Bholaa: ತ್ರಿಶೂಲ ಹಿಡಿದು ಬಂದ ಅಜಯ್​ ದೇವಗನ್​; ಕೌತುಕ ಮೂಡಿಸಿದೆ ‘ಭೋಲಾ’ ಚಿತ್ರದ ಪೋಸ್ಟರ್​

Bholaa Movie Poster: ಅಜಯ್​ ದೇವಗನ್ ನಟನೆಯ ‘ಭೋಲಾ’ ಸಿನಿಮಾ ಮಾರ್ಚ್​ 30ರಂದು ರಿಲೀಸ್​ ಆಗಲಿದೆ. ಈ ಚಿತ್ರ 3ಡಿಯಲ್ಲಿ ಮೂಡಿಬರುತ್ತಿದೆ ಎಂಬುದು ವಿಶೇಷ.

Bholaa: ತ್ರಿಶೂಲ ಹಿಡಿದು ಬಂದ ಅಜಯ್​ ದೇವಗನ್​; ಕೌತುಕ ಮೂಡಿಸಿದೆ ‘ಭೋಲಾ’ ಚಿತ್ರದ ಪೋಸ್ಟರ್​
ಅಜಯ್ ದೇವಗನ್

Updated on: Jan 21, 2023 | 6:40 PM

ನಟ ಅಜಯ್​ ದೇವಗನ್ (Ajay Devgn) ಅವರು ಯಶಸ್ಸಿಗಾಗಿ ರಿಮೇಕ್​ ಸೂತ್ರ ಬಳಸುತ್ತಿದ್ದಾರೆ. 2022ರಲ್ಲಿ ‘ದೃಶ್ಯಂ 2’ ಚಿತ್ರದ ಹಿಂದಿ ರಿಮೇಕ್​ನಿಂದ ಅವರಿಗೆ ದೊಡ್ಡ ಗೆಲುವು ಸಿಕ್ಕಿತು. 2023ರಲ್ಲೂ ಅವರು ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ತಮಿಳಿನ ‘ಖೈದಿ’ ಸಿನಿಮಾವನ್ನು ಅಜಯ್​ ದೇವಗನ್​ ಅವರು ಹಿಂದಿಯಲ್ಲಿ ‘ಭೋಲಾ’ (Bholaa Movie) ಎಂದು ರಿಮೇಕ್​ ಮಾಡುತ್ತಿದ್ದಾರೆ. ಈ ಸಿನಿಮಾದ ಹೊಸ ಪೋಸ್ಟರ್​ ಬಿಡುಗಡೆ ಆಗಿದೆ. ಇದನ್ನು ಕಂಡು ಅಭಿಮಾನಿಗಳು ಥ್ರಿಲ್​ ಆಗಿದ್ದಾರೆ. ಈ ಪೋಸ್ಟರ್ (Bholaa Movie Poster)​ ಜೊತೆಯಲ್ಲಿ ಟೀಸರ್​ ರಿಲೀಸ್​ ದಿನಾಂಕವನ್ನು ತಿಳಿಸಲಾಗಿದೆ. ಜನವರಿ 24ರಂದು ‘ಭೋಲಾ’ ಚಿತ್ರದ 2ನೇ ಟೀಸರ್​ ಬಿಡುಗಡೆ ಆಗಲಿದೆ. ಸದ್ಯ ಅನಾವರಣಗೊಂಡಿರುವ ಪೋಸ್ಟರ್​ ವೈರಲ್​ ಆಗಿದೆ.

ತಮಿಳಿನಲ್ಲಿ ‘ಖೈದಿ’ ಚಿತ್ರಕ್ಕೆ ಲೋಕೇಶ್​ ಕನಗರಾಜ್​ ನಿರ್ದೇಶನ ಮಾಡಿದ್ದರು. ಹಿಂದಿಯ ರಿಮೇಕ್​ನಲ್ಲಿ ಸ್ವತಃ ಅಜಯ್​ ದೇವಗನ್​ ಅವರು ನಿರ್ದೇಶನ ಮಾಡುತ್ತಿದ್ದಾರೆ. ನಿರ್ಮಾಣದ ಜವಾಬ್ದಾರಿ ಕೂಡ ಅವರದ್ದೇ. ‘ಭೋಲಾ’ ಸಿನಿಮಾದಲ್ಲಿನ ಅವರ ಲುಕ್​ ಗಮನ ಸೆಳೆಯುತ್ತಿದೆ. ಕಪ್ಪು ಬಟ್ಟೆ ಧರಿಸಿರುವ ಅವರು ಹಣೆಗೆ ವಿಭೂತಿ ಹಚ್ಚಿದ್ದಾರೆ. ಕೊರಳಿನಲ್ಲಿ ಟವೆಲ್​ ಇದೆ. ಕೈಯಲ್ಲಿ ತ್ರಿಶೂಲ ಹಿಡಿದು ದುಷ್ಟರ ಸಂಹಾರಕ್ಕೆ ಸಜ್ಜಾಗಿರುವ ರೀತಿಯಲ್ಲಿ ಅಜಯ್​ ದೇವಗನ್​ ಪೋಸ್​ ನೀಡಿದ್ದಾರೆ.

