Nysa Devgan: ಬೋಲ್ಡ್​ ಬಟ್ಟೆ ಧರಿಸಿ ಟ್ರೋಲ್​ ಆದ ಅಜಯ್​ ದೇವಗನ್​-ಕಾಜೋಲ್​ ದಂಪತಿ ಮಗಳು ನಿಸಾ

Nysa Devgan Viral Video: ಡೀಪ್​ ನೆಕ್​ ಇರುವಂತಹ ಗುಲಾಬಿ ಬಣ್ಣದ​ ಬಾಡಿ ಫಿಟ್​ ಡ್ರೆಸ್​ ಧರಿಸಿ ​ನಿಸಾ ದೇವಗನ್​ ಕಾಣಿಸಿಕೊಂಡಿದ್ದಾರೆ. ಸ್ನೇಹಿತನ ಜೊತೆ ಕೈ ಹಿಡಿದು ನಡೆಯುತ್ತಿರುವ ಅವರ ವಿಡಿಯೋ ವೈರಲ್​ ಆಗಿದೆ.

Nysa Devgan: ಬೋಲ್ಡ್​ ಬಟ್ಟೆ ಧರಿಸಿ ಟ್ರೋಲ್​ ಆದ ಅಜಯ್​ ದೇವಗನ್​-ಕಾಜೋಲ್​ ದಂಪತಿ ಮಗಳು ನಿಸಾ
ನಿಸಾ ದೇವಗನ್, ಅವತ್ರಮಣಿ
Follow us
TV9 Web
| Updated By: ಮದನ್​ ಕುಮಾರ್​

Updated on: Dec 26, 2022 | 8:40 PM

ಬಾಲಿವುಡ್​ನಲ್ಲಿ ನೆಪೋಟಿಸಂ ಆಳವಾಗಿ ಬೇರು ಬಿಟ್ಟಿದೆ. ಅದು ತಪ್ಪೋ-ಸರಿಯೋ ಎಂಬ ವಾದ ನಡೆಯುತ್ತಲೇ ಇದೆ. ಅದರ ನಡುವೆಯೂ ಸ್ಟಾರ್​ ಸೆಲೆಬ್ರಿಟಿಗಳ ಮಕ್ಕಳು ಸಖತ್​ ಸದ್ದು ಮಾಡುತ್ತಿದ್ದಾರೆ. ಹೊಸ ತಲೆಮಾರಿನ ಸ್ಟಾರ್​ ಕಿಡ್​ಗಳ ಎಂಟ್ರಿಗೆ ಭಾರಿ ತಯಾರಿ ನಡೆಯುತ್ತಿದೆ. ಆ ಪೈಕಿ ಅಜಯ್​ ದೇವಗನ್​ (Ajay Devgn) ಮತ್ತು ಕಾಜೋಲ್​ ದಂಪತಿಯ ಮಗಳು ನಿಸಾ ದೇವಗನ್​ ಬಗ್ಗೆ ಹೆಚ್ಚು ಸುದ್ದಿ ಆಗುತ್ತಿದೆ. ನಿಸಾ ದೇವಗನ್​ (Nysa Devgan) ಇನ್ನೂ ಯಾವುದೇ ಸಿನಿಮಾ ಮಾಡಿಲ್ಲ. ಹಾಗಿದ್ದರೂ ಕೂಡ ಅವರ ಹಿಂದೆ ಪಾಪರಾಜಿಗಳು ಬಿದ್ದಿದ್ದಾರೆ. ಅವರು ಎಲ್ಲೇ ಕಾಣಿಸಿಕೊಂಡರು ಫೋಟೋ ಕ್ಲಿಕ್ಕಿಸುವ ಸಲುವಾಗಿ ಕ್ಯಾಮೆರಾಗಳು ಮುತ್ತಿಕೊಳ್ಳುತ್ತಿವೆ. ಇತ್ತೀಚೆಗೆ ನಿಸಾ ದೇವಗನ್​ ಟ್ರೋಲ್​ (Nysa Devgan Troll) ಆಗಿದ್ದಾರೆ. ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದಕ್ಕಾಗಿ ನೆಟ್ಟಿಗರು ಕಟು ಟೀಕೆ ಮಾಡುತ್ತಿದ್ದಾರೆ.

ಒಂದೆಡೆ ಕ್ರಿಸ್​ ಮಸ್​, ಇನ್ನೊಂದೆಡೆ ವರ್ಷಾಂತ್ಯದ ಪಾರ್ಟಿ ಜೊತೆಯಾಗಿ ಬಂದಿದೆ. ಈ ಪಾರ್ಟಿಗಳಲ್ಲಿ ಸೆಲೆಬ್ರಿಟಿಗಳ ಮಕ್ಕಳು ಸಖತ್​ ಎಂಜಾಯ್​ ಮಾಡುತ್ತಿದ್ದಾರೆ. ನಿಸಾ ದೇವಗನ್​ ಕೂಡ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಸ್ನೇಹಿತರ ಜೊತೆ ಸೇರಿ ಅವರು ಕ್ರಿಸ್​ ಮಸ್​ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಅವರು ಧರಿಸಿದ್ದ ಡ್ರೆಸ್​ ಹೆಚ್ಚು ಹೈಲೈಟ್​ ಆಗಿದೆ.

