Kajol: ಮದುವೆ ಬಳಿಕ 2 ತಿಂಗಳಲ್ಲಿ 8 ಕೆಜಿ ತೂಕ ಜಾಸ್ತಿ ಆಗಿದ್ದಕ್ಕೆ ಅಸಲಿ ಕಾರಣ ತಿಳಿಸಿದ ಕಾಜೋಲ್​

Kajol | Salaam Venky: 1999ರ ಫೆಬ್ರವರಿ 24ರಂದು ಕಾಜೋಲ್​ ಮತ್ತು ಅಜಯ್​ ದೇವಗನ್​ ಅವರ ಮದುವೆ ಆಯಿತು. ಮದುವೆ ಬಳಿಕ ಕೇವಲ 2 ತಿಂಗಳಲ್ಲಿ 8 ಕೆಜಿ ದೇಹದ ತೂಕ ಹೆಚ್ಚಾಗಿದ್ದರ ಬಗ್ಗೆ ಕಾಜೋಲ್​ ಈಗ ಮಾತಾಡಿದ್ದಾರೆ.

Kajol: ಮದುವೆ ಬಳಿಕ 2 ತಿಂಗಳಲ್ಲಿ 8 ಕೆಜಿ ತೂಕ ಜಾಸ್ತಿ ಆಗಿದ್ದಕ್ಕೆ ಅಸಲಿ ಕಾರಣ ತಿಳಿಸಿದ ಕಾಜೋಲ್​
ಕಾಜೋಲ್
Follow us
TV9 Web
| Updated By: ಮದನ್​ ಕುಮಾರ್​

Updated on: Dec 07, 2022 | 1:31 PM

ಮದುವೆ ನಂತರ ನಟಿಯರ ಬದುಕು ಬದಲಾಗುತ್ತದೆ. ಆದ್ಯತೆಗಳು, ಆಯ್ಕೆಗಳ ಜೊತೆಗೆ ದಿನಚರಿ ಕೂಡ ಚೇಂಜ್​ ಆಗುತ್ತದೆ. ತಮ್ಮ ಬದುಕಿನಲ್ಲಿ ಆದ ಬದಲಾವಣೆ ಕುರಿತು ನಟಿ ಕಾಜೋಲ್ (Kajol)​ ಅವರು ಈಗ ಹೇಳಿಕೊಂಡಿದ್ದಾರೆ. ಮದುವೆ ನಂತರವೂ ಅವರು ಸಿನಿಮಾಗಳಿಂದ ದೂರ ಉಳಿಯಲಿಲ್ಲ. ಇಂದಿಗೂ ಕಾಜೋಲ್​ ಬೇಡಿಕೆ ಉಳಿಸಿಕೊಂಡಿದ್ದಾರೆ. ವಯಸ್ಸಿಗೆ ಒಪ್ಪುವಂತಹ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾ ಇದ್ದಾರೆ. ಅಲ್ಲದೇ, ಪತಿ ಅಜಯ್​ ದೇವಗನ್​ ಅವರ ವೃತ್ತಿಜೀವನಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಅಜಯ್​ ದೇವಗನ್​ (Ajay Devgn) ಜೊತೆ ಮದುವೆ ಆದ ನಂತರದ ಎರಡು ತಿಂಗಳಲ್ಲಿ ಕಾಜೋಲ್​ ಅವರ ದೇಹದ ತೂಕ ಬರೋಬ್ಬರಿ 8 ಕೆಜಿ ಹೆಚ್ಚಾಗಿತ್ತು. ಅದಕ್ಕೆ ಕಾರಣ ಏನು ಎಂಬುದನ್ನು ಅವರೀಗ ವಿವರಿಸಿದ್ದಾರೆ.

1999ರ ಫೆಬ್ರವರಿ 24ರಂದು ಕಾಜೋಲ್​ ಮತ್ತು ಅಜಯ್​ ದೇವಗನ್​ ಅವರ ಮದುವೆ ಆಯಿತು. ತುಂಬ ಸರಳವಾಗಿ ವಿವಾಹ ಸಮಾರಂಭ ನಡೆಯಿತು. ಮದುವೆ ಬಳಿಕ ಕಾಜೋಲ್​ ಅವರ ಆಹಾರ ಪದ್ಧತಿ ಬದಲಾಯಿತು. ಪ್ರತಿ ದಿನ ಅವರು ಬಗೆಬಗೆಯ ಪರೋಟ ತಿನ್ನಲು ಶುರು ಮಾಡಿದರು. 2 ತಿಂಗಳಲ್ಲಿ 8 ಕೆಜಿ ದೇಹದ ತೂಕ ಹೆಚ್ಚಾಗಲು ಅದೇ ಕಾರಣ ಎಂದು ಕಾಜೋಲ್​ ಹೇಳಿದ್ದಾರೆ.

