AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖ್ಯಾತ ಕಲಾ ನಿರ್ದೇಶಕ ಆತ್ಮಹತ್ಯೆ: ಸೂಸೈಡ್ ನೋಟ್​ನಲ್ಲಿ ನಾಲ್ಕು ಹೆಸರು, ತನಿಖೆ ಆರಂಭಿಸಿದ ಪೊಲೀಸರು

Nitin Desai: ಆಗಸ್ಟ್ 2 ರಂದು ಸ್ಟುಡಿಯೋನಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್​ನ ಜನಪ್ರಿಯ ಕಲಾ ನಿರ್ದೇಶಕ ನಿತಿನ್ ದೇಸಾಯಿ ಮೊಬೈಲ್​ನಲ್ಲಿ ಸೂಸೈಡ್ ನೋಟ್​ ಪತ್ತೆಯಾಗಿದ್ದು, ನಿತಿನ್ ಉಲ್ಲೇಖಿಸಿರುವ ನಾಲ್ಕು ವ್ಯಕ್ತಿಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಖ್ಯಾತ ಕಲಾ ನಿರ್ದೇಶಕ ಆತ್ಮಹತ್ಯೆ: ಸೂಸೈಡ್ ನೋಟ್​ನಲ್ಲಿ ನಾಲ್ಕು ಹೆಸರು, ತನಿಖೆ ಆರಂಭಿಸಿದ ಪೊಲೀಸರು
ನಿತಿನ್ ದೇಸಾಯಿ
ಮಂಜುನಾಥ ಸಿ.
|

Updated on: Aug 03, 2023 | 8:50 PM

Share

‘ದೇವದಾಸ್’, ‘ಲಗಾನ್’, ‘ಜೋಧಾ ಅಕ್ಬರ್’, ‘ಸಲಾಂ ಬಾಂಬೆ’, ‘ಮಂಗಲ್ ಪಾಂಡೆ’ ಇನ್ನೂ ಅನೇಕ ಜನಪ್ರಿಯ ಸೂಪರ್ ಹಿಟ್ ಹಿಂದಿ ಸಿನಿಮಾಗಳಿಗೆ ಕಲಾ ನಿರ್ದೇಶಕರಾಗಿ ಕೆಲಸ ಮಾಡಿದ್ದ ನಿತಿನ್ ಚಂದ್ರಕಾಂತ್ ದೇಸಾಯಿ (Nitin Chandrakanth Desai) ನಿನ್ನೆ (ಆಗಸ್ಟ್ 2) ಮಹಾರಾಷ್ಟ್ರದ ಖರ್ಜತ್​ನಲ್ಲಿನ ತಮ್ಮ ಆರ್ಟ್ ಸ್ಟುಡಿಯೋನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಪ್ರಾಥಮಿಕ ತನಿಖೆಯಲ್ಲಿ ನಿತಿನ್ ದೇಸಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬುದು ಖಾತ್ರಿಯಾಗಿದೆ. ನಿತಿನ್​ರ ಫೋನಿನಲ್ಲಿ ಆಡಿಯೋ ಫೈಲ್ ಒಂದು ಪತ್ತೆಯಾಗಿದ್ದು, ಆತ್ಮಹತ್ಯೆಗೆ ಮುನ್ನಾ ನಿತಿನ್ ಅವರು ದಾಖಲಿಸಿರುವ ಸೂಸೈಡ್ ನೋಟ್ ಇದಾಗಿದ್ದು ನಿತಿನ್ ತಮ್ಮ ಸಾವಿಗೆ ಕಾರಣರಾದ ನಾಲ್ವರ ಹೆಸರನ್ನು ಆಡಿಯೋ ಫೈಲ್​ನಲ್ಲಿ ಹೇಳಿದ್ದಾರೆ ಎನ್ನಲಾಗುತ್ತಿದೆ.

ನಿತಿನ್ ದೇಸಾಯಿ ಅವರು ತಮ್ಮ ಆರ್ಟ್​ ಸ್ಟುಡಿಯೋಗಾಗಿ 250 ಕೋಟಿ ರೂಪಾಯಿ ಸಾಲ ಮಾಡಿದ್ದರು. ಆರಂಭದಲ್ಲಿ ಆರ್ಟ್ ಸ್ಟುಡಿಯೋ ಚೆನ್ನಾಗಿ ನಡೆಯುತ್ತಿದ್ದಾದರೂ ಕೋವಿಡ್ ಸಮಯದಲ್ಲಿ ಕೆಲಸವೇ ಇಲ್ಲದಾಯಿತು. ಇದರಿಂದಾಗಿ ನಿತಿನ್ ದೇಸಾಯಿಗೆ ಸಾಲ ಮರುಪಾವತಿ ಕಷ್ಟವಾಗಿತ್ತು, ಸಾಲ ಕೊಟ್ಟವರು ಇತ್ತೀಚೆಗೆ ಕಿರುಕುಳ ಆರಂಭಿಸಿದ್ದ ಕಾರಣ ನಿತಿನ್ ದೇಸಾಯಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.