ಇದನ್ನೂ ಓದಿ
Image
Kajol: ಮದುವೆ ಬಳಿಕ 2 ತಿಂಗಳಲ್ಲಿ 8 ಕೆಜಿ ತೂಕ ಜಾಸ್ತಿ ಆಗಿದ್ದಕ್ಕೆ ಅಸಲಿ ಕಾರಣ ತಿಳಿಸಿದ ಕಾಜೋಲ್​
Image
Kajol: ಮಾಸ್ಕ್​ ತೆಗೆಯಬೇಕು ಎಂದು ಜಯಾ ಬಚ್ಚನ್​ಗೆ ಒತ್ತಾಯ ಮಾಡಿದ ಕಾಜೋಲ್​; ನೆಟ್ಟಿಗರ​ ಪ್ರತಿಕ್ರಿಯೆ ಏನು?
Image
ಶಾರುಖ್ ಖಾನ್ ಹಾಗೂ ಅಜಯ್​ ದೇವಗನ್ ಪತ್ನಿ ಕಾಜೋಲ್ ಬಗ್ಗೆ ಹಬ್ಬಿತು ವದಂತಿ; ಇದು ಯಾರ ಕಿತಾಪತಿ?
Image
‘ಅಜಯ್​ ದೇವಗನ್​ ಹೇಳಿದ್ರಲ್ಲಿ ತಪ್ಪಿಲ್ಲ, ಆದ್ರೆ ಸಂಸ್ಕೃತ ರಾಷ್ಟ್ರ ಭಾಷೆ ಆಗಲಿ’: ಕಂಗನಾ ಹೊಸ ಟ್ವಿಸ್ಟ್​

ಇದನ್ನೂ ಓದಿ: ‘ಚಿತ್ರರಂಗದಲ್ಲಿ ನೆಪೋಟಿಸಂಗಿಂತಲೂ ಈ ಸಮಸ್ಯೆ ಬಹಳ ಅಪಾಯಕಾರಿ’; ಮುಕ್ತವಾಗಿ ಹೇಳಿಕೊಂಡ ನವಾಜುದ್ದೀನ್ ಸಿದ್ದಿಕಿ

ಡೀಪ್​ ನೆಕ್​ ಇರುವಂತಹ ಗುಲಾಬಿ ಬಣ್ಣದ​ ಬಾಡಿ ಫಿಟ್​ ಡ್ರೆಸ್​ ಧರಿಸಿ ​ನಿಸಾ ದೇವಗನ್​ ಕಾಣಿಸಿಕೊಂಡಿದ್ದಾರೆ. ಸ್ನೇಹಿತ ಅವತ್ರಮಣಿ ಜೊತೆ ಕೈ ಹಿಡಿದು ನಡೆಯುತ್ತಿರುವ ಅವರ ವಿಡಿಯೋ ವೈರಲ್​ ಆಗಿದೆ. ಇದನ್ನು ನೋಡಿ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ‘ಅಪ್ಪ-ಅಮ್ಮ ಕಷ್ಟಪಟ್ಟು ಬದುಕು ಕಟ್ಟಿಕೊಂಡಿದ್ದಾರೆ. ಇಂಥ ಮಕ್ಕಳು 15 ನಿಮಿಷದಲ್ಲಿ ಎಲ್ಲವನ್ನೂ ಹಾಳು ಮಾಡ್ತಾರೆ’ ಎಂದು ನೆಟ್ಟಿಗರೊಬ್ಬರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: Kajol: ಮದುವೆ ಬಳಿಕ 2 ತಿಂಗಳಲ್ಲಿ 8 ಕೆಜಿ ತೂಕ ಜಾಸ್ತಿ ಆಗಿದ್ದಕ್ಕೆ ಅಸಲಿ ಕಾರಣ ತಿಳಿಸಿದ ಕಾಜೋಲ್​

‘ಈ ಹುಡುಗಿಯನ್ನು ನೋಡಿದರೆ ನನಗೆ ಬೇಜಾರಾಗುತ್ತಿದೆ. ಆಕೆ ಗೊಂದಲದಲ್ಲಿ ಇರುವಂತೆ ಕಾಣುತ್ತಿದ್ದಾಳೆ. ತನಗೆ ಏನು ಬೇಕು ಎಂಬುದು ಆಕೆಗೆ ತಿಳಿದಿಲ್ಲ. ಅದರ ಜೊತೆ ಅಸಭ್ಯ ಡ್ರೆಸ್​ ಬೇರೆ. ಕೆಟ್ಟ ಹುಡುಗನ ಜೊತೆ ಇದ್ದಾಳೆ. ಮಗಳ ಬಗ್ಗೆ ಆಕೆಯ ತಾಯಿ ಸ್ವಲ್ಪ ಗಮನ ಹರಿಸಬೇಕು’ ಎಂಬ ಕಮೆಂಟ್​ ಕೂಡ ಬಂದಿದೆ.

ನಿಸಾ ಕಪೂರ್​ ಜೊತೆ ಇಬ್ರಾಹಿಂ ಅಲಿ ಖಾನ್​, ಖುಷಿ ಕಪೂರ್​, ಅವರ್ತಮಣಿ, ಮಹಿಕಾ ರಾಮ್​ಪಾಲ್​ ಮುಂತಾದ ಸ್ಟಾರ್​ ಕಿಡ್​ಗಳು ಕಾಣಿಸಿಕೊಂಡಿದ್ದಾರೆ. ನಿಸಾ ಅವರ ಚರ್ಮದ ಬಣ್ಣದ ಬಗ್ಗೆಯೂ ಅನೇಕರು ಟ್ರೋಲ್​ ಮಾಡಿದ್ದಾರೆ. ‘ಈಕೆ ಇಷ್ಟು ಬೆಳ್ಳಗೆ ಯಾವಾಗ ಆದಳು’ ಎಂದು ಅನೇಕರು ಅಚ್ಚರಿಯಿಂದ ಪ್ರಶ್ನೆ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