‘ಪ್ರತಿ ದಿನ ನಮ್ಮ ಡೈನಿಂಗ್​ ಟೇಬಲ್​ ಮೇಲೆ ಬಗೆಬಗೆಯ ಪರೋಟ ಇರುತ್ತಿತ್ತು. ಗೋಬಿ ಪರೋಟ, ಪನೀರ್​ ಪರೋಟ, ಆಲು ಪರೋಟ. ಅದರ ಜೊತೆಗೆ ಬೆಣ್ಣೆ ಕೂಡ ಇರುತ್ತಿತ್ತು. ಆ ಸಮಯದಲ್ಲಿ ಹೇಗೆ ಡಯೆಟ್​ ಮಾಡಬೇಕು ಎಂಬುದು ಸಹ ನನಗೆ ತಿಳಿದಿರಲಿಲ್ಲ’ ಎಂದು ಕಾಜೋಲ್​ ಹೇಳಿದ್ದಾರೆ. ಆಹಾರಪ್ರಿಯೆ ಆಗಿರುವ ಅವರು ಮನೆಯಲ್ಲಿ ಈಗಲೂ ಬಗೆಬಗೆಯ ಅಡುಗೆ ಮಾಡುತ್ತಾರೆ.

ಇದನ್ನೂ ಓದಿ
Image
Kajol: ಮಾಸ್ಕ್​ ತೆಗೆಯಬೇಕು ಎಂದು ಜಯಾ ಬಚ್ಚನ್​ಗೆ ಒತ್ತಾಯ ಮಾಡಿದ ಕಾಜೋಲ್​; ನೆಟ್ಟಿಗರ​ ಪ್ರತಿಕ್ರಿಯೆ ಏನು?
Image
Kajol: ಒಟಿಟಿ ಎಂಟ್ರಿ ಬಗ್ಗೆ ಕಡೆಗೂ ನಿಜ ಒಪ್ಪಿಕೊಂಡ ನಟಿ ಕಾಜೋಲ್​; ಹೆಚ್ಚಿತು ಫ್ಯಾನ್ಸ್​ ನಿರೀಕ್ಷೆ
Image
ಆಸ್ಕರ್ ಸಮಿತಿಯಲ್ಲಿ ಭಾರತದ ಇಬ್ಬರಿಗೆ ಸ್ಥಾನ; ಸೂರ್ಯ, ಕಾಜೋಲ್​ಗೆ ಸಿಕ್ತು ವಿಶೇಷ ಗೌರವ
Image
ಈ ಕೆಟ್ಟ ಚಟ ಬಿಡೋಕೆ ತುಂಬಾನೇ ಪ್ರಯತ್ನಿಸುತ್ತಿದ್ದಾರೆ ನಟಿ ಕಾಜೋಲ್​

ಇದನ್ನೂ ಓದಿ: Kajol: ಮಾಸ್ಕ್​ ತೆಗೆಯಬೇಕು ಎಂದು ಜಯಾ ಬಚ್ಚನ್​ಗೆ ಒತ್ತಾಯ ಮಾಡಿದ ಕಾಜೋಲ್​; ನೆಟ್ಟಿಗರ​ ಪ್ರತಿಕ್ರಿಯೆ ಏನು?

ಸಿನಿಮಾಗಳ ಆಯ್ಕೆಯಲ್ಲಿ ಕಾಜೋಲ್​ ಅವರು ತುಂಬ ಚ್ಯೂಸಿ ಆಗಿದ್ದಾರೆ. ತಮಗೆ ಇಷ್ಟ ಆಗುವಂತಹ ಸ್ಕ್ರಿಪ್ಟ್​ಗಳನ್ನು ಮಾತ್ರ ಅವರು ಒಪ್ಪಿಕೊಳ್ಳುತ್ತಿದ್ದಾರೆ. ಅವರನ್ನು ಮತ್ತೆ ಮತ್ತೆ ಪರದೆ ಮೇಲೆ ನೋಡಲು ಅಭಿಮಾನಿಗಳು ಬಯಸುತ್ತಿದ್ದಾರೆ. ಕಾಜೋಲ್​ ನಟಿಸಿರುವ ಹೊಸ ಸಿನಿಮಾ ‘ಸಲಾಂ ವೆಂಕಿ’ ಈ ವಾರ (ಡಿ.9) ಬಿಡುಗಡೆ ಆಗುತ್ತಿದೆ.

ಇದನ್ನೂ ಓದಿ: Kajol: ಒಟಿಟಿ ಜಗತ್ತಿಗೆ ನಟಿ ಕಾಜೋಲ್​ ಎಂಟ್ರಿ; ಪ್ರತಿ ಎಪಿಸೋಡ್​ಗೆ ಪಡೆಯುವ ಸಂಭಾವನೆ ಇಷ್ಟೊಂದಾ?

‘ಸಲಾಂ ವೆಂಕಿ’ ಚಿತ್ರಕ್ಕೆ ರೇವತಿ ನಿರ್ದೇಶನ ಮಾಡಿದ್ದಾರೆ. ಕಾಜೋಲ್​ ಜೊತೆ ವಿಶಾಲ್​ ಜೇತ್ವಾ ನಟಿಸಿದ್ದಾರೆ. ವ್ಹೀಲ್​ ಚೇರ್​ನಲ್ಲಿ ಇರುವ ಮಗನಿಗಾಗಿ ಕಷ್ಟಪಡುವ ತಾಯಿಯ ಪಾತ್ರವನ್ನು ಕಾಜೋಲ್​ ಮಾಡಿದ್ದಾರೆ. ಆಮಿರ್ ಖಾನ್​ ಅವರು ಅತಿಥಿ ಪಾತ್ರದಲ್ಲಿ ನಟಿಸಿರುವುದು ವಿಶೇಷ. ಚಿತ್ರದ ಟ್ರೇಲರ್​ ನೋಡಿದ ಸಿನಿಪ್ರಿಯರು ಮೆಚ್ಚಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