ನಿತಿನ್​ರ ಮೊಬೈಲ್​ನಲ್ಲಿ ದೊರಕಿರುವ ಆಡಿಯೋ ಫೈಲ್ ಆಧರಿಸಿ ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದು, ನಿತಿನ್ ಹೆಸರಿಸಿರುವ ನಾಲ್ವರನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ. ನಿತಿನ್​ರನ್ನು ಆತ್ಮಹತ್ಯೆಯಂಥಹಾ ಕಠಿಣ ನಿರ್ಧಾರಕ್ಕೆ ದೂಡಿದ ಅಂಶಗಳ ಬಗ್ಗೆ ಆತ್ಮಹತ್ಯೆಗೆ ಪ್ರೇರೇಪಣೆ ನೀಡಿದ ವಿಚಾರಗಳು, ವ್ಯಕ್ತಿಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:‘ಬಿಗ್ ಬಾಸ್’ ಸ್ಟುಡಿಯೋದಲ್ಲಿ ಆತ್ಮಹತ್ಯೆ ಮಾಡಿಕೊಂಡ ಖ್ಯಾತ ಕಲಾ ನಿರ್ದೇಶಕ ನಿತಿನ್ ದೇಸಾಯಿ  

ವರದಿಗಳ ಪ್ರಕಾರ, ದೇಸಾಯಿ ಹಾಗೂ ಅವರ ಪತ್ನಿಯ ಹೆಸರಲ್ಲಿ ಒಟ್ಟು 252 ಕೋಟಿ ಸಾಲ ಇತ್ತು. 2016 ರಲ್ಲಿ ಸ್ಟುಡಿಯೋ ನಿರ್ಮಾಣಕ್ಕಾಗಿ ದೇಸಾಯಿ ಅವರ ಪತ್ನಿ ನೈನಾ ದೇಸಾಯಿ ಹೆಸರಲ್ಲಿ 150 ಕೋಟಿ ಸಾಲ ಪಡೆದಿದ್ದರು. ಅದಾದ ಬಳಿಕ 2018 ರಲ್ಲಿ 31 ಕೋಟಿ ಸಾಲ ಪಡೆದಿದ್ದರು. 2019 ರ ಬಳಿಕ ಸಾಲ ಮರುಪಾವತಿ ಕಷ್ಟವಾಗಿತ್ತು, ಅಲ್ಲದೆ ಅವರಿಗೆ ಹಣ ಕೊಡಬೇಕಾದವರು ಹಣ ಕೊಡದೆ ಸತಾಯಿಸಿದ್ದರು ಎಂದೂ ಸಹ ಹೇಳಲಾಗಿದೆ. 2023ರ ವೇಳೆಗೆ ಅವರ ಒಟ್ಟು ನಿವ್ವಳ ಸಾಲ 252 ಕೋಟಿ ಆಗಿತ್ತು. ಬ್ಯಾಂಕ್ ಮಾತ್ರವೇ ಅಲ್ಲದೆ ಖಾಸಗಿ ಫೈನ್ಯಾನ್ಶಿಯರ್​ಗಳಿಂದಲೂ ನಿತಿನ್ ದೇಸಾಯಿ ಸಾಲ ಪಡೆದಿದ್ದರು ಎನ್ನಲಾಗುತ್ತಿದ್ದು, ಖಾಸಗಿ ಫೈನ್ಯಾನ್ಶಿಯರ್​ಗಳು ಸಾಲ ಮರುಪಾವತಿಸುವಂತೆ ದುಂಬಾಲು ಬಿದ್ದಿದ್ದರಿಂದಲೇ ನಿತಿನ್ ದೇಸಾಯಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ರಾಜ್​ ಸಂಬಂಧಿ ಮನೆಯಲ್ಲಿ ಸ್ಫೋಟ: ಸ್ಥಳ ಮಹಜರು ವೇಳೆ ಹೈಡ್ರಾಮಾ
ರಾಜ್​ ಸಂಬಂಧಿ ಮನೆಯಲ್ಲಿ ಸ್ಫೋಟ: ಸ್ಥಳ ಮಹಜರು ವೇಳೆ ಹೈಡ್ರಾಮಾ
