷಿಸಿದ ಆಲಿಯಾ ಅವರು ಈಗ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಪ್ರೆಗ್ನೆಂಟ್​ ಆಗಿದ್ದರೂ ಕೂಡ ಅವರು ವಿಶ್ರಾಂತಿ ಪಡೆಯಲು ಸಿದ್ಧರಿಲ್ಲ. ಆಲಿಯಾ ಭಟ್​ ನಟಿಸಿರುವ ‘ಡಾರ್ಲಿಂಗ್ಸ್​’ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಈ ಸಿನಿಮಾ ‘ನೆಟ್​ಫ್ಲಿಕ್ಸ್​’ ಮೂಲಕ ಆಗಸ್ಟ್​ 5ರಂದು ವೀಕ್ಷಣೆಗೆ ಲಭ್ಯವಾಗಲಿದೆ. ಇದರ ಪ್ರಚಾರಕ್ಕಾಗಿ ಆಲಿಯಾ ಭಟ್​ ಅವರು ಊರೂರು ಸುತ್ತುತ್ತಿದ್ದಾರೆ. ಈ ವೇಳೆ ಅವರಿಗೆ ಪ್ರೆಗ್ನೆನ್ಸಿ (Alia Bhatt Pregnancy) ಬಗ್ಗೆ ಪ್ರಶ್ನೆ ಎದುರಾಗಿದೆ. ಅದಕ್ಕೆ ಅವರು ನೇರವಾಗಿ ಉತ್ತರ ನೀಡಿದ್ದಾರೆ. ಸದ್ಯಕ್ಕೆ ತಮಗೆ ವಿಶ್ರಾಂತಿಯ ಅಗತ್ಯವಿಲ್ಲ ಎಂದು ಆಲಿಯಾ ಭಟ್​ ಹೇಳಿದ್ದಾರೆ.

ಆಲಿಯಾ ಭಟ್​ ಬೇಡಿಕೆಯ ಉತ್ತುಂಗದಲ್ಲಿ ಇರುವಾಗಲೇ ಮದುವೆ ಆಗುವ ನಿರ್ಧಾರಕ್ಕೆ ಬಂದಿದ್ದು ಅನೇಕರಿಗೆ ಅಚ್ಚರಿ ಮೂಡಿಸಿತ್ತು. ವಿವಾಹದ ಬಳಿಕ ಅವರು ನಟನೆಯಿಂದ ದೂರ ಸರಿಯುವ ಸಾಧ್ಯತೆ ಇದೆ ಎಂದು ಅನೇಕರು ಊಹಿಸಿದ್ದರು. ಅವರು ಪ್ರೆಗ್ನೆಂಟ್​ ಎಂದು ಗೊತ್ತಾದ ಬಳಿಕ ಒಂದಷ್ಟು ತಿಂಗಳು ಬ್ರೇಕ್​ ಪಡೆಯುವುದು ಅನಿವಾರ್ಯ ಎಂಬ ಮಾತು ಕೇಳಿಬಂತು. ಆದರೆ ಅದನ್ನು ಆಲಿಯಾ ಭಟ್​ ಒಪ್ಪಿಕೊಳ್ಳುತ್ತಿಲ್ಲ.

‘ಫಿಟ್​ ಮತ್ತು ಆರೋಗ್ಯವಾಗಿದ್ದರೆ ಪ್ರೆಗ್ನೆನ್ಸಿ ಸಂದರ್ಭದಲ್ಲಿ ವಿಶ್ರಾಂತಿ ಪಡೆಯುವ ಅಗತ್ಯವಿಲ್ಲ. ಕೆಲಸ ನನಗೆ ಖುಷಿ ನೀಡುತ್ತದೆ. ನಟನೆ ನನ್ನ ಒಲವು. ಇದು ನನ್ನನ್ನು ಜೀವಂತವಾಗಿ ಇರಿಸುತ್ತದೆ. ನನಗೆ 100 ವರ್ಷ ಆಗುವ ತನಕವೂ ನಾನು ಈ ಕೆಲಸ ಮಾಡುತ್ತೇನೆ’ ಎಂದು ಆಲಿಯಾ ಭಟ್​ ಹೇಳಿದ್ದಾರೆ. ಹೊಸ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತ ಅವರು ಮುನ್ನುಗ್ಗುತ್ತಿದ್ದಾರೆ. ನಟನೆ ಜೊತೆಯಲ್ಲಿ ಅವರು ನಿರ್ಮಾಣದಲ್ಲೂ ಸಕ್ರಿಯರಾಗಿದ್ದಾರೆ.

ಇದನ್ನೂ ಓದಿ
Image
Alia Bhatt: ‘ರಣವೀರ್​ ಸಿಂಗ್​ ಜತೆ ಏನು ಬೇಕಾದ್ರೂ ಮಾತಾಡ್ತೀನಿ’; ಮದುವೆ ಬಳಿಕ ಆಲಿಯಾ ಭಟ್​ ಅಚ್ಚರಿಯ ಹೇಳಿಕೆ
Image
Alia Bhatt: ಪ್ರೆಗ್ನೆಂಟ್​ ಆಗಿದ್ದು ಆಲಿಯಾ ಭಟ್​, ಆದರೆ ಸುದ್ದಿ ಕೇಳಿ ಕಣ್ಣೀರು ಹಾಕಿದ್ದು ಕರಣ್​ ಜೋಹರ್​
Image
Alia Bhatt Pregnant: ಆಲಿಯಾ ಭಟ್​ ಪ್ರೆಗ್ನೆಂಟ್​; ರಣಬೀರ್​ ಕಪೂರ್​ ಜತೆ ಮದುವೆ ಆಗಿ ಎರಡೂವರೆ ತಿಂಗಳಲ್ಲಿ ಗುಡ್​ ನ್ಯೂಸ್​
Image
ವಿಮಾನ ನಿಲ್ದಾಣದಲ್ಲಿ ಗಾಬರಿಯಿಂದ ಓಡಿ ಹೋದ ನಟಿ ಆಲಿಯಾ ಭಟ್​; ವೈರಲ್​ ವಿಡಿಯೋದ ಸತ್ಯಾಂಶ ಏನು?

‘ಡಾರ್ಲಿಂಗ್ಸ್​’ ಚಿತ್ರದ ಬಳಿಕ ‘ಬ್ರಹ್ಮಾಸ್ತ್ರ’ ಸಿನಿಮಾ ಬಿಡುಗಡೆ ಆಗಲಿದೆ. ಪತಿ ರಣಬೀರ್​ ಕಪೂರ್​ ಜೊತೆ ಅಭಿನಯಿಸಿದ ಈ ಚಿತ್ರ ಸೆಪ್ಟೆಂಬರ್​ 9ರಂದು ತೆರೆಕಾಣಲಿದೆ. ರಣವೀರ್​ ಸಿಂಗ್​ ಜೊತೆ ಅವರು ‘ರಾಕಿ ಔರ್ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹಾಲಿವುಡ್​ನ ‘ಹಾರ್ಟ್​ ಆಫ್​ ಸ್ಟೋನ್​’ ಚಿತ್ರದಲ್ಲೂ ಅವರು ಅಭಿನಯಿಸುತ್ತಿದ್ದು, ಈ ಎಲ್ಲ ಪ್ರಾಜೆಕ್ಟ್​ಗಳ ಬಗ್ಗೆ ಅಭಿಮಾನಿಗಳಲ್ಲಿ ಸಖತ್​ ನಿರೀಕ್ಷೆ ಮೂಡಿದೆ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