ಶಾರುಖ್ ಖಾನ್ (Shah Rukh Khan) ಪುತ್ರ ಆರ್ಯನ್ ಖಾನ್ (Aryan Khan) ಅವರಿಗೆ ಇಂದು (ನ.13) ಜನ್ಮದಿನದ ಸಂಭ್ರಮ. 24ನೇ ವರ್ಷಕ್ಕೆ ಅವರು ಕಾಲಿಟ್ಟಿದ್ದು ಆಪ್ತರೆಲ್ಲ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ. ಪ್ರತಿ ವರ್ಷ ಸ್ನೇಹಿತರು ಮತ್ತು ಕುಟುಂಬದವರ ಜೊತೆ ಅದ್ದೂರಿಯಾಗಿ ಆರ್ಯನ್ ಖಾನ್ ಬರ್ತ್ಡೇ (Aryan Khan Birthday) ಆಚರಿಸಿಕೊಳ್ಳುತ್ತಿದ್ದರು. ಆದರೆ ಈ ವರ್ಷ ಪರಿಸ್ಥಿತಿ ಬದಲಾಗಿದೆ. ಡ್ರಗ್ಸ್ ಕೇಸ್ನಲ್ಲಿ ಅವರು ಸಿಕ್ಕಿಹಾಕಿಕೊಂಡಿದ್ದು, ಎನ್ಸಿಬಿ (NCB) ಅಧಿಕಾರಿಗಳಿಂದ ವಿಚಾರಣೆಗೆ ಒಳಪಡುತ್ತಿದ್ದಾರೆ. ಅಲ್ಲದೇ, ಜಾಮೀನು ಪಡೆದು ಜೈಲಿನಿಂದ ಹೊರಬಂದ ಬಳಿಕ ಹೆಚ್ಚಾಗಿ ಯಾರನ್ನೂ ಅವರು ಭೇಟಿ ಮಾಡುತ್ತಿಲ್ಲ. ಈ ಎಲ್ಲ ಕಾರಣಗಳಿಂದ ಈ ವರ್ಷದ ಬರ್ತ್ಡೇ ಅವರಿಗೆ ವಿಶೇಷವಾಗಿಲ್ಲ. ಅಚ್ಚರಿ ಎಂದರೆ ಹುಟ್ಟುಹಬ್ಬದ ದಿನ ಕೂಡ ಅವರು ಎನ್ಸಿಬಿ ಕಚೇರಿಯಲ್ಲಿ ಕಾಲ ಕಳೆಯುವಂತಾಗಿದೆ.
ಶುಕ್ರವಾರ (ನ.12) ಬೆಳಗ್ಗೆ ಆರ್ಯನ್ ಖಾನ್ ಅವರು ಎನ್ಸಿಬಿ ಕಚೇರಿಗೆ ಭೇಟಿ ನೀಡಿ ಸಹಿ ಹಾಕಿದ್ದಾರೆ. ಬಾಂಬೆ ಹೈಕೋರ್ಟ್ನ ಆದೇಶದಂತೆ ಅವರು ಈ ರೀತಿ ಸಹಿ ಮಾಡುವುದು ಕಡ್ಡಾಯ. ಬಳಿಕ ಅವರು ವಿಶೇಷ ತನಿಖಾ ತಂಡದ ಎದುರು ಹಾಜರಾದರು. ಎನ್ಸಿಬಿ ಡೆಪ್ಯೂಟಿ ಡೈರೆಕ್ಟರ್ ಜನರಲ್ ಸಂಜಯ್ ಕುಮಾರ್ ಸಿಂಗ್ ಅವರು ಆರ್ಯನ್ ಖಾನ್ರನ್ನು ವಿಚಾರಣೆಗೆ ಒಳಪಡಿಸಿದರು. ಶುಕ್ರವಾರ ಮಧ್ಯರಾತ್ರಿವರೆಗೂ ವಿಚಾರಣೆ ಮುಂದುವರಿದಿತ್ತು. ಅಂದರೆ, ಮನೆಯಲ್ಲಿ ಆಪ್ತರ ಜೊತೆ ಬರ್ತ್ಡೇ ಸೆಲೆಬ್ರೇಟ್ ಮಾಡಿಕೊಳ್ಳಬೇಕಾದ ಹೊತ್ತಿನಲ್ಲಿ ಆರ್ಯನ್ ಖಾನ್ ಅವರು ಎನ್ಸಿಬಿ ಅಧಿಕಾರಿಗಳ ಜೊತೆ ಕಾಲ ಕಳೆಯುವಂತಾಯಿತು ಎಂದು ವರದಿ ಆಗಿದೆ.
ಕಳೆದ 10 ವರ್ಷಗಳಿಂದಲೂ ಶಾರುಖ್ ಖಾನ್ಗೆ ಬಾಡಿಗಾರ್ಡ್ ಆಗಿ ರವಿ ಸಿಂಗ್ ಕೆಲಸ ಮಾಡುತ್ತಿದ್ದಾರೆ. ಶಾರುಖ್ ಎಲ್ಲಿಯೇ ಹೋದರು ಅವರ ಜತೆ ರವಿ ಇರುತ್ತಾರೆ. ಎಷ್ಟೇ ದೊಡ್ಡ ಗುಂಪಿದ್ದರೂ ಶಾರುಖ್ ಖಾನ್ ಅವರನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗುವ ಕೆಲಸವನ್ನು ರವಿ ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಈಗ ಆರ್ಯನ್ ಜತೆ ರವಿ ಸಿಂಗ್ ಅವರನ್ನು ಬಿಟ್ಟು, ತಾವು ಹೊಸ ಬಾಡಿಗಾರ್ಡ್ ಹುಡುಕಲು ಶಾರುಖ್ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಶಾರುಖ್ ಖಾನ್ ಅವರು ರವಿಗೆ ವರ್ಷಕ್ಕೆ 2.7 ಕೋಟಿ ರೂ. ಸಂಬಳ ನೀಡುತ್ತಾರೆ.
ಇದನ್ನೂ ಓದಿ:
‘ಆರ್ಯನ್ ಖಾನ್ ಕಿಡ್ನಾಪ್ ಮಾಡಿ, ಹಣಕ್ಕಾಗಿ ಬೇಡಿಕೆ ಇಡಲಾಯ್ತು’: ನವಾಬ್ ಮಲಿಕ್ ಗಂಭೀರ ಆರೋಪ
Aryan Khan: 22 ದಿನ ಜೈಲಿನಲ್ಲಿದ್ದ ಆರ್ಯನ್ ಖಾನ್ಗೆ ಈಗ ಮನೆಯವರಿಂದಲೇ ಬ್ಲಡ್ ಟೆಸ್ಟ್; ಕಾರಣ ಏನು?
Published On - 9:55 am, Sat, 13 November 21