ಕರೀನಾ ಕಪೂರ್​ಗೆ ಕೊರೋನಾ ಸೋಂಕು: ವಿಚಾರಣೆಗೆ ಕುಟುಂಬ ಸಹಕರಿಸುತ್ತಿಲ್ಲ ಎಂದು ಆರೋಪಿಸಿದ ಬಿಎಂಸಿ

| Updated By: Pavitra Bhat Jigalemane

Updated on: Dec 14, 2021 | 3:37 PM

ಕರೀನಾ ಸಂಪರ್ಕದಲ್ಲಿದ್ದವರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಇದೀಗ ಕರೀನಾ ಪತಿ ಸೈಫ್​ ಅಲಿ ಖಾನ್ ಕಳೆದ ಒಂದು ವಾರದಿಂದ ಮುಂಬೈನಲ್ಲಿ ಇಲ್ಲ ಅವರು ಎಲ್ಲಿದ್ದಾರೆ ಎಂದೂ ತಿಳಿದಿಲ್ಲ. ಈ ಬಗ್ಗೆ ಕರೀನಾ ಕುಟುಂಬ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ಬಿಎಂಸಿ ಆರೋಪಿಸಿದೆ.

ಕರೀನಾ ಕಪೂರ್​ಗೆ ಕೊರೋನಾ ಸೋಂಕು: ವಿಚಾರಣೆಗೆ ಕುಟುಂಬ ಸಹಕರಿಸುತ್ತಿಲ್ಲ ಎಂದು ಆರೋಪಿಸಿದ ಬಿಎಂಸಿ
ಕರೀನಾ ಕಪೂರ್​, ಸೈಫ್​ ಅಲಿ ಖಾನ್​
Follow us on

ಮುಂಬೈ: ಎರಡು ದಿನಗಳ ಹಿಂದೆ ಬಾಲಿವುಡ್​ ನಟಿ ಕರೀನಾ ಕಪೂರ್​ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನಲೆಯಲ್ಲಿ ಮುಂಬೈನಲ್ಲಿರುವ ಕರೀನಾ ಕಪೂರ್ ಮನೆಯನ್ನು ಬೃಹತ್ ಮುಂಬೈ ಮಹಾನಾಗರ ಪಾಲಿಕೆ ಸೀಲ್​ ಡೌನ್​ ಮಾಡಿ ಕರೀನಾ ಅವರನ್ನು ಐಸೋಲೇಷನ್​ಗೆ ಒಳಪಡಿಸಿತ್ತು. ಜತೆಗೆ ಕರೀನಾ ಸಂಪರ್ಕದಲ್ಲಿದ್ದವರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಇದೀಗ ಕರೀನಾ ಪತಿ ಸೈಫ್​ ಅಲಿ ಖಾನ್ ಕಳೆದ ಒಂದು ವಾರದಿಂದ ಮುಂಬೈನಲ್ಲಿ ಇಲ್ಲ ಅವರು ಎಲ್ಲಿದ್ದಾರೆ ಎಂದೂ ತಿಳಿದಿಲ್ಲ. ಈ ಬಗ್ಗೆ ಕರೀನಾ ಕುಟುಂಬ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ಬಿಎಂಸಿ ಆರೋಪಿಸಿದೆ.

ಪದೇ ಪದೇ ಸೈಫ್​ ಅಲಿ ಖಾನ್​ ಬಗ್ಗೆ ಕೇಳಿದರೂ ಕುಟುಂಬ ಸದಸ್ಯರು ಉತ್ತರಿಸುತ್ತಿಲ್ಲ. ಸೈಫ್​ ಅಲಿ ಖಾನ್​ ಎಲ್ಲಿದ್ದಾರೆ ಎನ್ನುವ ಬಗ್ಗೆಯೂ ಮಾಹಿತಿ ನೀಡುತ್ತಿಲ್ಲ ಎಂದು ಬಿಎಂಸಿ ಅಧಿಕಾರಿಗಳು ಆರೋಪಿಸಿದ್ದಾರೆ. ಈಗಾಗಲೇ ಕರೀನಾ ಕಪೂರ್​ ನಂತರ ಅವರ ಗೆಳತಿ ಅಮೃತಾ ಅರೋರಾ, ಮಹೀಪ್ ಕಪೂರ್​ ಮತ್ತು ಸೀಮಾ ಖಾನ್ ಗೆ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ ಸೋಂಕು ಇನ್ನಷ್ಟು ಮಂದಿಗೆ ಹರಡುವ ಆತಂಕ ಹೆಚ್ಚಾಗಿದೆ. ಹೀಗಾಗಿ ಅದನ್ನು ತಪ್ಪಿಸಲು ಬಿಎಂಸಿ ಕ್ರಮಕೈಗೊಳ್ಳುತ್ತಿದೆ. ಆದರೆ ಕರೀನಾ ಪ್ಯಾಮಿಲಿ ಅದಕ್ಕೆ ಸಹಕರಿಸುತ್ತಿಲ್ಲ ಎಂದು ಅಧಿಕಾರಿಗಳು ದೂರಿದ್ದಾರೆ. ಸದ್ಯ ಸೋಂಕು ದೃಢಪಟ್ಟ ಯಾರೂ ವಿದೇಶ ಪ್ರವಾಸ ಕೈಗೊಂಡಿಲ್ಲ. ಇನ್ನು ಕರೀನಾ ಸಂಪರ್ಕಿತರನ್ನು ಪತ್ತೆ ಮಾಡಿ ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದು ಬಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.

ಕರೀನಾ ಕಪೂರ್​ ಸೇರಿದಂತೆ ಹಲವು ಬಾಲಿವುಡ್​ ಸೆಲೆಬ್ರಿಟಿಗಳು ಕೆಲವು ದಿನಗಳ ಹಿಂದೆ ಕರಣ್​ ​ಜೋಹರ್​ ಕುಟುಂಬದ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಕೊರೋನಾ ನಿಯಮವನ್ನು ಗಾಳಿಗೆ ತೂರಿ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ. ಹೀಗಾಗಿ ಸೋಂಕಿತರ ಟ್ರಾವೆಲ್​ ಹಿಸ್ಟರಿಯನ್ನು ಅಧಿಕಾರಿಗಳು ಪತ್ತೆ ಮಾಡುತ್ತಿದ್ದಾರೆ.

ಇದನ್ನೂ ಓದಿ:

Kareena Kapoor: ಕರೀನಾಗೆ ಕೊರೊನಾ ಪಾಸಿಟಿವ್; ಜೇಹ್, ತೈಮೂರ್ ಆರೋಗ್ಯವಾಗಿದ್ದಾರಾ ಎಂಬ ಫ್ಯಾನ್ಸ್ ಪ್ರಶ್ನೆಗೆ ಸಿಕ್ತು ಉತ್ತರ