Shilpa Shetty Kundra: ತಮ್ಮ ಬಟ್ಟೆಯಿಂದ ಟ್ರೋಲ್​ಗೆ ಗುರಿಯಾದ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ: ಇದು ಉರ್ಫಿ ಜಾವೇದ್ ಪ್ರಭಾವ ಎಂದ ನೆಟ್ಟಿಗರು   

ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಅವರು ಇತ್ತೀಚೆಗೆ ಧರಿಸಿದ್ದ ಬಟ್ಟೆಯಿಂದ ಟ್ರೋಲ್​ಗೆ ಒಳಗಾಗಿದ್ದಾರೆ. ಇದು ಉರ್ಫಿ ಜಾವೇದ್​ ಅವರಿಂದ ಸ್ಪೂರ್ತಿ ಪಡೆದ್ರಾ ಎನ್ನಲಾಗುತ್ತಿದೆ.

Shilpa Shetty Kundra: ತಮ್ಮ ಬಟ್ಟೆಯಿಂದ ಟ್ರೋಲ್​ಗೆ ಗುರಿಯಾದ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ: ಇದು ಉರ್ಫಿ ಜಾವೇದ್ ಪ್ರಭಾವ ಎಂದ ನೆಟ್ಟಿಗರು   
Shilpa Shetty
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Dec 07, 2022 | 8:31 PM

ಬಾಲಿವುಡ್​ನ ಖ್ಯಾತ ಫ್ಯಾಷನ್ ಡಿಸೈನರ್​ ಆಗಿರುವ ಮನೀಶ್ ಮಲ್ಹೋತ್ರಾ (Manish Malhotra) ಅವರು ಸೋಮವಾರ (ಡಿ.5) ತಮ್ಮ 56ನೇ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿಕೊಂಡಿದ್ದಾರೆ. ಬಿ-ಟೌನ್​ನ ದೊಡ್ಡ ದೊಡ್ಡ ಸ್ಟಾರ್​ಗಳಿಗೆ ಇವರು ಡಿಸೈನರ್ ಆಗಿದ್ದು, ಹಾಗಾಗಿ ಇವರ ಬರ್ತ್​​ ಡೇಗೆ ಇಡೀ ಬಾಲಿವುಡ್​​ ಮಂದಿ ಆಗಮಿಸಿ ಶುಭಕೋರಿದ್ದಾರೆ. ನಟಿ ಕರೀನಾ ಕಪೂರ್ ಖಾನ್‌ನಿಂದ ಹಿಡಿದು ನಟಿ ಶಿಲ್ಪಾ ಶೆಟ್ಟಿ (Shilpa Shetty) ಕುಂದ್ರಾವರೆಗೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಪಾರ್ಟಿಯಲ್ಲಿ ಭಾಗವಹಿಸಿದ್ದರು. ಮಲ್ಹೋತ್ರಾ ಅವರ ಹುಟ್ಟುಹಬ್ಬದ ಪಾರ್ಟಿಗೆಂದು ಬಿ-ಟೌನ್‌ ಸ್ಟಾರ್​ಗಳು ಮಸ್ತ್​ಮಸ್ತ್​​ ಆಗಿ ತಮ್ಮ ಅತ್ಯುತ್ತಮ ಉಡುಗೆಯನ್ನು ತೊಟ್ಟು ಬಂದಿದ್ದರು. ಆದಾಗ್ಯೂ, ಕೆಲವರು ನೆಟ್ಟಿಗರ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ. ಅದರಲ್ಲಿ ಶಿಲ್ಪಾ ಶೆಟ್ಟಿ ಕುಂದ್ರಾ ಕೂಡ ಒಬ್ಬರು. ತಮ್ಮ ಬಟ್ಟೆಯಿಂದಾಗಿ ನಟಿ ಟ್ರೋಲ್​ಗೆ ಒಳಗಾಗಿದ್ದು, ಉರ್ಫಿ ಜಾವೇದ್​ ಅವರಿಂದ ಸ್ಪೂರ್ತಿ ಪಡೆದಿದ್ದಾರೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