ಎನ್​ಡಿಎ ಪರೀಕ್ಷೆಯಲ್ಲಿ ಐತಿಹಾಸಿಕ ಸಾಧನೆ ಮಾಡಿದ ಭದ್ರಾವತಿಯ ಶ್ರೇಯಾ
ಎನ್​ಡಿಎ ಪರೀಕ್ಷೆಯಲ್ಲಿ ಐತಿಹಾಸಿಕ ಸಾಧನೆ ಮಾಡಿದ ಭದ್ರಾವತಿಯ ಶ್ರೇಯಾ
ಬರ ಪರಿಹಾರದಲ್ಲಿ ವ್ಯತ್ಯಾಸ: ಆಕ್ರೋಶ; ಸರ್ಕಾರಕ್ಕೆ ಚೆಕ್ ಬರೆದ ಅನ್ನದಾತರು
ಬರ ಪರಿಹಾರದಲ್ಲಿ ವ್ಯತ್ಯಾಸ: ಆಕ್ರೋಶ; ಸರ್ಕಾರಕ್ಕೆ ಚೆಕ್ ಬರೆದ ಅನ್ನದಾತರು
ರೈಲಿನಡಿ ಬಿದ್ದು ಸಾಯುತ್ತಿದ್ದ ಮಹಿಳೆಯ ಜೀವ ಕಾಪಾಡಿದ ಆರ್​ಪಿಎಫ್​ ಸಿಬ್ಬಂದಿ
ರೈಲಿನಡಿ ಬಿದ್ದು ಸಾಯುತ್ತಿದ್ದ ಮಹಿಳೆಯ ಜೀವ ಕಾಪಾಡಿದ ಆರ್​ಪಿಎಫ್​ ಸಿಬ್ಬಂದಿ
ದರ್ಶನ್ ಜೈಲಿನಿಂದ ಬಿಡುಗಡೆಯಾಗಲಿ ಎಂದು ಹಾಸನಾಂಬೆಗೆ ಹರಕೆ ಹೊತ್ತ ಅಭಿಮಾನಿ
ದರ್ಶನ್ ಜೈಲಿನಿಂದ ಬಿಡುಗಡೆಯಾಗಲಿ ಎಂದು ಹಾಸನಾಂಬೆಗೆ ಹರಕೆ ಹೊತ್ತ ಅಭಿಮಾನಿ
ಕೆಎಸ್‌ಆರ್‌ಟಿಸಿ ಲಗೇಜ್ ಶುಲ್ಕ ಹೆಚ್ಚಳ: ಇಂದಿನಿಂದಲೇ ಹೊಸ ದರ ಜಾರಿ
ಕೆಎಸ್‌ಆರ್‌ಟಿಸಿ ಲಗೇಜ್ ಶುಲ್ಕ ಹೆಚ್ಚಳ: ಇಂದಿನಿಂದಲೇ ಹೊಸ ದರ ಜಾರಿ
ಬಿಗ್ ಬಾಸ್ ಕನ್ನಡ: ತಾಂಡವ್, ಗಗನ್ ಸ್ನೇಹದಲ್ಲಿ ಬಿರುಕು; ಇನ್ಮುಂದೆ ಬೇರೆ ಆಟ
ಬಿಗ್ ಬಾಸ್ ಕನ್ನಡ: ತಾಂಡವ್, ಗಗನ್ ಸ್ನೇಹದಲ್ಲಿ ಬಿರುಕು; ಇನ್ಮುಂದೆ ಬೇರೆ ಆಟ
ಮುಂಬೈನಲ್ಲಿ ಪಟಾಕಿ ಅಂಗಡಿಯಲ್ಲಿ ಸ್ಫೋಟ; 16 ವರ್ಷದ ಬಾಲಕ ಸಾವು
ಮುಂಬೈನಲ್ಲಿ ಪಟಾಕಿ ಅಂಗಡಿಯಲ್ಲಿ ಸ್ಫೋಟ; 16 ವರ್ಷದ ಬಾಲಕ ಸಾವು
7 ಮಂದಿ ಕೊಲೆ ಪ್ರಕರಣ: ಆರೋಪಿ ಇಂದುಶೇಖರ್​​ ವಿಚಾರಣೆ ಮತ್ತಷ್ಟು ತೀವ್ರ
7 ಮಂದಿ ಕೊಲೆ ಪ್ರಕರಣ: ಆರೋಪಿ ಇಂದುಶೇಖರ್​​ ವಿಚಾರಣೆ ಮತ್ತಷ್ಟು ತೀವ್ರ
ಮಾದಪ್ಪನ ಬೆಟ್ಟದಲ್ಲಿ ಇಂದು ದೀಪಾವಳಿ ಜಾತ್ರಾ ಮಹೋತ್ಸವ; ಬೆಳಗಿದವು ಲಕ್ಷದೀಪ
ಮಾದಪ್ಪನ ಬೆಟ್ಟದಲ್ಲಿ ಇಂದು ದೀಪಾವಳಿ ಜಾತ್ರಾ ಮಹೋತ್ಸವ; ಬೆಳಗಿದವು ಲಕ್ಷದೀಪ