ಇದನ್ನೂ ಓದಿ
Nysa Devgan: ಅಜಯ್ ದೇವಗನ್ ಮಗಳ ಬೋಲ್ಡ್​ ಅವತಾರಕ್ಕೆ ಪಡ್ಡೆಗಳು ಫಿದಾ
Nysa Devgan: ಬೋಲ್ಡ್​ ಬಟ್ಟೆ ಧರಿಸಿ ಟ್ರೋಲ್​ ಆದ ಅಜಯ್​ ದೇವಗನ್​-ಕಾಜೋಲ್​ ದಂಪತಿ ಮಗಳು ನಿಸಾ
‘ದೃಶ್ಯಂ 2’ನಿಂದ ದೊಡ್ಡ ಗೆಲುವು ಕಂಡ ಅಜಯ್ ದೇವಗನ್; ಇಲ್ಲಿವೆ ಅವರ ಟಾಪ್ 5 ಚಿತ್ರಗಳು
Drishyam 2 Twitter Review: ‘ದೃಶ್ಯಂ 2’ ಟ್ವಿಟರ್​ ವಿಮರ್ಶೆ; ಅಜಯ್​ ದೇವಗನ್​ ಚಿತ್ರಕ್ಕೆ ಪ್ರೇಕ್ಷಕರ ರಿಯಾಕ್ಷನ್​ ಇಲ್ಲಿದೆ..

ಇದನ್ನೂ ಓದಿ: ಸ್ಟಾರ್​ ಹೀರೋ ಜತೆಗಿನ ಜಗಳದ ಬಗ್ಗೆ ಮೌನ ಮುರಿದ ಅಜಯ್​ ದೇವಗನ್​: ‘ಇದೆಲ್ಲ ಫ್ಯಾನ್ಸ್​ ಕೆಲಸ’ ಎಂದ ನಟ

‘ಭೋಲಾ’ ಸಿನಿಮಾದಲ್ಲಿ ಖ್ಯಾತ ನಟಿ ಟಬು ಕೂಡ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಅಜಯ್​ ದೇವಗನ್​ ಜೊತೆ ಅವರು ನಟಿಸುತ್ತಿರುವ 9ನೇ ಸಿನಿಮಾ ಇದು. ಈ ಚಿತ್ರದಲ್ಲಿ ಅವರಿಗೆ ಪೊಲೀಸ್​ ಅಧಿಕಾರಿಯ ಪಾತ್ರವಿದೆ. ಅವರ ಫಸ್ಟ್​ ಲುಕ್​ ಕೂಡ ಗಮನ ಸೆಳೆಯುತ್ತಿದೆ. ಈ ಸಿನಿಮಾ ಮೂಲಕ ಮತ್ತೊಂದು ಭರ್ಜರಿ ಗೆಲುವು ಪಡೆಯಲು ಅಜಯ್​ ದೇವಗನ್​ ಕಾದಿದ್ದಾರೆ.

ಇದನ್ನೂ ಓದಿ: Nysa Devgan: ಬೋಲ್ಡ್​ ಬಟ್ಟೆ ಧರಿಸಿ ಟ್ರೋಲ್​ ಆದ ಅಜಯ್​ ದೇವಗನ್​-ಕಾಜೋಲ್​ ದಂಪತಿ ಮಗಳು ನಿಸಾ

ತಮಿಳಿನ ಮೂಲ ಚಿತ್ರಕ್ಕಿಂತಲೂ ‘ಭೋಲಾ’ ಕಥೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡು ರಿಮೇಕ್​ ಮಾಡಲಾಗುತ್ತಿದೆ ಎಂಬ ಮಾತಿದೆ. ಆ ಕಾರಣದಿಂದಲೂ ಈ ಸಿನಿಮಾ ಮೇಲೆ ಕೌತುಕ ಮೂಡಿದೆ. ವಿಶೇಷ ಏನೆಂದರೆ ಈ ಚಿತ್ರ 3ಡಿ ರೂಪದಲ್ಲೂ ಮೂಡಿಬರುತ್ತಿದೆ. ಅಮಲಾ ಪೌಲ್​ ಕೂಡ ಒಂದು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮಾರ್ಚ್​ 30ರಂದು ‘ಭೋಲಾ’ ಸಿನಿಮಾ ರಿಲೀಸ್​ ಆಗಲಿದೆ. ಈ ಸಿನಿಮಾದ ಇನ್ನೊಂದು ವಿಶೇಷ ಏನೆಂದರೆ ಇದಕ್ಕೆ ಸಂಗೀತ ನೀಡಿರುವುದು ಕನ್ನಡಿಗ ರವಿ ಬಸ್ರೂರು. ‘ಕೆಜಿಎಫ್​’ ಚಿತ್ರದ ಸಕ್ಸಸ್​ ಬಳಿಕ ಪರಭಾಷೆಯಲ್ಲಿ ಅವರಿಗೆ ಬೇಡಿಕೆ ಹೆಚ್ಚಿದೆ. ‘ಭೋಲಾ’ ಚಿತ್ರಕ್ಕೆ ಅವರು ಹಿನ್ನೆಲೆ ಸಂಗೀತ ನೀಡಿರುವುದರಿಂದ ಸಿನಿಮಾ ಮೇಲಿನ ಕ್ರೇಜ್​ ಹೆಚ್ಚಲು ಕಾರಣ ಆಗಿದೆ.

​ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:38 pm, Sat, 21 January 23

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us