ಮನೀಶ್ ಮಲ್ಹೋತ್ರಾ ಅವರ ಬರ್ತ್​​ ಡೇ ಪಾರ್ಟಿಗೆ ಸಹೋದರಿಯರಾದ ಶಿಲ್ಪಾ ಮತ್ತು ಶಮಿತಾ ಶೆಟ್ಟಿ ಇಬ್ಬರೂ ಭಾಗವಹಿಸಿದ್ದರು. ಶಮಿತಾ ಶೆಟ್ಟಿ ಕಪ್ಪು ಬಣ್ಣದ ಟಾಪ್ ಮತ್ತು ಲೆದರ್ ಸ್ಕರ್ಟ್​ನ್ನು ಧರಿಸಿದ್ದರೆ, ಶಿಲ್ಪಾ ಶೆಟ್ಟಿ ಎರಡು ಬದಿಯಲ್ಲಿ ಬೇರೆ ಬೇರೆ ವಿನ್ಯಾಸವಿರುವ ಜಿನ್ಸ್ (two- toned denims)​​​ ಮತ್ತು ಬಾಡಿಸೂಟ್ ಟಾಪ್ ಧರಿಸಿದ್ದರು. ಶಿಲ್ಪಾ ಶೆಟ್ಟಿ ಅವರ ಈ ಬಟ್ಟೆ ಬಿಕಿನಿ ಬಾಟಮ್ ವಿನ್ಯಾಸದಂತೆ ಕಾಣುತ್ತಿದೆ ಎನ್ನಲಾಗುತ್ತಿದೆ. ಹಾಗಾಗಿ ಅನೇಕರು ಇವರನ್ನು ಟ್ರೋಲ್​ ಮಾಡಿದ್ದಾರೆ. ಈ ಕುರಿತಾದ ಒಂದು ವಿಡಿಯೋ ವೈರಲ್​ ಆಗಿದೆ.

ಶಿಲ್ಪಾ ಶೆಟ್ಟಿ ಅವರ ಬಟ್ಟೆಗೆ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ಆಗಿದ್ದು, ಕೆಲವರು ಇವರು ಉರ್ಫಿ ಜಾವೇದ್ ಅವರಿಂದ ಸ್ಫೂರ್ತಿ ಪಡೆದಿದ್ದಾರೆ ಎಂದು ಹೇಳಿದ್ದಾರೆ. ನೆಟ್ಟಿಗರೊಬ್ಬರು ಕಮೆಂಟ್​ ಮಾಡಿದ್ದು, ‘ಇದು ಉರ್ಫಿ ಜಾವೇದ್​​ ಎಫೆಕ್ಟ್. ಈಗ  ಅವರು ಉರ್ಫಿ ಜಾವೇದ್‌ನನ್ನು ಸೋಲಿಸಲಿದ್ದಾರೆ’ ಎಂದು ಬರೆದುಕೊಂಡಿದ್ದಾರೆ. ‘ಇಂತಹ ವಿಚಿತ್ರ ಪ್ಯಾಂಟ್​ನ್ನು ಹಿಂದೆಂದೂ ನೋಡಿಲ್ಲ’ ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: Kajol: ಮದುವೆ ಬಳಿಕ 2 ತಿಂಗಳಲ್ಲಿ 8 ಕೆಜಿ ತೂಕ ಜಾಸ್ತಿ ಆಗಿದ್ದಕ್ಕೆ ಅಸಲಿ ಕಾರಣ ತಿಳಿಸಿದ ಕಾಜೋಲ್​

ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಅವರನ್ನು ಉರ್ಫಿ ಜಾವೇದ್​​ ಅವರಿಗೆ ಹೋಲಿಸುತ್ತಿರುವುದು ಇದೇ ಮೊದಲೇನಲ್ಲ. ಈ ಮುಂಚೆ ಶಿಲ್ಪಾ ಶೆಟ್ಟಿ ಅಭಿನಯದ ‘ನಿಕಮ್ಮ’ ಚಿತ್ರದ ಓಟಿಟಿ ಬಿಡುಗಡೆ ವೇಳೆಯೂ ಅವರು ಟ್ರೋಲ್​ಗೆ ಒಳಗಾಗಿದ್ದರು. ಆ ವೇಳೆ ಅವರು ಧರಿಸಿದ್ದ ಬಟ್ಟೆಯಿಂದ ಉರ್ಫಿ ಜಾವೇದ್​ರ ಪ್ರಭಾವಕ್ಕೆ ಒಳಗಾಗಿದ್ದಾರೆಂದು ನೆಟ್ಟಿಗರು ಆಡಿಕೊಂಡಿದ್ದರು. ಅನೇಕ ನಟ, ನಟಿಯರು ತಮ್ಮ ಚಿತ್ರ, ಬಟ್ಟೆ ಮತ್ತು ಹೇಳಿಕೆಗಳಿಂದ ಟ್ರೋಲ್​ಗೆ ಒಳಗಾಗುತ್ತಾರೆ. ಕೆಲವರು ಸ್ಪಷ್ಟನೆ ನೀಡಿದರೆ ಮತ್ತೆ ಕೆಲವರು ನಮಗೂ ಅದಕ್ಕೂ ಸಂಬಂಧವಿಲ್ಲ ಎನ್ನುವ ಹಾಗಿರುತ್ತಾರೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:26 pm, Wed, 7 December 22