ನಟ ಸನ್ನಿ ಡಿಯೋಲ್ ಅವರು (Sunny Deol) ಸದ್ಯ ಸುದ್ದಿಯಲ್ಲಿದ್ದಾರೆ. ‘ಗದರ್ 2’ ಸಿನಿಮಾ ಸೂಪರ್ ಹಿಟ್ ಆದ ಬಳಿಕ ಅವರ ಜನಪ್ರಿಯತೆ ಹೆಚ್ಚಾಗಿದೆ. ಈ ಮಧ್ಯೆ ಅವರು 56 ಕೋಟಿ ರೂಪಾಯಿ ಸಾಲ ಹಿಂದಿರುಗಿಸದ ಕಾರಣ ಅವರ ಒಡೆತನದ ಬಂಗಲೆಯನ್ನು ಬ್ಯಾಂಕ್ ಆಫ್ ಬರೋಡಾದವರು ಹರಾಜಿಗೆ ಇಟ್ಟಿದ್ದರು. ಈಗ ಇದನ್ನು ಹಿಂಪಡೆಯಲಾಗಿದೆ. ಇದಕ್ಕೆ ತಾಂತ್ರಿಕ ಸಮಸ್ಯೆಯ ಕಾರಣವನ್ನು ಬ್ಯಾಂಕ್ ನೀಡಿದೆ. ಈ ಬೆಳವಣಿಗೆ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ.
ಟೈಮ್ಸ್ ಆಫ್ ಇಂಡಿಯಾ ಮುಂಬೈ ಎಡಿಷನ್ನ ಜಾಹೀರಾತು ಕಾಲಂನಲ್ಲಿ ಈ ನೋಟಿಸ್ ಪ್ರಕಟಗೊಂಡಿತ್ತು. ಇದು ದೊಡ್ಡ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿತ್ತು. ‘ಗದರ್ 2’ ಮೂಲಕ ದೊಡ್ಡ ಗೆಲುವು ಪಡೆದ ನಟನಿಗೆ ಇದೆಂಥಾ ಸ್ಥಿತಿ ಬಂದಿದೆ ಎಂದು ಅನೇಕರು ಹೇಳಿಕೊಂಡಿದ್ದರು. ಆದರೆ, ಈಗ ಬ್ಯಾಂಕ್ನವರು ಈ ಹರಾಜು ಪ್ರಕ್ರಿಯೆಯನ್ನು ಹಿಂಪಡೆದಿದ್ದಾರೆ.
ಸನ್ನಿ ಡಿಯೋಲ್ ಕೇವಲ ನಟ ಮಾತ್ರ ಅಲ್ಲ ಸಂಸದ ಕೂಡ ಹೌದು. ಅವರು ಬಿಜೆಪಿ ಪಕ್ಷದಲ್ಲಿದ್ದಾರೆ. ಈಗ ಅವರ ಬಂಗಲೆಯ ಹರಾಜು ಪ್ರಕ್ರಿಯೆ ಅರ್ಧಕ್ಕೆ ನಿಂತಿರುವ ಬಗ್ಗೆ ಕಾಂಗ್ರೆಸ್ನವರು ಪ್ರಶ್ನೆ ಮಾಡಿದ್ದಾರೆ. ‘56 ಕೋಟಿ ರೂಪಾಯಿ ಸಾಲ ಮರುಪಾವತಿಸದ ಕಾರಣ ಬಿಜೆಪಿ ಸಂಸದ ಸನ್ನಿ ಡಿಯೋಲ್ ಬಂಗಲೆಯನ್ನು ಹರಾಜಿಗೆ ಇಡಲಾಗಿದೆ ಎಂಬ ವಿಚಾರ ದೇಶಕ್ಕೆ ಗೊತ್ತಾಯಿತು. ಆದರೆ, 24 ಗಂಟೆ ಒಳಗೆ ಬ್ಯಾಂಕ್ ಆಫ್ ಬರೋಡಾ ಈ ಹರಾಜು ಪ್ರಕ್ರಿಯೆಯನ್ನು ತಡೆದಿದೆ. ಇದಕ್ಕೆ ತಾಂತ್ರಿಕ ಕಾರಣ ನೀಡಲಾಗಿದೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.
In less than 24 hours:
– Bank of Baroda issued an auction notice against BJP MP #SunnyDeol‘s bungalow, alleging non-payment of dues worth ₹55 Cr
– Astonishingly, the bank promptly retracted the notice, conveniently attributing it to ‘Technical Reasons’.… pic.twitter.com/WvroxaF8Kr— YSR (@ysathishreddy) August 21, 2023
ಇದನ್ನೂ ಓದಿ: 56 ಕೋಟಿ ರೂಪಾಯಿ ಸಾಲ; ಸನ್ನಿ ಡಿಯೋಲ್ ಬಂಗಲೆ ಹರಾಜಿಗಿಟ್ಟ ಬ್ಯಾಂಕ್ ಅಧಿಕಾರಿಗಳು
ಸನ್ನಿ ಡಿಯೋಲ್ 2016ರಲ್ಲಿ ‘ಘಾಯಲ್ ಒನ್ಸ್ ಅಗೇನ್’ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸೋತಿತ್ತು. ಈ ಚಿತ್ರವನ್ನು ಅವರ ತಂದೆ ಧರ್ಮೇಂದ್ರ ನಿರ್ಮಾಣ ಮಾಡಿದ್ದರು. ಈ ಚಿತ್ರ ನಿರ್ಮಾಣಕ್ಕೆ ಅವರು ಈ ಬಂಗಲೆಯನ್ನು ಅಡ ಇಟ್ಟಿದ್ದರು ಎನ್ನಲಾಗಿದೆ. ಸದ್ಯ ಹರಾಜು ಪ್ರಕ್ರಿಯೆ ನಿಂತಿರುವ ವಿಚಾರದ ಬಗ್ಗೆ ಅನೇಕರು ಪ್ರಶ್ನೆ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:30 am, Mon, 21 August 23